fbpx

ಸೆ. 18 ರಿಂದ ಪುಸ್ತಕ ಸಂಸ್ಕೃತಿ ಯಾತ್ರೆ : ಮಾರಾಟ ಮೇಳ

 ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಸಾರಾಂಗವು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಘಟಕಗಳ ಸಹಯೋಗದಲ್ಲಿ ಕೊಪ್ಪಳ ಜಿಲ್ಲಾ ಪುಸ್ತಕ  ಸಂಸ್ಕೃತಿ ಯಾತ್ರೆಯನ್ನು ಸೆ.18 ರಿಂದ ಸೆ.21 ರವರೆಗೆ ಕೊಪ್ಪಳ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ಹಂಪಿ ಪ್ರಸಾರಾಂಗದಿಂದ ಪ್ರಕಟಣೆಯಾಗಿರುವ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.  
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕøತಿ, ಇತಿಹಾಸ, ಶಾಸನ, ಹಸ್ತಪ್ರತಿ, ವಿಜ್ಞಾನ, ಪುರಾತತ್ವ, ಮಹಿಳಾ ಅಧ್ಯಯನ, ಬುಡಕಟ್ಟು, ಜಾನಪದ, ಭಾಷಾಂತರ, ಶಾಸ್ತ್ರೀಯ ಭಾಷೆ, ಸಂಶೋಧನೆ, ವಿಮರ್ಶೆ, ಕಾವ್ಯ ಮೀಮಾಂಸೆ, ವ್ಯಾಕರಣ, ನಿಘಂಟು, ಪದಕೋಶ, ಅನುವಾದ, ಪ್ರಾಚೀನ ಕಾವ್ಯ, ನಾಡುನುಡಿ, ಆಚರಣೆ, ಸಂಗೀತ ಮತ್ತು ನೃತ್ಯ, ಪತ್ರಿಕೋದ್ಯಮ, ಶಿಕ್ಷಣ, ಸಂಚಾರ ಸಂಪರ್ಕ, ಸಮಾಜವಾದ, ಸಾರ್ವಜನಿಕ ಆಡಳಿತ ಮುಂತಾದ ಜ್ಞಾನ ಶಾಖೆಗಳಿಗೆ ಸಂಬಂಧಿಸಿದಂತೆ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದೆ.  ಅಲ್ಲದೆ ಇಂತಹ ಪುಸ್ತಕಗಳನ್ನು ಕನ್ನಡಿಗರಿಗೆ ತಲುಪಿಸುವ ಕೈಂಕರ್ಯದಲ್ಲಿ ಪ್ರಸಾರಾಂಗವು ನಿರಂತರವಾಗಿ ಶ್ರಮಿಸುತ್ತಿದೆ.  ಈ ಸಂಬಂಧ ಪುಸ್ತಕ ಸಂಸ್ಕøತಿ ಯಾತ್ರೆಯನ್ನು ನಾಡಿನಾದ್ಯಂತ ಹಮ್ಮಿಕೊಂಡಿದ್ದು, ಈ ಬಾರಿ ಕೊಪ್ಪಳ ಜಿಲ್ಲೆಯಲ್ಲಿಯೂ ಪುಸ್ತಕ ಸಂಸ್ಕøತಿ ಯಾತ್ರೆಯನ್ನು ಸೆ. 18 ರಿಂದ ಆಯೋಜಿಸಿದ್ದು, ಈ ಮೂಲಕ ಕನ್ನಡಿಗರಲ್ಲಿ ಕನ್ನಡ ಭಾಷಾ ಜಾಗೃತಿ ಮೂಡಿಸುವ, ಕನ್ನಡ ನಾಡು-ನುಡಿ- ಸಂಸ್ಕೃತಿಯನ್ನು ಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದೆ.  ಇದೇ ಸೆ.18 ರಂದು ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೆ.19 ರಂದು ಯಲಬುರ್ಗಾದ ಸರ್ಕಾರಿ ಪದವಿ ಪೂರ್ವ ಕಾಲೇಜು, ಸೆ.20 ರಂದು ಕುಷ್ಟಗಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸೆ.21 ರಂದು ಗಂಗಾವತಿಯ ಕನ್ನಡ ಸಾಹಿತ್ಯ ಭವನದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಏರ್ಪಡಿಸಲಾಗಿದೆ. ಈ ಪುಸ್ತಕ ಸಂಸ್ಕøತಿ ಯಾತ್ರೆಯ ಸಂದರ್ಭದಲ್ಲಿ ಪ್ರಸಾರಾಂಗದ ಪ್ರಕಟಣೆಗಳನ್ನು ಶೇ.25 ಮತ್ತು ಶೇ. 50 ರ ವಿಶೇಷ ರಿಯಾಯತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.  ಕನ್ನಡ ಪುಸ್ತಕಾಸಕ್ತರು ಈ ಮಾರಾಟ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಸಾರಾಂಗದ ಮಾರಾಟ ವಿಭಾಗ ಸಹಾಯಕ ನಿರ್ದೇಶಕ ಎಚ್.ಬಿ.ರವೀಂದ್ರ ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. 
Please follow and like us:
error

Leave a Reply

error: Content is protected !!