ಪೆಟ್ರೋಲ್’ ಬಾಂಬ್ : ಲೀ.ಗೆ ರೂ. 1.80ರಷ್ಟು ತುಟ್ಟಿ

ಹೊಸದಿಲ್ಲಿ, ನ.3: ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್‌ನ ಬೆಲೆಯನ್ನು ಲೀಟರ್‌ಗೆ ರೂ. 1.80ರಷ್ಟು ಹೆಚ್ಚಿಸಿವೆ. ಇಂದಿನ ಹೆಚ್ಚಳದೊಂದಿಗೆ ಪೆಟ್ರೋಲ್‌ನ ಬೆಲೆ ದಿಲ್ಲಿಯಲ್ಲಿ ಲೀ.ಗೆ ರೂ. 68.64ಕ್ಕೆ ಏರಲಿದೆ. ಇತರ ನಗರಗಳಲ್ಲಿ ಸ್ಥಳೀಯ ತೆರಿಗೆಗಳನ್ನು ಹೊಂದಿಕೊಂಡು ಬೆಲೆಯೇರಿಕೆಯಾಗಲಿದೆ. ಇದು ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಎರಡನೆ ಬಾರಿಗೆ ಮಾಡಿರುವ ಪೆಟ್ರೋಲ್ ದರ ಏರಿಕೆಯಾಗಿದೆ. ಅ.22ಕ್ಕೆ ಮುಕ್ತಾಯವಾದ ವಾರದಲ್ಲಿ ಹಣದುಬ್ಬರವು ಶೇ.12.21ರ ಅಪಾಯಕಾರಿ ಗಡಿ ತಲುಪಿದ ವೇಳೆಯೇ ಈ ತೈಲದರ ಹೆಚ್ಚಳದ ಬರೆ ಬಿದ್ದಿದೆ.
ಸೆ.16ರಂದು ಹಿಂದಿನ ಬಾರಿ ಪೆಟ್ರೋಲ್ ದರವನ್ನು ರೂ. 3.14ರಷ್ಟು ಏರಿಸಲಾಗಿತ್ತು.

Leave a Reply