You are here
Home > Koppal News > ಕವಿಸಮಯ 100

ಕವಿಸಮಯ 100

ಕಳೆದ 99 ವಾರಗಳಿಂದ ನಿರಂತರವಾಗಿ ಪ್ರತಿ ರವಿವಾರ ಕೊಪ್ಪಳದ ಪ್ರವಾಸಿ ಮಂದಿರ,ನೌಕರರ ಭವನದಲ್ಲಿ ನಡೆದುಕೊಂಡು ಬಂದಿದ್ದ ಕವಿಸಮಯ ಕಾರ್ಯಕ್ರಮ ದಿ.8-4-2012ರಂದು ತನ್ನ 100ನೇ ಕಾರ್ಯಕ್ರಮ ಹಮ್ಮಿಕೊಂಡಿದೆ. ಕೊಪ್ಪಳದ ಕನ್ನಡನೆಟ್ ಡಾಟ್ ಕಾಂ ಕವಿಸಮೂಹದಿಂದ ಹಮ್ಮಿಕೊಳ್ಳಲಾಗುತ್ತಿರುವ ಈ ಕಾರ್ಯಕ್ರಮದಲ್ಲಿ  ಕಾವ್ಯವಾಚನ,ಕಥಾವಾಚನ, ಚರ್ಚೆ, ವಿಮರ್ಶೆ,ಸಂವಾದಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
 ಈ ಕಾರ್ಯಕ್ರಮದ ವಿಶೇಷತೆಯೆಂದರೆ ಸಮಾನ ಮನಸ್ಕ ಸಾಹಿತ್ಯಾಸಕ್ತರೆಲ್ಲ ಒಂದೆಡೆ ಕಲೆತು ಯಾವುದೇ ಹಾರ ತುರಾಯಿಗಳಿಲ್ಲದೇ   ಸರಳವಾಗಿ ನೆಲದ ಮೇಲೆ ಕುಳಿತು ಕವನ ವಾಚನ, ಕಥಾವಾಚನ ಮಾಡುವುದು.  ಈ ಕಾರ್ಯಕ್ರಮಗಳಲ್ಲಿ ಹಿರಿ ಕಿರಿಯರೆನ್ನದೆ ಎಲ್ಲರೂ ಭಾಗವಹಿಸುತ್ತಾರೆ. ಹಿರಿಯ ಸಾಹಿತಿಗಳು ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಾರೆ. ಬೇರೆ ಬೇರೆ ಊರುಗಳಿಂದ ಸಾಹಿತಿಗಳು ಭಾಗವಹಿಸಿ ಮಾತನಾಡಿದ್ದಾರೆ. ಡಾ.ರಹಮತ್ ತರಿಕೇರಿಯವರು 43ನೇ ಕವಿಸಮಯದಲ್ಲಿ ಭಾಗವಹಿಸಿ ಪುಸ್ತಕಗಳ ಬಿಡುಗಡೆ ಮಾಡಿದ್ದರು. ಅದೇ ರೀತಿ ಅಕ್ಕ ಪಕ್ಕದ ಜಿಲ್ಲೆಗಳಿಂದ ಸಾಹಿತಿಗಳು ಭಾಗವಹಿಸಿದ್ದಾರೆ. ಸೂರ್ಯಕಾಂತ ಗುಣಕಿಮಠ, ಬಸವರಾಜ್ ಸೂಳಿಬಾವಿ, ಹರಿನಾಥ ಬಾಬು,ಡಾ.ಜಾಜಿ ದೇವೆಂದ್ರಪ್ಪ, ಬಿ.ಪೀರ್ ಬಾಷಾ, ಸಿದ್ದು ಯಾಪಲಪರವಿ, ಎ.ಎಸ್.ಮಕಾನದಾರ್, ಎ.ಎಂ.ಮದರಿ, ಅಲ್ಲಮಪ್ರಭು ಬೆಟ್ಟದೂರು, ವಿಠ್ಠಪ್ಪ ಗೋರಂಟ್ಲಿ, ಪ್ರಮೋದ ತುರ್ವಿಹಾಳ, ಭೋಜರಾಜ ಸೊಪ್ಪಿಮಠ, ಅಕ್ಬರ್ ಕಾಲಿಮಿರ್ಚಿ, ಎಚ್.ಎಸ್.ಪಾಟೀಲ್   ಹೀಗೆ ಹತ್ತಾರು ಸಾಹಿತಿಗಳು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 
 ಇದೇ ರವಿವಾರದಂದು  ಕವಿಸಮೂಹ 100ನೇ ಕಾರ್ಯಕ್ರಮ ಹಮ್ಮಿಕೊಂಡಿದೆ.  ಈ ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿ, ಪುಸ್ತಕಗಳ ಬಿಡುಗಡೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಹಮ್ಮಿಕೊಂಡಿದ್ದೇವೆ. ಇದರಲ್ಲಿ ವೀರಣ್ಣ ಮಡಿವಾಳರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಬನ್ನಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ…..

Leave a Reply

Top