115ನೇ ಬೆಳಕಿನೆಡೆಗೆ :ಡಿವೈಎಸ್ಪಿ ರುದ್ರೇಶ ಉಜ್ಜನಿಕೊಪ್ಪರಿಂದ ಭಾವ ಗೀತೆಗಳ ಗಾಯನ

ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಮಠದಲ್ಲಿ ದಿನಾಂಕ 05-02-2019 ರಂದು ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ ಜರುಗಿತು. ಮುಖ್ಯ ಆತಿಥಿಗಳಾಗಿ ಬಳ್ಳಾರಿಯ ರಾವ್ ಬಹದ್ದೂರ್ ಎಂಜನೀಯರ್ ಕಾಲೇಜಿನ ಪ್ರಾಧ್ಯಾಪಕ ಡಾ ಎ ತಿಮ್ಮನಗೌಡ ಮಾತಿನ ಮಹತ್ವ ತಿಳಿಸಿ ಉತ್ತಮ ಸಮಾಜದ ನಿರ್ಮಾಣ ಕಾರ್ಯದಲ್ಲಿ ಆರೋಗ್ಯಪೂರ್ಣ ಮಾತುಗಳ ಅವಶ್ಯಕತೆ ಇದೆ. ಈ ದಿಸೆಯಲ್ಲಿ ಶರಣರ ನುಡಿಮುತ್ತುಗಳು ದಾರಿ ದೀಪವಾಗಿವೆ ಎಂದರು. ಆರಂಭದಲ್ಲಿ ಬ್ರಷ್ಠಾಚಾರ ನಿರ್ಮೂಲನ ಘಟಕದ ಡಿ ವೈ ಎಸ್ ಪಿ ರುದ್ರೇಶ ಉಜ್ಜನಿಕೊಪ್ಪ ಇವರಿಂದ ಭಾವ ಗೀತೆಗಳಗಾಯನ ಕಾರ್ಯಕ್ರಮ ಜರುಗಿತು. ಕುಮಾರ ಸಮೃದ್ದ ಮಂಜುನಾಥ ವಾಗನಕೇರಿ ಇವರಿಂದ ಯಕ್ಷಗಾನ ಪ್ರದರ್ಶನ ಜರುಗಿತು. ಭಕ್ತಿ ಸೇವೆಯನ್ನು ನಿಜಗುಣೆಪ್ಪ ಶೆಟ್ಟರ ಹಾಗೂ ನಿರೂಪಣೆ ಗವಿಸಿದ್ದಪ್ಪ ಕೊಪ್ಪಳ ನೆರವೇರಿಸಿದರು

Please follow and like us:
error