fbpx

ಡಿ.03 ರಿಂದ ಗಿಣಗೇರಿಯಿಂದ ಮೌನೇಶ್ವರ ತಿಂಥಣಿ ಕ್ಷೇತ್ರಕ್ಕೆ ಪಾದಯಾತ್ರೆ.

ಕೊಪ್ಪಳ-02- ಲೋಕ ಕಲ್ಯಾಣಾರ್ಥವಾಗಿ ಗಿಣಿಗೇರಿಯಿಂದ ದಕ್ಷಿಣಕಾಶಿ ಎಂದು ಸುಪ್ರಸಿದ್ದವಾದ ಶ್ರೀ ಮೌನೇಶ್ವರ ತಿಂಥಣಿ ಸುಕ್ಷೇತ್ರಕ್ಕೆ ಗಿಣಗೇರಿಯ ಶ್ರೀ ಮದಾನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಶಿಷ್ಯವೃಂದದವರಿಂದ ಡಿ.೦೩ ರಿಂದ ಡಿ.೦೯ ರವರೆಗೆ ೪ನೇ ವರ್ಷದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಡಿ.೦೩ ರಂದು ಗಿಣಿಗೇರಿಯಿಂದ ಪಾದಯಾತ್ರೆಗೆ ಚಾಲನೆ ನೀಡಲಿದ್ದು, ಸಾನಿಧ್ಯವನ್ನು ಗಿಣಗೇರಿಯ ದೇವೇಂದ್ರ ಸ್ವಾಮಿಗಳು, ಗುರುನಾಥ ಸ್ವಾಮಿಗಳು, ನರಸಿಂಹ ಸ್ವಾಮಿಗಳು, ಲೇಬಗೇರಿಯ ನಾಗಮೂರ್ತಿ ಸ್ವಾಮಿಗಳು, ಕೊಪ್ಪಳ ಶ್ರೀಮಠದ ಶ್ರೀ ಸಿರಸಪ್ಪಯ್ಯ ಸ್ವಾಮಿಗಳು, ಲೇಬಗೇರಿಯ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳು, ಗಿಣಗೇರಿಯ ಸುಬ್ಬಣ್ಣಾಚಾರ್ಯ ವಿದ್ಯಾನಗರ, ಲೇಬಗೇರಿಯ ಪದ್ಮಾಚಾರ್ಯ ವಿದ್ಯಾನಗರ, ಗದಗ ವಿ.ಕ.ಕಿ.ಮಾಸಪತ್ರಿಕೆಯ ಸಂಪಾದಕ ಹಾಗೂ ಪುರೋಹಿತರಾದ ಶ್ರೀ ಭಾಸ್ಕರ್ ಆಚಾರ್ಯ ಕಡ್ಲಾಸ್ಕರ್, ಗಿಣಿಗೇರಿಯ ಮುತ್ತುಚಾರ್ಯ ವಿದ್ಯಾನಗರ, ತಿಂಥಣಿಯ ಅರ್ಚಕ ಶ್ರೀ ಮೌನೇಶ್ವರ ಅವರು ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಪಾದಯಾತ್ರೆಯು ಗ್ರಾಮದೇವತೆಗೆ ಮಹಾ ಮಂಗಳಾರತಿ ನಂತರ ಶ್ರೀಗಳಿಂದ ಚಾಲನೆ ನೀಡಲಾಗುವುದು.
ಮುಖ್ಯ ಅತಿಥಿಗಳಾಗಿ ಚಂದ್ರಕಾಂತ ಎಸ್.ಸೋನಾರ, ರುದ್ರಪ್ಪ ಮಾಸ್ತಾರ, ನಗರ ಘಟಕದ ಅಧ್ಯಕ್ಷ ಮಂಜುನಾಥ ವಾಸಪ್ಪ ಬನ್ನಿಕೊಪ್ಪ, ತಾಲೂಕ ವಿಶ್ವಕರ್ಮ ಸಮಾಜದ ಅಧ್ಯಕ್ಷ ಶೇಖರಪ್ಪ ಬಡಿಗೇರ ಅನೇಕರು ಆಗಮಿಸುವರು. ಈ ಮಹತ್ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ಶ್ರೀ ಮೌನೇಶ್ವರ ಕೃಪೆಗೆ ಪಾತ್ರರಾಗಬೇಕೆಂದು ಗಿಣಗೇರಿಯ ಶ್ರೀ ಮದಾನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಶಿಷ್ಯವೃಂದದವರು ಮೂಲಕ ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!