ಕನ್ನಡಿಗನಿಗಾಗಿ-ರಾಜ್ಯೋತ್ಸವ ನಿಮಿತ್ಯ ಕವನಗಳು-1

ಅಂತರಾಳದಿ ಸಿರಿಗನ್ನಡಂಗೆಲ್ಗೆ
ಬಾಹ್ಯದಿ ಪ್ರಶ್ನಾತೀತ ಭಾಷಾ ಸಹಿಷ್ಣುತೆ
ಧೂರ್ತ ಆವಾಂತರಗಳ ನಿರಂತರ
ಅನುಭವಿಪ ನಿರ್ಭಾಗ್ಯ ನಿಷ್ಕಿಯನೇ
ಅತಿಶಯ ಭಾವೋದ್ವೇಗದ ಸಹನೆ
ಜೊತೆಗೆ ಪ್ರಾರಬ್ಧದ ಜಿಗುಪ್ಸೆಯ ಕರುಣೆ
ತುಂಬಿಕೊಂಡು ಪೈಪೋಟಿಯ ಉಪದ್ರವದಲ್ಲೂ
ನಿರ್ಲಕ್ಷ್ಯ ನಿರ್ಲಿಪ್ತನಂತಿರುವ.. ಬಲಿಪಶುವೇ
ಸಾಕು ಈ ಸಾಂತ್ವನ ಸೌಜನ್ಯ ಅರಿತುಕೋ
ಬೀಜರೂಪದಿ ಬಂದ ಆಷಾಡಭೂತಿಗಳೇ 
ಹೆಮ್ಮರವಾಗಿರೆ
ದ್ವಂದ್ವ ನೀತಿಯ ಹರಿದೊಗೆದು
ಕನ್ನಡವ ಹದಗೊಳಿಸೆ ಗತಿಶೀಲ ಸಂಘಟನೆಗೆ
ಪ್ರೇರಕಶಕ್ತಿಯಾಗು ಬಾ
-ಬಾಬುಸಾಬ ಬಿಸರಳ್ಳಿ
Please follow and like us:
error