ಜೂ.15 ರಿಂದ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆ : ವೇಳಾಪಟ್ಟಿ ಪ್ರಕಟ

ಕೊಪ್ಪಳ, ಜೂ.12  ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಇದೇ ಜೂ.15 ರಿಂದ 22 ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯನ್ನು ಆಯೋಜಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ ತಿಳಿಸಿದ್ದಾರೆ.
         ಜೂ.15 ರಂದು ಗಣಿತ, ಜೂ.16 ರಂದು ಗಂಟೆಗೆ ಕನ್ನಡ, ಜೂ.17 ರಂದು ವಿಜ್ಞಾನ, ಜೂ.18 ರಂದು ಇಂಗ್ಲೀಷ್, ಜೂ.19 ರಂದು ಸಮಾಜ ವಿಜ್ಞಾನ ಹಾಗೂ ಜೂ.22 ರಂದು ಹಿಂದಿ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಈ ಬಾರಿಯ ಪೂರಕ ಪರೀಕ್ಷೆಯಲ್ಲಿ ಜಿಲ್ಲಾದ್ಯಂತ ಒಟ್ಟು 4076 ವಿದ್ಯಾರ್ಥಿಗಳು  ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯನ್ನು ಬರೆಯಲಿದ್ದಾರೆ. ಈ ಪೈಕಿ ಗಂಗಾವತಿಯಲ್ಲಿ 1396, ಕೊಪ್ಪಳದಲ್ಲಿ 1605, ಕುಷ್ಟಗಿಯಲ್ಲಿ 416 ಹಾಗೂ ಯಲಬುರ್ಗಾದಲ್ಲಿ 659 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 11 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಕೊಪ್ಪಳದಲ್ಲಿ 04, ಗಂಗಾವತಿಯಲ್ಲಿ 04, ಯಲಬುಬುರ್ಗಾದಲ್ಲಿ 02 ಹಾಗೂ ಕುಷ್ಟಗಿಯಲ್ಲಿ 01 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಪರೀಕ್ಷೆಗಳನ್ನು ಸುಗಮವಾಗಿ ಹಾಗೂ ಪಾರದರ್ಶಕವಾಗಿ ನಡೆಸಬೇಕಾದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ 144 ಕಲಂ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದ್ದು, ಯಾವುದೇ ಜೇರಾಕ್ಸ ಮುಂತಾದ ಅಂಗಡಿಗಳನ್ನು ನಿಷೇಧಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Leave a Reply