ಜಿಲ್ಲಾ ಕಸಾಪದಿಂದ ಆ.02 ರಿಂದ ದತ್ತಿ ಉಪನ್ಯಾಸ

 ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಲ್ಲಾ ತಾಲೂಕಾ ಕಸಾಪ ಘಟಕಗಳ ಸಹಯೋಗದೊಂದಿಗೆ ಆ.02 ರಿಂದ 5 ರವರೆಗೆ ದತ್ತಿ ಉಪನ್ಯಾಸ ಕಾರ್ಯಕ್ರಮಗಳು ಜರುಗಲಿವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ ಅವರು ತಿಳಿಸಿದ್ದಾರೆ. 
ಆ.02 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳದ ಬಹಾರ ಪೇಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಸಪ್ಪ ಕೆಂಚಪ್ಪ ದಿವಟರ ಹಾಗೂ ಯಮನಪ್ಪ ನಿಂಗಪ್ಪ ಮುರಳಿ ಸ್ಮರಣಾರ್ಥ ದತ್ತಿ ನಿಧಿ ಉಪನ್ಯಾಸಗಳು ಜರುಗಲಿವೆ. ಆ.03 ರಂದು ಬೆಳಿಗ್ಗೆ 11 ಗಂಟೆಗೆ ಗಂಗಾವತಿ ತಾಲೂಕಿನ ಸುಳೇಕಲ್ಲ ಶ್ರೀ ಭುವನೇಶ್ವರ ಬ್ರಹನ್ಮಠದಲ್ಲಿ ಸಾವಿತ್ರಮ್ಮ ಭುವನೇಶ್ವರ ಬ್ರಹನ್ಮಠ ಹಾಗೂ ಶಿವಪುತ್ರವ್ವ ಮಹಾದೇವಯ್ಯ ಹರಗೇರಿಮಠ ಸ್ಮರಣಾರ್ಥ ದತ್ತಿ ನಿಧಿ ಉಪನ್ಯಾಸಗಳು ಜರುಗಲಿವೆ. ಆ.04 ರಂದು  ಬೆಳಗ್ಗೆ 10.30ಕ್ಕೆ ಯಲಬುರ್ಗಾದ ಶ್ರೀ ಮಂಜುನಾಥ ಶಿಕ್ಷಣ ಸಂಸ್ಥೆಯಲ್ಲಿ ಶಂಕ್ರಪ್ಪ ಸಿದ್ದಪ್ಪ ದೊಡ್ಡರಾಶಿ ಹಾಗೂ ಶಂಕ್ರಪ್ಪ ಸಿದ್ದಪ್ಪ ಜಮಖಂಡಿ ಸ್ಮರಣಾರ್ಥ ದತ್ತಿ ನಿಧಿ ಉಪನ್ಯಾಸಗಳು ಜರುಗಲಿವೆ. ಆ.05 ರಂದು ಸಂಜೆ 5 ಗಂಟೆಗೆ ಕುಷ್ಟಗಿ ತಾಲೂಕಿನ ಹನುಮಸಾಗರ ನಿಸರ್ಗ ಸಂಗೀತ ಶಾಲೆಯಲ್ಲಿ ಗುರಪ್ಪ ವೀರಪ್ಪ ಕನ್ನೂರ ಸ್ಮರಣಾರ್ಥ ದತ್ತಿ ನಿಧಿ ಉಪನ್ಯಾಸಗಳು ಜರುಗಲಿವೆ ಎಂದು  ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ    ತಿಳಿಸಿದ್ದಾರೆ.
Please follow and like us:
error