ಕೊನೆ ದಿನ 11 ನಾಮಪತ್ರಗಳು

 ಮಾ. ೨೬ ರಂದು ೧೧ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
 ಕೊಪ್ಪಳ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಮಾ. ೨೬ ರಂದು ಬುಧವಾರ ಒಟ್ಟು ೧೧ ಅಭ್ಯರ್ಥಿಗಳು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಬುಧವಾರದಂದು ನಾಮಪತ್ರ ಸಲ್ಲಿಸಿದವರ ವಿವರ ಇಂತಿದೆ.  
ಗಂಗಾವತಿಯ ಹೆಚ್. ಆರ್ ಚನ್ನಕೇಶವ್- ಬಿಜೆಪಿ.  

ಬಳ್ಳಾರಿಯ ಡಿ. ದುರ್ಗಾಪ್ರಸಾದ್- ಪಕ್ಷೇತರ.  

ಗಂಗಾವತಿಯ ಜಿ. ಅಣ್ಣೋಜಿರಾವ್- ಪಕ್ಷೇತರ.  

ಬಳ್ಳಾರಿಯ ನಜೀರ್ ಹುಸೇನ್- ರಾಷ್ಟ್ರೀಯ ಕ್ರಾಂತಿಕಾರಿ ಸಮಾಜವಾದಿ ಪಕ್ಷ.  

ಗಂಗಾವತಿಯ ಮನೋಹರ- ಜನಹಿತ ಪಕ್ಷ.  

ಕೊಪ್ಪಳದ ಸಂಗಣ್ಣ ಕರಡಿ- ಬಿಜೆಪಿ.  

ಬಳ್ಳಾರಿ ಜಿಲ್ಲೆಯ ಪಿ. ಗೋವಿಂದರೆಡ್ಡಿ- ಪಕ್ಷೇತರ.  

ಕೊಪ್ಪಳದ ಡಿ.ಹೆಚ್. ಪೂಜಾರ್- ಸಿಪಿಐ(ಎಂಎಲ್) ರೆಡ್‌ಸ್ಟಾರ್.  

ಬೆಂಗಳೂರಿನ ನಾಗಪ್ಪ ಕಾರಟಗಿ- ಪಕ್ಷೇತರ.  

ಬಳ್ಳಾರಿ ಜಿಲ್ಲೆ ತೋರಣಗಲ್ಲಿನ ತಿಮ್ಮಪ್ಪ ಉಪ್ಪಾರ- ಬಿಎಜೆಪಿ.   

ಮುನಿರಾಬಾದ್ ಡ್ಯಾಂ ಸೈಯದ್ ಜಿಯಾವುದ್ದೀನ್ ಆರೀಫ್- ಬಹುಜನ ಸಮಾಜ ಪಕ್ಷದ 
ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.   ಕೊಪ್ಪಳ ಲೋಕಸಭಾ ಚುನಾವಣೆಗಾಗಿ ಇದುವರೆಗೂ ಒಟ್ಟು ೨೦ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದಂತಾಗಿದೆ. 

Leave a Reply