ಭಾಗ್ಯನಗರ ಗ್ರಾಮ ಪಂಚಾಯತ್ ಸೀಟ್ 1 ಲಕ್ಷಕ್ಕೆ ಹರಾಜು!

ಕೊಪ್ಪಳ : ನಗರಕ್ಕೆ ಹತ್ತಿಕೊಂಡೇ ಇರುವ ಭಾಗ್ಯನಗರದ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಸ್ಥಾನ 1 ಲಕ್ಷ 1 ರೂ.ಗೆ ಹರಾಜಾಗಿದೆ. ಜಿಲ್ಲೆಯಲ್ಲಿ ಈ ರೀತಿಯ ಹರಾಜುಗಳು ನಡೆಯುತ್ತಲೇ ಇವೆ. ಪ್ರಜಾಪ್ರಭುತ್ವ ಕ್ಕೆ ಮಾರಕವಾದ ಪ್ರಜಾಪ್ರಭುತ್ವವನ್ನೇ ಅಣಕಿಸುವಂತೆ ನಡೆಯುತ್ತಿರುವ ಈ ಹರಾಜುಗಳು ನಡೆಯುತ್ತಿರುವುದು ದೇವರು, ಗುಡಿ ಗಳ ಹೆಸರಿನಲ್ಲಿ. ಅತೀ ಹೆಚ್ಚು ಯಾರು ಹರಾಜು ಕೂಗುತ್ತಾರೋ ಅವರು ಅವಿರೋಧವಾಗಿ ಆಯ್ಕೆಯಾಗುತ್ತಿದ್ದಾರೆ. ಭಾಗ್ಯನರದ ಮೊದಲಿನಿಂದಲೂ ವಾಣಿಜ್ಯ ಗ್ರಾಮ ಎಂದೇ ಹೆಸರುವಾಸಿಯಾಗಿದೆ. ಚುನಾವಣೆ ಎಂದರೆ ದುಡ್ಡಿನ ಹೊಳೆಯೇ ಹರಿಯತ್ತದೆ. ಹೀಗಿರುವಾಗ ಒಳ್ಳೆಯ ಕಾರ್ಯಕ್ಕೆ ಹರಾಜು ಹಾಕಿದರೆ ತಪ್ಪಿಲ್ಲ ಎನ್ನುತ್ತಾರೆ ಕೆಲವರು. ವಾಲ್ಮಿಕಿ ಮೂರ್ತಿ ಪ್ರತಿಷ್ಠಾಪನೆಗೆ ಹೆಚ್ಚು ದುಡ್ಡು ನೀಡುವದಾಗಿ ಹೇಳಿದ 5 ನೇ ವಾರ್ಡನ ಹುಲಿಗೆಮ್ಮಾ ಹನುಮಂತಪ್ಪ ನಾಯಕ್ ಆಯ್ಕೆಯಾಗಿದ್ದಾರೆ. ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿದಾಗ ಇವರ ಹೆಸರು ಬಂದಿದೆ.

Leave a Reply