ಎಂಎಸ್ ಪಿಎಲ್ ಗೆ 123 ಕೋಟಿ ದಂಡ

ಕೊಪ್ಪಳ : ಅಕ್ರಮ ಮಣ್ಣು ಗಣಿಗಾರಿಕೆ ಆರೋಪದ ಮೇಲೆ ಎಂಎಸ್ ಪಿಎಲ್ ಕಂಪನಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ123 ಕೋಟಿ ದಂಡ ವಿಧಿಸಿದೆ. ಕೈಗಾರಿಕೆಗಾಗಿ ವಶಪಡಿಸಿಕೊಂಡ ಸರ್ವೆ ನಂ. 143ರಲ್ಲಿ ಕೆರೆ ಇದೆ. ಇದರ ಅಭಿವೃದ್ದಿ ಮಾಡುವುದಾಗಿ ಹೇಳಿದ್ದ ಕಂಪನಿ ಅಭಿವೃದ್ದಿಗೆ ಕೈಹಾಕದೆ 24782940 ಮೆಟ್ರಿಕ್ ಟನ್ ಮುರಂನ್ನು ಬೇರೆಡೆ ಸಾಗಿಸಿದೆ. ರೈಲ್ವೆ ಟ್ರಾಕ್ ನಿರ್ಮಿಸಲು ಬಳಕೆ ಮಾಡಲಾಗಿದೆ. ಕಾನೂನು ಪ್ರಕಾರ ದಂಡಾರ್ಹ ಅಪರಾಧ ಇದಕ್ಕಾಗಿ ಇಲಾಖೆ ದಂಡ ವಿಧಿಸಿದೆ. ಆದರೆ ಕಂಪನಿಯೂ ಸ್ಪಷ್ಟನೆ ನೀಡಿ ಕೆರೆ ಅಭಿವೃದ್ದಿಗೋಸ್ಕರವೇ ಮಣ್ಣನ್ನು ಅಲ್ಲಿಯೇ ಹತ್ತಿರದಲ್ಲಿ ಸ್ಥಳಾಂತರ ಮಾಡಲಾಗಿದೆ. ಇಲಾಖೆಯ ನೋಟಿಸ್ ಗೆ ಉತ್ತರ ನೀಡಲಾಗಿದೆ ಎಂದು ಹೇಳಿದೆ.
Please follow and like us:
error