​ಹಸೆಮಣೆ ಏರಲು ಹೊರಟವನಿಗೆ ಪ್ರಿಯತಮೆ ಜೊತೆ ವಿವಾಹ


ಕೊಪ್ಪಳ-  ಕುಕನೂರ : ಎರಡು ತಿಂಗಳು ಕಾಲ ಮದುವೆ ತಯಾರಿ ನಡೆಸಿ ಹಸೆಮಣೆ ಏರಲು ತುದಿಗಾಲ ಮೇಲೆ ನಿಂತಿದ್ದ ಮದು ಮಗನಿಗೆ ಶಾಖ್ ನೀಡಿದ ಅವನ ಪ್ರಿಯತಮೆ ಕುಕನೂರ ಪೋಲಿಸ್ ಠಾಣೆ ಮೆಟ್ಟಿಲೇರಿ ಕೊನೆಗೂ ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗುವಲ್ಲಿ ಯಶಸ್ವಿಯಾಗಿದ್ದಾಳೆ. 

ಯಲಬುರ್ಗಾ ತಾಲ್ಲೂಕಿನ ಚಿಕ್ಕಬೀಡನಾಳ ಗ್ರಾಮದ ವಾಲ್ಮೀಕಿ ಸಮಾಜಕ್ಕೆ ಸೇರಿದ ಸುರೇಶ ಎಂಬ ಯುವಕ ಹಲವು ವರ್ಷಗಳಿಂದ ಅದೇ ಗ್ರಾಮದ ಸ್ವಜಾತಿ ಯುವತಿ ಮಂಜುಳಾ ರನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಬಳಿಕ ಇವರಿಬ್ಬರ ಪ್ರೀತಿ ಸ್ವಲ್ಪ ಅತಿರೇಕಕ್ಕೆ ಹೋಗಿ ದೈಹಿಕ ಸಂಪರ್ಕದತ್ತ ವಾಲಿದೆ. ಇಬ್ಬರೂ ಪರಸ್ಪರ ಇಲ್ಲಿಯವರೆಗೂ ಅನ್ಯೋನ್ಯವಾಗಿದ್ದರಂತೆ, ಆದರೆ ಯುವಕ ಸುರೇಶ ಪ್ರೀತಿಸಿದವಳಿಗೆ ಗೊತ್ತಾಗದಂತೆ ಬೆರೋಂದು ಹುಡುಗಿಯ ಸಂಭಂದವನ್ನು ನೋಡಿ ಹಿರಿಯರ ಕಟ್ಟಾಜ್ಞೆಯಂತೆ ಅದೇ ಗ್ರಾಮದಲ್ಲಿ ಬುಧವಾರ ಜರುಗಿದ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ತಯಾರಾಗಿದ್ದ. ಬೇರೊಂದು ಯುವತಿಯೊಂದಿಗೆ ಮದುವೆಯಾಗುತ್ತಿರುವ ಸುದ್ದಿ ಪ್ರೀತಿಸಿದ ಹುಡುಗಿಗೆ ತಿಳಿದಿದ್ದರೂ ಆಕೆ ತನ್ನಷ್ಟಕ್ಕೆ ತಾನು ಸುಮ್ಮನಿದ್ದಳಂತೆ. ಬಳಿಕ ಮದುವೆ ಹತ್ತಿರವಾಗುತ್ತಿದ್ದಂತೆ ಪ್ರೇಮಿಗಳಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪ್ರೀತಿಸಿದ ಯುವತಿಗೆ ಹುಡುಗ ಹಾಕಿದ ಚಾಲೆಂಜ್ ಅವನ ಜೀವನಕ್ಕೆ ಮುಳುವಾಗಿದ್ದು ಎನ್ನುತ್ತಾರೆ ಗ್ರಾಮಸ್ಥರು. ಬಳಿಕ ಇವರಿಬ್ಬರ ನಡುವಿನ ಪ್ರೇಮಾಂಕುರ ಮುರಿದುಬಿದ್ದು ಕೊನೆಗೂ ಯುವತಿ ಮಂಜುಳಾ ಕುಕನೂರ ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾಳೆ. ಇತ್ತ ಮದುವೆ ತಯಾರಿಯಲ್ಲಿದ್ದ ಸುರೇಶ ಮದುವೆಯಾಗಲು ಹೊರಟಿದ್ದ ಯುವತಿ ಈಗಾಗಲೇ ಚಿಕ್ಕಬೀಡನಾಳ ಗ್ರಾಮದಲ್ಲಿ ಮದುಮಗಳಾಗಿ ನಿಂತಿದ್ದಾಳೆ. ಇನ್ನೇನು ಮಾಂಗಲ್ಯಧಾರಣೆ ನಡೆದೇ ಹೋಯಿತು ಅನ್ನುವಷ್ಟರಲ್ಲಿ ಮುರಿದು ಬಿದ್ದ ಮದುವೆಗೆ ವಿಲನ್ ಆದ ಮಂಜುಳಾ ಕೊನೆಗೂ ಕುಕನೂರ ಪಿಎಸ್‍ಐ ಚಂದ್ರಹಾಸ ಹಾಗೂ ಹಿರಿಯರ ಸಮ್ಮುಖದಲ್ಲಿ ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಿ ಯಶಸ್ವಿ ಕಂಡುಕೊಂಡಿದ್ದಾಳೆ. ಸುರೇಶ ಪ್ರೀತಿಸಿದವಳ ಜೊತೆ ಮದುವೆಯಾಗಿದ್ದು ಒಂದೆಡೆಯಾದರೆ, ಇಷ್ಟು ದಿನಗಳ ಕಾಲ ಇವನೇ ನನ್ನ ಗಂಡ ಎಂದು ಭಾವಿಸಿ ಮದುವೆ ಮಾಡಿಕೊಳ್ಳುವದಕ್ಕೆ ಮದುಮಗಳಾಗಿ ಚಿಕ್ಕಬೀಡನಾಳ ಗ್ರಾಮಕ್ಕೆ ಬಂದಿದ್ದ ಮತ್ತೋರ್ವ ಯುವತಿ ಹಾಗೂ ಅವರ ಕುಟುಂಬಕ್ಕೆ ಸುರೇಶ ಮೋಸ ಮಾಡಿದಂತಾಗಿದೆ. ನಿಶ್ಚಿತಾರ್ಥ ಸೇರಿದಂತೆ ಹಿರಿಯರ ಸಮ್ಮುಖದಲ್ಲಿ ಕನ್ಯಾದಾನ ಮಾಡಿದ್ದ ಗ್ರಾಮಸ್ಥರಿಗೆ ತೀವ್ರ ಹಿನ್ನಡೆಯಾಗಲು ಕಾರಣನಾಗಿರುವ ಸುರೇಶನಿಂದ ಅನ್ಯಾಯಕ್ಕೊಳಗಾದ ಯುವತಿ ಕುಟುಂಬಕ್ಕೆ ಪರಿಹಾರ ಕೊಡಿಸಬೇಕೆಂದು ಕುಟುಂಬ ಸಂಭಂದಿಕರು ಒತ್ತಾಯಿಸಿದ್ದಾರೆ.

Leave a Reply