10 ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಪ್ರೊ. ಟಿ. ವಿ. ಕಟ್ಟೀಮನಿ

ಸರ್ವಾನು ಮತದಿಂದ ಆಯ್ಕೆ
ಕೊಪ್ಪಳ: ಮಾರ್ಚ 20 ಮತ್ತು 21 ಅಳವಂಡಿಯಲ್ಲಿ ನೆಡೆಯುವ 10 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶ್ರೀಯುತ ಪ್ರೊ. ಟಿ.ವಿ.ಕಟ್ಟೀಮನಿ,ರವರನ್ನು ಕಸಾಪ ಕಾರ್ಯಕಾರಿ ಮಂಡಳಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಶನಿವಾರ ಮಧ್ಯಾಹ್ನ 02 ಘಂಟೆಗೆ ಜಿಲ್ಲಾ ಸಹಕಾರ ಯೂನಿಯನ್ ಸಭಾಭವನದಲ್ಲಿ ಜರುಗಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಅವಿರೋಧವಾಗಿ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲೆಗೆ ಸಾಹಿತ್ಯಿಕ ಕೊಡುಗೆ ನೀಡಿದ ಸಾಹಿತಿಗಳಾದ ಶರಣಪ್ಪ ಮೇಟ್ರಿ, ಉದಯಶಂಕರ ಪುರಾಣಿಕ, ಡಾ|| ವಿ.ಬಿ.ರಡ್ಡರ್, ಶರಣಬಸಪ್ಪ ಕೊಲ್ಕಾರ, ಟಿ.ವಿ.ಮಾಗಳದ, ಜನಪದ ಸಾಹಿತಿ ಮಾರೆಪ್ಪ ಮಾರೆಪ್ಪ ದಾಸರ ಸೇರಿದಂತೆ ಹಲವು ಸಾಹಿತಿಗಳ ಹೆಸರು ಪ್ರಸ್ತಾಪಗೊಂಡವು ಅಂತಿಮವಾಗಿ ಶ್ರೀಯುತ ಪ್ರೊ. ಟಿ. ವಿ. ಕಟ್ಟೀಮನಿರವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.
ಗಂಗಾವತಿ ತಾಲೂಕ ಕಸಾಪ ಅಧ್ಯಕ್ಷ ಎಸ್.ಬಿ.ಗೊಂಡಬಾಳ ಪ್ರೊ. ಟಿ.ವಿ.ಕಟ್ಟೀಮನಿ ಅವರ ಹೆಸರನ್ನು ಸೂಚಿಸಿದರು, ಕುಷ್ಟಗಿ ತಾಲೂಕ ಕಸಾಪ ಅಧ್ಯಕ್ಷ ನಟರಾಜ ಸೋನಾರ ಅನುಮೋದಿಸಿದರು ಇದಕ್ಕೆ ಸಭೆಯಲ್ಲಿದ್ದ ಕಾರ್ರಕಾರಿ ಮಂಡಳಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಅಧ್ಯಕ್ಷರಾದ ರಾಜಶೇಖರ ಗು ಅಂಗಡಿ ವಹಿಸದ್ದರು, ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಬಸವರಡ್ಡಿ ಆಡೂರು ಹಾಗೂ ಮರ್ದಾನಸಾಬ ಕೊತ್ವಾಲ, ಜಿಲ್ಲಾ ಕೋಶಾಧ್ಯಕ್ಷರಾದ ಸಂತೋಷ ದೇಶಪಾಂಡೆ, ಯಲಬುರ್ಗಾ ತಾಲೂಕ ಅಧ್ಯಕ್ಷ ಲಕ್ಷ್ಮಣ ಹಿರೇಮನಿ, ಕೊಪ್ಪಳ ತಾಲೂಕ ಕಸಾಪ ಅಧ್ಯಕ್ಷ ಗಿರೀಶ ಪಾನಘಂಟಿ, ಕನಕಗಿರಿ ಅಧ್ಯಕ್ಷ ಮಹೇಬೂಬ್ ಜಿಲ್ಲಾ ಪದಾಧಿಕಾರಿಗಳಾದ ವಿಜಯಲಕ್ಷ್ಮಿ ಮೇಲಿನಮನಿ, ರವೀಂದ್ರ ಬಾಕಳೆ ಮತ್ತು ಇತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀಯುತ ಪ್ರೊ. ಟಿ. ವಿ. ಕಟ್ಟೀಮನಿ, ಇವರ ಕಿರು-ಪರಿಚಯ
ಶ್ರೀಯುತ ಪ್ರೊ. ಟಿ. ವಿ. ಕಟ್ಟೀಮನಿ, ಎಂ.ಎ (ಹಿಂದಿ), ಪಿಎಚ್‍ಡಿ (ಹಿಂದಿ) ಕುಲಪತಿ ಇಂದಿರಾ ಗಾಂಧಿ ರಾಷ್ಟ್ರಿಯ ಆದಿವಾಸಿ ವಿಶ್ವವಿದ್ಯಾಲಯ ಅಮರಕಂಟಕ, ಅನುಪಪುರ ಜಿಲ್ಲೆ ಮಧ್ಯಪ್ರದೇಶ ಇವರು ಶ್ರೀ ವೆಂಕಪ್ಪ ಸತ್ಯಪ್ಪ ಹಾಗೂ ಶ್ರೀಮತಿ ಸಂಗಮ್ಮ ವೆಂಕಪ್ಪ ಕಟ್ಟಿಮನಿ ದಂಪತಿಗಳ ಮಗನಾಗಿ 14 ಜೂನ್ 1955 ರಲ್ಲಿ ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದಲ್ಲಿ ಜನಿಸಿದರು. ಇವರು 1976 ರಲ್ಲಿ ಜೆ.ಟೆ.ಕಾಲೇಜು ಗದಗದಲ್ಲಿ ಪದವಿ ಮುಗಿಸಿ 1979 ರಲ್ಲಿ ಕರ್ನಾಟಕ ವಿ.ವಿಧಾರವಾಡದಿಂದ ಕಲಾ ವಿಭಾಗದಲ್ಲಿ ಉನ್ನತ ಪದವಿಯನ್ನು ಹಾಗೂ 1986 ರಲ್ಲಿ ಕರ್ನಾಟಕ ವಿ.ವಿ ಯಿಂದ ಪಿ.ಹೆಚ್.ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.
ಇವರು ಕನ್ನಡ, ಹಿಂದಿ, ಇಂಗ್ಲೀಷ ಬಾಷೆಯಲ್ಲಿ ಅಮೂಲ್ಯ ಕೃತಿಗಳನ್ನು ರಚಿಸಿದ್ದು ಹಲವಾರು ಕೃತಿಗಳನ್ನು ಭಾಷಾಂತರಿಸಿದ್ದಾರೆ. ಅದಲ್ಲದೇ ಭಾರತದ ಉನ್ನತ ಶಿಕ್ಷಣದ ಕ್ಷೇತ್ರದಲ್ಲಿ ಉನ್ನತ ಉದ್ದೇಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತತ ಇಂದಿರಾ ಗಾಂಧಿ ರಾಷ್ಟ್ರಿಯ ಆದಿವಾಸಿ ವಿಶ್ವವಿದ್ಯಾಲಯ ಅಮರಕಂಟಕ, ಅನುಪಪುರ ಜಿಲ್ಲೆ ಮಧ್ಯಪ್ರದೇಶದಲ್ಲಿ ಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಹಿತ್ಯಿಕ ಸಾಧನೆಗಳು ಪ್ರಕಟವಾದ ಕೃತಿಗಳು: ಕನ್ನಡ : ಕನ್ನಡದಲ್ಲಿ ರಿವಾಯತ ಪದಗಳು, ಜ್ಯೋತಿಬಾ ಫುಲೆ (ರೇಖಾ ಚಿತ್ರ) (ಕನ್ನಡ,), ನಾವು ಮೆಚ್ಚಿದ ಹಿಂದಿ ಕಥೆಗಳು ಮುಂಗಾರು ಮಳೆ, ಮಂಡಲ ಕಮೀಶನ್ ಒಂದು ಅಧ್ಯಯನ (ಕನ್ನಡ), ಹುಡುಗಿ ಪ್ರೀತಿಸುವುದೇ ಹೀಗೆ, ಕತ್ತಲೆಯ ಅಳಿವಿನಾಚೆ ಗಳಂತಹ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.
ಹಿಂದಿ : ಪಿ. ಲಂಕೇಶ ಕಾ ಕಥಾ ಸಾಹಿತ್ಯ: ಕಥ್ಯ ಔರ ಪ್ರತಿಪಾದ್ಯ, ಪ್ರಯೋಜನಮೂಲಕ ಹಿಂದೀ ಔರ ಅನುವಾದ, ಭಾರತೀಯ ದಲಿತ ಸಾಹಿತ್ಯ: ಏಕ ಪರಿಚಯ, ಅನುವಾದ ಕೆ ವಿವಿಧ ಆಯಾಮ, ಕಥಾಶೇಷ (ಸಂಪಾದಿತ), ವಸ್ತುನಿಷ್ಠ ಹಿಂದಿ ಪ್ರತಿಯೋಗಿತಾ, ಮಾನಕ ರೇಖಾ ಚಿತ್ರ (ಸಂಪಾದಿತ), ಜಲಗೀತ; ಸೃಷ್ಟಿ ಔರ ದೃಷ್ಟಿ. (ಸಂಪಾದಿತ) ಗಳಂತಹ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.
ಇಂಗ್ಲೀಷ್ ಲೇಖನಗಳು: ಬೇಡಾ ಟ್ರೈಬ್; ಲಾಂಗ್ ವೇ ಟೂ ರಿಸ್ಟೋರ್ ಐಡೆಂಟಿಟಿ ಫಾರೆಸ್ಟ ಬ್ಲೊಸಮ್ಸ್ ಆ್ಯಂಡ್ ದ ಕಾಂಕ್ರೀಟ್ ಜಂಗಲ್‍ನಲ್ಲಿ ಪ್ರಕಟಿತ ಲೇಖನ, ದಲಿತ ಅಟೊಬಯೊಗ್ರಫೀಜ್ ಕಾಸ್ಟ ಬರ್ಥ ಆ್ಯಂಡ ಹಂಗರ್ ದಲಿತ್ಸ ಆ್ಯಂಡ ರಿಲಿಜಿಯನ್ ನಲ್ಲಿ ಪ್ರಕಟಿತ ಗಳಂತಹ ಮಹತ್ವದ ಲೇಖನಗಳನ್ನು ರಚಿಸಿದ್ದಾರೆ.
ಅನುವಾದ ಕಾರ್ಯ: ಹಿಂದಿಯಿಂದ ಕನ್ನಡಕ್ಕೆ : ಹೇಳಿಕೆ (ದೀರ್ಘ ಕಥೆ) ಕಮಲೇಶ್ವರ ನಾವು ಮೆಚ್ಚಿದ ಹಿಂದಿ ಕಥೆಗಳು ಹತ್ತು ಗಜದ ಈಚೆ ಮತ್ತು ಆಚೆ (ಕಥೆ)ಫಣೀಶ್ವರನಾಥ ರೇಣು .ಶವಗಳ ಶಹರದಲ್ಲಿ (ಕಥೆ ) ಹೈ ಪವರ ಕಮೀಶನ್ ಬತ್ತಲೆ ಬಸ್ತರಕ್ಕೆ ಬಟ್ಟೆ ಹೊದಿಸುವದು (ದೀರ್ಘ ಕವಿತೆ), ಮಹೀಪ ಸಿಂಹ ಅವರ ಆಧೀ ಸದೀಕಾ ವಕ್ತ ಜೂಠನ್ ಓಂ ಪ್ರಕಾಶ ವಾಲ್ಮೀಕಿ ಅವರ ಆತ್ಮಕಥೆ. ಮಿ ಜಿನ್ನಾ ನರೇಂದ್ರ ಮೋಹನ ಅವರ ನಾಟಕ. ಮುಕ್ತಿ ಪಥ ಅಭಯ ಮೌರ್ಯ ಅವರ ಕಾದಂಬರಿ.ದೀವಾರ ಮೇ ಏಕ ಖಿಡಕಿ ರಹತೀ ವಿನೋದ ಕುಮಾರ ಶುಕ್ಲಾ ತಿತಿತಿ.ಜಚಿಣಣಚಿಞಚಿಜu@gmಚಿiಟ.ಛಿom ಹರಿಕೃಷ್ಣ ದೇವಸಾರೆ ಇಂಗ್ಲಿಷಿನಿಂದ ಹಿಂದಿಗೆ: ಮೌಲಾನಾ ಆಜಾದ ಪರ್ಸನಾಲಿಟಿ ಆಂಡ್ ವಿಶನ್‍ಕುವೆಂಪು ಏಮೋನೋಲಾಗ ಹೂ ರೋಟ್ ಮೈ ಡೆಸ್ಟಿನಿ ಸುಶೀಲ್ ಕುಮಾರ್ ಶಿಂಧೆ ಅವರ ಆತ್ಮಕಥೆ, ಕನ್ನಡದಿಂದ ಹಿಂದಿಗೆ : ಜಂಗಲ್‍ಕೀ ಮೋಹಿನಿ ಡಾ. ಬುದ್ದಣ್ಣ ಹಿಂಗಮಿರೆ ಅವರ ಕಾವ್ಯನಾಟಕ ಜಾನಪದ ಹಾಡುಗಳಲ್ಲಿ ಜ್ಞಾನ ಮತ್ತು ಉಸಿರು ಗಾಂವ ಗಲಿಗುಜರಾತಿಯಿಂದ ಕನ್ನಡಕ್ಕೆ : ಆರು ಗುಜರಾತಿ ಕವಿತೆಗಳ ಕನ್ನಡ ಅನುವಾದ, ಕನ್ನಡದಿಂದ ಗುಜರಾತಿಗೆ : ಎಂಟು ಕನ್ನಡ ಕವಿತೆಗಳ ಗುಜರಾತಿ ಅನುವಾದ ಅನುವಾದ ಕಾರ್ಯ: ದೀವಾರ ಮೇ ಏಕ್ ಖಿಡಕಿ ರಹತಿ ಥೀ (ಹಿಂದಿ ಕಾದಂಬರಿ) .ಜೂಠನ್, ಓಂ ಪ್ರಕಾಶ್ ವಾಲ್ಮೀಕಿ ಅವರ ಆತ್ಮಕಥೆ, ಇದಲ್ಲದೇ 37 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ರಾಷ್ಟ್ರ ಮತ್ತು ಅಂತರರಾಷ್ಟ್ರಮಟ್ಟದ ಹಲವಾರು ವಿಚಾರ ಸಂಕಿರ್ಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಲ್ಲದೇ ಸಮ್ಮೇಳನಗಳನ್ನು ಆಯೋಜಿಸಿದ್ದಾರೆ. ಹಿಂದಿ, ಕನ್ನಡ, ಇಂಗ್ಲೀಷನಿ ಹಲವಾರು ಸಂಚಿಕೆಗಳಿಗೆ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಪೂರ್ಣಾವಧಿ ಶೈಕ್ಷಣಿಕ ನೇಮಕಾತಿಗಳು:
ಕುಲಪತಿ, ಇಂದಿರಾ ಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯ, ಅಮರಕಂಟಕ, ಮಧ್ಯಪ್ರದೇಶ
ಸದಸ್ಯರು, ಆದಿವಾಸಿ ಕಲ್ಯಾಣ ಸ್ಥಾಯಿ ಸಮಿತಿ, ಆದಿವಾಸಿ ಸಚಿವಾಲಯ, ಭಾರತ ಸರ್ಕಾರ, ನವದೆಹಲಿ
ಸದಸ್ಯರು, ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ, ಭಾರತ ಸರ್ಕಾರ, ನವದೆಹಲಿ
ಸದಸ್ಯರು, ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ
ಡೀನ್, ಭಾಷಾಶಾಸ್ತ್ರ ಮತ್ತು ಇಂಡೋಲಜಿ ನಿಕಾಯ, ಮೌಲಾನಾ ಆಜಾದ ರಾಷ್ಟ್ರೀಯ ಉರ್ದು
ವಿಶ್ವವಿದ್ಯಾಲಯ, ಹೈದ್ರಾಬಾದ
ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು, ಹಿಂದಿ ವಿಭಾಗ, ಮೌಲಾನಾ ಆಜಾದ ರಾಷ್ಟ್ರೀಯ ಉರ್ದು
ವಿಶ್ವವಿದ್ಯಾಲಯ, ಹೈದ್ರಾಬಾದ
ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು, ಹಿಂದಿ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರಾವಾಡ,
ಹಿಂದಿ ಪ್ರಾಧ್ಯಾಪಕರು, ಹಿಂದಿ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರಾವಾಡ
ಉಪನ್ಯಾಸಕರು ಮತ್ತು ಪ್ರವಾಚಕರು, ಹಿಂದಿ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರಾವಾಡ
ಇದರ ಜೊತೆಗೆ ಇತರೆ ಶೈಕ್ಷಣಿಕ ನೇಮಕಾತಿಗಳು, ವಿವಿಧ ಶೈಕ್ಷಗಳಲ್ಲಿ ವೃತ್ತಿಪರ ಅನುಭವಗಳು ವೃತ್ತಿಪರ ಅನುಭವಗಳು, ಪಠ್ಯಕ್ರಮ ಮಂಡಳಿ ಸದಸ್ಯರು, ಸದಸ್ಯರು ಶಿಕ್ಷಣ ಮಂಡಳಿ, ಸ್ಕೂಲ್‍ಬೋರ್ಡ್ ಸದಸ್ಯರು ಮತ್ತು ಸಂಪಾದಕೀಯ ನೇಮಕಾತಿಯಲ್ಲಿ ಸೇವೆಯನ್ನು ಸಲ್ಲಿಸಲಾಗಿರುತ್ತದೆ ಹಾಗೂ ವಿದೇಶ ಭೇಟಿ, ರಿಫ್ರಶರ್ ಕೋರ್ಸ್‍ಗಳಲ್ಲಿ ಭಾಗಿ, ಅನೇಕ ಸಮ್ಮೇಳನದಲ್ಲಿ ಭಾಗಿಯಾಗಿ ಸಂಶೋಧನಾ ಮಾಡಿ ಪಿಎಚ್.ಡಿ/ಎಂಫಿಲ್ ಪದವಿ ಪಡೆದಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಇವರಿಗೆ ಹಲವಾರು ಪ್ರಶಸ್ತಿಗಳು ಸಂದಿವೆ.
Iಈಈಅಔ ರಾಜಭಾಷಾ ಸಮ್ಮಾನ್
ಗಂಗಾಶರಣ್ ಸಿಂಹ ರಾಷ್ಟ್ರೀಯ ಪ್ರಶಸ್ತಿ-2006 ಹಿಂದಿಯ ವಿಕಾಸಕ್ಕಾಗಿ,
ಸೃಜನಶೀಲ ಅನುವಾದ ಪ್ರಶಸ್ತಿ-2007 ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ.
ಮಹಾತ್ಮಾ ಜ್ಯೊತಿಬಾ ಫುಲೆ, ಸಾಹಿತ್ಯ ರತ್ನ ಸಮ್ಮಾನ 2004.ಭಾರತೀಯ ದಲಿತ ಸಾಹಿತ್ಯ ಅಕ್ಯಾಡೆಮಿ, ಉಜ್ಜೈನ.
ಡಾ ಹರಿಶಂಕರ ಆದೇಶ, ಸಾಹಿತ್ಯ ಚೂಡಾಮನಿ
ಸಾಹಿತ್ಯ ಪ್ರಚಾರಕ ಪ್ರಶಸ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ 2016
ರಾಜ್ಯೋತ್ಸವ ಪ್ರಶಸ್ತಿ,

Please follow and like us:
error