ಏ.04 ರಂದು ಹಂಪಿ ವಿರುಪಾಕ್ಷೇಶ್ವರ ಹಾಗೂ ಚಂದ್ರಮೌಳೇಶ್ವರ ಜಾತ್ರಾ ಮಹೋತ್ಸವ

ಕೊಪ್ಪಳ, ಮಾ. : ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕು ಹಂಪಿಯ ಶ್ರೀ ವಿರುಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ 2015 ನೇ ಸಾಲಿನ ಜಾತ್ರಾ ಮಹೋತ್ಸವವು ಮಾ.29 ರಿಂದ ಏ.6 ರವರೆಗೆ ವಿಜೃಂಭಣೆಯಿಂದ ಜರುಗಲಿದೆ. 
     ಈ ಜಾತ್ರಾ ಮಹೋತ್ಸವದಲ್ಲಿ ಏ.04 ರಂದು  ಶ್ರೀವಿರುಪಾಕ್ಷೇಶ್ವರ ಸ್ವಾಮಿ ಹಾಗೂ ಚಂದ್ರಮೌಳೇಶ್ವರ ಸ್ವಾಮಿಯ ಜೋಡಿ ರಥೋತ್ಸವವು ಲಕ್ಷಾಂತರ ಭಕ್ತಾಧಿಗಳ ಸಮ್ಮುಖದಲ್ಲಿ ನಡೆಯಲಿದೆ.  ಏ.04 ರಂದು ಜರುಗುವ ಬ್ರಹ್ಮರಥೋತ್ಸವದಂದು ಚಂದಗ್ರಹಣ ಇರುವುದರಿಂದ ರಥೋತ್ಸವವನ್ನು ಸಂಜೆ 3 ಗಂಟೆಗೆ ಪ್ರಾರಂಭಿಸಿ, 4 ಗಂಟೆಗೆ ಮುಕ್ತಾಯಗೊಳಿಸಲಾಗುವುದು ಹಾಗೂ ದೇವಸ್ಥಾನವನ್ನು ಸಂಜೆ 4 ರಿಂದ 8 ಗಂಟೆಯವರೆಗೆ ಮುಚ್ಚಲಾಗುವುದು. ಈ ಸಮಯದಲ್ಲಿ ದೇವರ ದರ್ಶನ ಇರುವುದಿಲ್ಲ. ಭಕ್ತಾದಿಗಳು ಸಹಕರಿಸಬೇಕು. ಜೋಡಿ ರಥೋತ್ಸವ ವೀಕ್ಷಣೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ, ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಶ್ರೀ ವಿರುಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಯಂ.ಹೆಚ್. ಪ್ರಕಾಶರಾವ್  ಕೋರಿದ್ದಾರೆ.

Please follow and like us:
error

Related posts

Leave a Comment