ಜ.15ಕ್ಕೆ ಹೊಸಪಕ್ಷ; ಶ್ರೀರಾಮುಲು ಘೋಷಣೆ

 ನಾಡಿನ ಹಿಂದುಳಿದ ವರ್ಗದ ಜನತೆಗೆ ಹೊಸ ವರ್ಷದ (ಸಂಕ್ರಾತಿ) ಕೊಡುಗೆಯಾಗಿ ಜ.15 ರಂದು ರಾಜ್ಯದಲ್ಲಿ ಹೊಸ ಪಕ್ಷ ಹುಟ್ಟು ಹಾಕಲಾಗುವುದು ಎಂದು ಘೋಷಿಸಿರುವ ‘ಸ್ವಾಭಿಮಾನಿ’ ಪಕ್ಷೇತರ ಶಾಸಕ ಬಿ. ಶ್ರೀರಾಮುಲು, ಆ ಹೊಸ ಪಕ್ಷ ನಾಡಿನ ಬಡವರ-ಶ್ರಮಿಕರ-ರೈತರ ಹಿತಕ್ಕಾಗಿ ದುಡಿಯಲಿದೆ ಎಂದು ಹೇಳಿದ್ದಾರೆ.ಹೊಸ ವರ್ಷದ ಜ.15ಕ್ಕೆ ರಾಜ್ಯ ರಾಜ ಕೀಯದಲ್ಲಿ ಭಾರೀ ಬದಲಾವಣೆ ಆಗಲಿದೆ ಎಂಬುದಕ್ಕೆ ಈಗಿನಿಂದಲೇ ಸ್ಪಷ್ಟ ಮುನ್ಸೂಚನೆ ಗಳು ಸಿಗುತ್ತಿವೆ. ಸಂಕ್ರಾಂತಿಯ ನಂತರ ತನಗೆ ಗಜಕೇಸರಿ ಯೋಗ ಇದೆ ಎಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವರಿಷ್ಠರಿಗೆ ಜ.15ರ ಗಡುವು ನೀಡಿರುವ ಬೆನ್ನಲ್ಲೇ ‘ಸ್ವಾಭಿಮಾನಿ’ ಶಾಸಕ ಬಿ.ಶ್ರೀರಾಮುಲು ಜ.15ರ ನಂತರ ಹೊಸ ಪಕ್ಷದ ಅಧಿಕೃತ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.ರೆಡ್ಡಿ ಸಹೋದರರ ತಾಯಿ ರುಕ್ಮಿಣಮ್ಮನವರ ಪುಣ್ಯತಿಥಿಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಹಿಂದುಳಿದ ವರ್ಗಗಳ ಹಿತದೃಷ್ಟಿಯಿಂದ ಹೊಸ ಪಕ್ಷ ಕಟ್ಟುವುದು ಖಚಿತ.
ಪಕ್ಷ ಸ್ಥಾಪನೆಯ ಪ್ರಾಥಮಿಕ ಪ್ರಕ್ರಿಯೆ ನಡೆದಿದ್ದು, ಜ.15ರ ನಂತರ ಅದಕ್ಕೆ ಅಂತಿಮ ರೂಪ ದೊರೆಯಲಿದೆ. ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಏಕ ಕಾಲಕ್ಕೆ ಪಕ್ಷದ ಕಚೇರಿ ಗಳನ್ನು ಸ್ಥಾಪಿಸುವ ಬಗ್ಗೆ ಚಿಂತನೆ ನಡೆದಿದೆ. ಈ ಸಂಬಂಧ ತಾನು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದೇನೆ ಎಂದು ಸ್ಪಷ್ಟಪಡಿಸಿದರು.ಯಾವುದೇ ಪಕ್ಷ ಅಥವಾ ವ್ಯಕ್ತಿಯ ಜೊತೆ ಹೊಂದಾಣಿಕೆ, ಮೈತ್ರಿ ಇಲ್ಲವೇ ಒಳ ಒಪ್ಪಂದ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನಾಡಿನ ಒಟ್ಟಾರೆ ಹಿತ ಮತ್ತು ಹಿಂದುಳಿದ ವರ್ಗಗಳ ಆಶಯಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಪಕ್ಷ ರಾಜ್ಯದ ಎಲ್ಲ 224 ವಿಧಾನ ಸಭಾ ಕ್ಷೇತ್ರಗಳು ಹಾಗೂ 28 ಲೋಕಸಭಾ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ಶೀಘ್ರ ಜೈಲಿನಿಂದ ಬಿಡುಗಡೆ ಆಗುವ ವಿಶ್ವಾಸವಿದ್ದು, ಅವರೊಂದಿಗೆ ಮಾತುಕತೆ ನಡೆಸಿ ಪಕ್ಷದ ರೂಪು-ರೇಖೆಗಳನ್ನು ಅಂತಿಮಗೊಳಿಸ ಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಸದೆ ಜೆ. ಶಾಂತಾ, ಜಿ.ಪಂ. ಅಧ್ಯಕ್ಷೆ ಅರುಣಾ ತಿಪ್ಪಾರೆಡ್ಡಿ, ಸದಸ್ಯ ಗೋನಾಳ್ ರಾಜಶೇಖರ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಹೊಸ ಪಕ್ಷದ ಬಗ್ಗೆ ಗೊತ್ತಿಲ್ಲ: ಕರುಣಾಕರ
ಬಳ್ಳಾರಿ: ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಬಿ.ಶ್ರೀರಾಮುಲು ನೇತೃತ್ವದಲ್ಲಿ ರಚನೆಯಾಗಲಿರುವ ನೂತನ ರಾಜಕೀಯ ಪಕ್ಷದ ಕುರಿತಂತೆ ತಮಗೇನೂ ಗೊತ್ತಿಲ್ಲ್ಲ ಎಂದು ಮಾಜಿ ಸಚಿವ ಕರುಣಾಕರ ರೆಡ್ಡಿ ಹೇಳಿದ್ದಾರೆ
Please follow and like us:
error