ಆ.02 ರಂದು ವಿವಿಧೆಡೆ ಕಾನೂನು ಅರಿವು-ನೆರವು ಕಾರ್ಯಾಗಾರ

 ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಸಾಕ್ಷರತಾ ಅಂಗವಾಗಿ ಆ.02 ರಂದು ವಿಶೇಷ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಇರಕಲ್ಲಗಡ : ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜರುಗುವ ಕಾರ್ಯಕ್ರಮದ ಉದ್ಘಾಟನೆಯನ್ನು ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಶರಣಪ್ಪ ಜಿ. ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಯಲ್ಲಪ್ಪ ಬಂಡಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಜಿಲ್ಲಾ ಸರ್ಕಾರಿ ವಕೀಲರಾದ ಬಿ.ಶರಣಪ್ಪ, ವಕೀಲರಾದ ವಿ.ಎಂ.ಭೂಸನೂರಮಠ, ಬಿಆರ್‍ಸಿಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಎಚ್.ಕುರಿ ಅವರು ಪಾಲ್ಗೊಳ್ಳುವರು.  ವಕೀಲರಾದ ಎಂ.ಹನುಮಂತರಾವ್ ಅವರು ಲೋಕ ಅದಾಲತ್ ಮಧ್ಯಸ್ಥಿಕೆ ಕಾನೂನು ಮತ್ತು ವಾಜ್ಯಗಳ ಸಂಧಾನ ಕುರಿತು, ವಕೀಲರಾದ ಎಸ್.ಬಿ.ಪಾಟೀಲ್ ಅವರು ಕಟ್ಟಡ ಕಾರ್ಮಿಕರ ಹಕ್ಕು ಕುರಿತು ಹಾಗೂ ಇನ್ನೋರ್ವ ವಕೀಲರಾದ ಶಶಿಕಾಂತ ಕಲಾಲ ಅವರು ಬಾಲ ಕಾರ್ಮಿಕ ನಿಷೇಧ ಕಾನೂನು ಕುರಿತು ಉಪನ್ಯಾಸ ನೀಡುವರು.
ಹಟ್ಟಿ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸ್ತ್ರೀ ಶಕ್ತಿ ಸಂಘಗಳು ಹಾಗೂ ಮಹಿಳಾ ಒಕ್ಕೂಟಗಳು ಇವರುಗಳ ಸಂಯುಕ್ತ ಆಶ್ರಯದಲ್ಲಿ ಶಾಲೆಯ ಆವರಣದಲ್ಲಿ ಆ.02 ರಂದು ಮಧ್ಯಾಹ್ನ 2.00 ಗಂಟೆಗೆ ಕಾನೂನು ಸಾಕ್ಷರತಾ ಅಂಗವಾಗಿ ವಿಶೇಷ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.   
 ಕಾರ್ಯಾಗಾರದ ಉದ್ಘಾಟನೆಯನ್ನು ಕೊಪ್ಪಳ ತಹಶೀಲ್ದಾರ್ ಪುಟ್ಟುರಾಮಯ್ಯ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಲೇಬಗೇರಿ ಗ್ರಾ.ಪಂ.ಅಧ್ಯಕ್ಷರಾದ ರಾಮಣ್ಣ ಚೌಡ್ಕಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಜಿಲ್ಲಾ ಸರ್ಕಾರಿ ವಕೀಲರಾದ ಬಿ.ಶರಣಪ್ಪ, ವಕೀಲರಾದ ವಿ.ಎಂ.ಭೂಸನೂರಮಠ, ಎಪಿಎಂಸಿ ಸದಸ್ಯ ಶಿವಣ್ಣ ಚರಾರಿ, ಗ್ರಾ.ಪಂ.ಸದಸ್ಯರಾದ ದೇವಮ್ಮ ಅಂಗಡಿ, ಗಂಗಪ್ಪ ಉಳ್ಳುಗಡ್ಡಿ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮಾರುತಿ ಗುಂಡಾಪುರ, ಬೀರಪ್ಪ ಅಂಗಡಿ, ಸ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯ ಸುಭಾಷರೆಡ್ಡಿ, ದಳಪತಿ ನಿಂಗನಗೌಡ ಪೊ|ಪಾ|, ಕರವೇ ಅಧ್ಯಕ್ಷ ದೇವಪ್ಪ ಕಲ್ಮನಿ, ಮುಖಂಡರಾದ ಗಿಡ್ಡಪ್ಪ ಪೂಜಾರ, ಸಿದ್ದಪ್ಪ ಅವರು ಪಾಲ್ಗೊಳ್ಳುವರು.  ವಕೀಲರಾದ ಎಂ.ಹನುಮಂತರಾವ್ ಅವರು ಹೆಣ್ಣು ಮಗು ರಕ್ಷಿಸುವ ಕುರಿತು, ವಕೀಲರಾದ ಎಸ್.ಬಿ.ಪಾಟೀಲ್ ಅವರು ಮುಸ್ಲಿಂ ಮಹಿಳೆ ಜೀವನಾಂಶ ಹಕ್ಕು ಕುರಿತು ಹಾಗೂ ಇನ್ನೋರ್ವ ವಕೀಲರಾದ ಶಶಿಕಾಂತ ಕಲಾಲ ಅವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಅಧಿನಿಯಮ ಕುರಿತು ಉಪನ್ಯಾಸ ನೀಡುವರು.
ಕಾಮನೂರು : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸ್ತ್ರೀ ಶಕ್ತಿ ಸಂಘಗಳು ಹಾಗೂ ಮಹಿಳಾ ಒಕ್ಕೂಟಗಳು ಇವರ ಸಂಯುಕ್ತ ಆಶ್ರಯದಲ್ಲಿ ಕಾಮನೂರು ಗ್ರಾಮದ ಸಮುದಾಯ ಭವನದಲ್ಲಿ ಆ.02 ರಂದು ಸಂಜೆ 7.00 ಗಂಟೆಗೆ ಕಾನೂನು ಸಾಕ್ಷರತಾ ಅಂಗವಾಗಿ ವಿಶೇಷ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಈ ಕಾರ್ಯಾಗಾರದ ಉದ್ಘಾಟನೆಯನ್ನು ನ್ಯಾಯಾಧೀಶರಾದ ಬಿ.ದಶರಥ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ತಾಲೂಕ ಪಂಚಾಯತಿ ಸದಸ್ಯ ಬಾಳಪ್ಪ ಬೂದಗುಂಪಾ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಕೊಪ್ಪಳ ತಹಶೀಲ್ದಾರ ಪುಟ್ಟುರಾಮಯ್ಯ, ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಜಿಲ್ಲಾ ಸರ್ಕಾರಿ ವಕೀಲರಾದ ಬಿ.ಶರಣಪ್ಪ, ವಕೀಲರಾದ ವಿ.ಎಂ.ಭೂಸನೂರಮಠ, ಲೇಬಗೇರಿ ಗ್ರಾ.ಪಂ.ಅಧ್ಯಕ್ಷ ರಾಮಣ್ಣ ಚೌಡ್ಕಿ, ಗ್ರಾ.ಪಂ.ಉಪಾಧ್ಯಕ್ಷ ನಾಗಪ್ಪ ತೋಟದ, ಗ್ರಾ.ಪಂ.ಸದಸ್ಯರಾದ ರಾಮಣ್ಣ ಭೋವಿ, ಗೌರಮ್ಮ ಆರ್ಯಾಳ, ಸುವರ್ಣಮ್ಮ ಜಾಣದ, ವೆಂಕೋಬರಾವ್ ಮಾ|ಪಾ|, ಡೊಳ್ಳಿನ ಅವರು ಪಾಲ್ಗೊಳ್ಳುವರು.  ವಕೀಲರಾದ ಎಸ್.ಆರ್.ಹಿರೇಮಠ ಅವರು ಕಾರ್ಮಿಕರ ಕಾನೂನು ಕುರಿತು, ವಕೀಲರಾದ ಪಿ.ಆರ್.ಹೊಸಳ್ಳಿ ಅವರು ಮಾದಕ ವಸ್ತು ನಿರ್ಬಂಧ ಕಾಯ್ದೆ ಕುರಿತು ಹಾಗೂ ಇನ್ನೋರ್ವ ವಕೀಲರಾದ ಎಂ.ಹನುಮಂತರಾವ್ ಅವರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು ಉಪನ್ಯಾಸ ನೀಡುವರು .
Please follow and like us:
error