​​ಪಂಥಗಳಾಚೆ ಬದುಕು ಹುಡುಕುವ ಕಾಲ

ಕೊಪ್ಪಳ ಜು, ೨೩ ವರ್ತಮಾನದ ದಿನಗಳು ಪಂಥಗಳ ಸಂಘರ್ಷದಲ್ಲಿ  ನಲುಗಿ ಹೋಗುತ್ತಿರುವ ಸಂದರ್ಭದಲ್ಲಿ ಮನುಷ್ಯ ಪಂಥದ ಹುಡುಕಾಟ ಬರಹಗಾರರ 
ಅಗತ್ಯವಾಗಬೇಕಿದೆ ಎಂದು ಬರೆಹಗಾರ ಸಿರಾಜ್ ಬಿಸರಳ್ಳಿ ಅಭಿಪ್ರಾಯಪಟ್ಟರು.ಶಕ್ತಿ ಶಾರದೆಯ ಮೇಳ ಹಾಗೂ ಬೆರಗು ಪ್ರಕಾಶನ ಅವ್ವ ಸದನದ ಎದುರಿನ  ಬಯಲಲ್ಲಿ ಆಯೋಜಿಸಿದ್ದ ನೆಟ್ಟಿಗರ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
ಮುಂದುವರೆದು ಮಾತನಾಡಿದ ಅವರು ವರ್ತಮಾನಕ್ಕೆ ಸ್ಪಂದಿಸುವ ಕವಿ ನಿಜ ಕವಿ.  ಕಾವ್ಯಕ್ಕೆ ಕವಿ ತಪಸ್ಸು ಮಾಡಬೇಕಾಗುತ್ತದೆ ಅಂದಾಗಲೇ ಕಾವ್ಯಕ್ಕೆ ನ್ಯಾಯ ದಕ್ಕಬಲ್ಲದು ಎಂದರು. ಎಡ, ಬಲಗಳ ಬಾಹುಗಳ ಬಿಗಿ ಹಿಡಿತ ಎಷ್ಟು ದಿನಗಳ ವರೆಗೆ, ಗುಡಿ, ಚರ್ಚು , ಮಸೀದಿಗಳ ಬಿಟ್ಟು ಆಚೆ ಬನ್ನಿ ಎಂಬ ಕವಿ ಕುವೆಂಪು ಅವರ ಆಸೆಯಂತೆ ಪಂಥಗಳ ತೊಡೆದು ಬನ್ನಿ ಎಂದು ಹೇಳಿದರು. ಧಾರವಾಡದ ಯುವಕವಿ ರಾಜಕುಮಾರ ಮಡಿವಾಳರ ಮುಖ್ಯ ಅತಿಥಿಯಾಗಿ  ಭಾಗವಹಿಸಿ ಮಾತನಾಡುತ್ತ ನೆಟ್ ಸದ್ಯದ ಜೀವನಾಡಿ. ವ್ಯಾಟ್ಸಾಪ್, ಫೇಸ್ಬುಕ್ ಕವಿಗಳು ಮೈಲಿಗೆಯಾಗಿ ಕಂಡು ಬಂದರೂ, ಕಾವ್ಯದ ಕುಸುರಿ ಕೆಲಸದಲ್ಲಿ 

ಪಳಗಿದವರು ಎಂದೇ ಹೇಳಬೇಕು ಎಂದು ಹೇಳಿದರು.ಕವಿ ತನಗೆ ಹೊಳೆದ ವಿಷಯಗಳನ್ನು ಕುರಿತು ಬರೆಯಬೇಕು. ಅದಕ್ಕೆ  ಯಾವುದೇ ಚೌಕಟ್ಟು ಬೇಕಿಲ್ಲ ಎಂದು ಹೊಸ ಪೀಳಿಗೆಯ ಕವಿಗಳಲ್ಲಿ ಹುಮ್ಮಸ್ಸು  ತುಂಬಿದರು. ನಂತರ ನಡೆದ ಕವಿಗೋಷ್ಟಿಯಲ್ಲಿ ಶಂಕರ ಹರಟೆ, ರಮೇಶ ಬುಡ್ಡನಗೌಡರ್, ಈರಪ್ಪ ಬಿಜಲಿ, ಸೋಮಲಿಂಗಪ್ಪ ಬೆಣ್ಣಿ, ವೀರೇಶ ಮೇಟಿ, 

ಅರವಿಂದ ಪವಾಡಶೆಟ್ಟರು, ಶಿಲ್ಪಾ ಮ್ಯಾಗೇರಿ, ಕಸ್ತೂರಿ ಪತ್ತಾರ, ಮಾರುತಿ ಬಿಲ್ಲಾರ,  ಮುಮತಾಜ್ ಕನಕಗಿರಿ, ಶಿವಮ್ಮ ಗೌಡರ್, ಅಮರದೀಪ, ಮಂಜು ಪÇಜಾರ, ಶಿಲ್ಪಾ  ಸರಗಣಾಚಾರ್, ಮಹೇಶ ಯಾರ್ಕರ್ ಹಾಗೂ ಶಾಂತಪ್ಪ ಪಟ್ಟಣಶೆಟ್ಟಿ ಕಾವ್ಯ ವಾಚಿಸಿದರು. ಡಾ. ನಿಂಗಪ್ಪ ಕಂಬಳಿ ನಿರೂಪಿಸಿದರು.

Please follow and like us:
error