You are here
Home > Koppal News > ​ಹಸಿರು ಕಾಂತ್ರಿಯ ಹರಿಕಾರ ಡಾ.ಬಾಬು ಜಗಜೀವರಾಂ ರವರು : ಶೇಖರಪ್ಪ ನಾಗರಳ್ಳಿ 

​ಹಸಿರು ಕಾಂತ್ರಿಯ ಹರಿಕಾರ ಡಾ.ಬಾಬು ಜಗಜೀವರಾಂ ರವರು : ಶೇಖರಪ್ಪ ನಾಗರಳ್ಳಿ 

ಭಾರತದ ಕೃಷಿಯಲ್ಲಿ ಮಹತ್ತರವಾದ ಬದಲಾವಣೆಯನ್ನು ಮಾಡಿ, ಕೃಷಿಯನ್ನು ಉನ್ನತೀಕರಣ ಸೃಷ್ಟಿಸಿದ ಡಾ. ಬಾಬು ಜಗಜೀವನರಾಂ ಅವರು ಹಸಿರು ಕಾಂತ್ರಿಯ ಹರಿಕಾರರು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಹೇಳಿದರು.
ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 110ನೇ ಜನ್ಮದಿನಾಚರಣೆಯ ನಿಮಿತ್ಯ ಬುಧವಾರದಂದು ಶಾದಿ ಮಹಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ, ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಡಾ. ಬಾಬು ಜಗಜೀವನರಾಂ ಅವರು ಭಾರತದ ಉಪಪ್ರಧಾನಿಯಾಗಿ, ಹಾಗೂ ನೆಹರು ಕ್ಯಾಬಿನೇಟ್‍ನ 6 ಖಾತೆಗಳ ಮಂತ್ರಿಗಳಗಾ ಕಾರ್ಯನಿರ್ವಹಿಸಿದ್ದಾರೆ.  ಆರ್ಥಿಕವಾಗಿ ಹಿಂದುಳಿದ ಸಾಮಾಜಗಳ ಅಭಿವೃದ್ಧಿಗಾಗಿ ಹೋರಾಡಿದ್ದಾರೆ.  ಹಿಂದುಳಿದ ವರ್ಗದವರಬಗ್ಗೆ ಕಾಳಜಿ ವಹಿಸಿದ್ದರು.  ನಮ್ಮ ಸರ್ಕಾರವು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ನೀಡುತ್ತಿದೆ.  ವಿಚಾರವಂತರಾಗಲು ಅತೀ ಅವಶ್ಯಕವಾದುದ್ದು ಶಿಕ್ಷಣ, ಆದ್ದರಿಂದ ಶಿಕ್ಷಣವಂತರಾದಗ ಮಾತ್ರ ಸಮಾಜಗಳ ಅಭಿವೃದ್ಧಿ ಸಾಧ್ಯ.  ಶಿಕ್ಷಣದಿಂದ ತಿಳುವಳಿಕೆ ಹೆಚ್ಚುತ್ತದೆ.  ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಒಳ್ಳೆಯ ಪ್ರಜೆಗಳನ್ನಾಗಿಸಿ. ಎಂದು ಜಿ.ಪಂ.ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ತಿಳಿಸಿದರು.

ಹಂಪಿ ವಿಶ್ವ ವಿದ್ಯಾಲಯದ ಸಂಶೋಧನಾ ವಿಧ್ಯಾಥಿಯಾದ ಹನುಮಂತಪ್ಪ ಜವಳಿಗೇರಾ ಅವರು ಡಾ. ಬಾಬು ಜಗಜೀವನರಾಂ ಕುರಿತು ವಿಶೇಷ ಉಪನ್ಯಾಸ ನೀಡಿ, ಜಗಜೀವನರಾಂ ಅವರು ಯೋಜನಾ ಪೂರ್ವವಕದಿಂದ ಆಡಳಿತ ನಡೆಸಿದಂತಹ ನಾಯಕರು.  ನಿಜವಾದ ಭಾರತವನ್ನು ಅರ್ಥಮಾಡಿಕೊಂಡಿದ್ದರು.  ಭಾರತದ ವಿವಿಧ ಪ್ರದೇಶಗಳ ವ್ಯವಸ್ಥೆಯ ಬಗ್ಗೆ ಚಿಂತನೆ ಮಾಡುತ್ತಿದ್ದರು.  ಇಂದಿನ ಭಾರತಕ್ಕೆ ಜಗಜೀವನರಾಂ ರಂತಹ ನಾಯಕರು ಬೇಕಾಗಿದ್ದಾರೆ.  ಇವರು ದಲಿತ ವರ್ಗಕ್ಕೆ ಅಕ್ಷರವನ್ನು ಕೊಟ್ಟಿಲ್ಲ, ದಲಿತ ಜನರಲ್ಲಿ ಅಡಗಿದ ಸಾಂಸ್ಕøತಿಕ ಕಲೆಯಗೆ ಪ್ರಾಮುಖ್ಯತೆ ನೀಡಿದ್ದಾರೆ.  ಸಂಸ್ಕøತಿಕ ಸಿದ್ಧಾಂತ ಅವಶ್ಯವಾಗಿದೆ ಎಂದು ಜಗಜೀವನರಾಂ ಹೇಳಿದ್ದಾರೆ.  28ನೇ ವಯಸ್ಸಿನಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. 75 ವರ್ಷಗಳ ನಂತರ ಭಾರತದ ಶಿಕ್ಷಣವು ಖಾಸಗಿಕರಣವಾಗುತ್ತದೇ ಎಂದು ಜಗಜೀವನರಾಂ ಅವರು ತಮ್ಮ ಬರಹಗಳಲ್ಲಿ ತಿಳಿಸಿದ್ದಾರೆ.  ಅವರ ಬರಹಗಳನ್ನು ಎಲ್ಲರೂ ಓದಬೇಕು ಎಂದು ಹನುಮಂತಪ್ಪ ಜವಳಿಗೇರಾ ಅವರು ಅಭಿಪ್ರಾಯ ಪಟ್ಟರು.

ಭವ್ಯ ಮೆರವಣಿಗೆ : ಡಾ. ಬಾಬು ಜಗಜೀವನರಾಂ ರವರ ಭಾವಚಿತ್ರದ ಮೆರವಣಿಗೆಗೆ ಕೊಪ್ಪಳ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು  ಚಾಲನೆ ನೀಡಿದರು.  ಕೊಪ್ಪಳ ತಹಶಿಲ್ದಾರ ಕಛೇರಿಯಿಂದ ಪ್ರಾರಂಭಗೊಂಡು, ಡಾ. ಬಾಬು ಜಗಜೀವನರಾಂ ವೃತ್ತದ ಮಾರ್ಗವಾಗಿ ಜವಾಹರ ರಸ್ತೆ ಮೂಲಕ ಶಾದಿ ಮಹಲ್ ವರೆಗೆ ಮೆರವಣಿಗೆ ಜರುಗಿದ್ದು, ಇದರಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂಧಿ ವರ್ಗದವರು ಪಾಲ್ಗೊಂಡಿದ್ದರು.  ಅಲ್ಲದೆ ಮೆರವಣಿಗೆಯಲ್ಲಿ ಹಗಲು ವೇಷ, ರಾಮಾಯಣ ವೇಷಧಾರಿಗಳು, ತಾಶಾ ತಂಡಗಳು ಭಾಗವಹಿಸಿದ್ದರು.

ಸನ್ಮಾನ :  ಕಾರ್ಯಕ್ರಮದ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ಹಂಪಿ ವಿಶ್ವ ವಿದ್ಯಾಲಯದ ಸಂಶೋಧನಾ ವಿಧ್ಯಾಥಿಯಾದ ಹನುಮಂತಪ್ಪ ಜವಳಿಗೇರಾ ಮತ್ತು ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು, ಹಾಗೂ ಡಾ. ಬಾಬು ಜಗಜೀವನರಾಂ ರವರ ಕೊಡುಗೆಗಳ ಕುರಿತು ಕೊಪ್ಪಳ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಸನ್ಮಾನಿಸಲಾಯಿತು.  

ಸಮಾರಭದ ಉದ್ಘಾಟನೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ ಖಾದ್ರಿ ಅವರು ನೆರೆವೇರಿಸಿದರು. ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಸಹಾಯಕ ಆಯುಕ್ತ ಗುರುದತ್ತ ಹೆಗ್ಡೆ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ತಹಶಿಲ್ದಾರ ಗುರುಬಸವರಾಜ, ಜಿ.ಪಂ. ಸದಸ್ಯ ಗುಳಪ್ಪ ಹಲಗೇರಿ, ಅಮಜದ್ ಪಟೇಲ್, ಗಾಳೆಪ್ಪ ಪೂಜಾರ, ಮುತ್ತುರಾಜ ಕುಷ್ಟಗಿ, ಮಾರುತ್ತೆಪ್ಪ ಹಲಗೇರಿ, ಗವಿಸಿದ್ದಪ್ಪ ಕಂದಾರಿ, ಸಿದ್ದಪ್ಪ ಕಿಡದಾಳ, ಹನುಮೇಶ ಕಡಿಮನಿ, ಸಿದ್ದರಾಂ, ಸುರೇಶ ಭೂಮರೆಡ್ಡಿ, ಖಾಜಾವಲಿ ಬನ್ನಿಕೊಪ್ಪ ಸೇರಿದಂತೆ ಸಮಾಜದ ಮುಂಖಡರುಗಳು ಪಾಲ್ಗೊಂಡಿದ್ದರು. 

ಆರಂಭದಲ್ಲಿ ಸದಾಶಿವ ಪಾಟೀಲ್ ತಂಡದಿಂದ ನಾಡಗೀತೆ ಜರುಗಿತು.  ಸಿ.ಬಿ. ಜಡಿಯವರ್ ನಿರೂಪಿಸಿದರು.  ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಬಿ. ಕಲ್ಲೇಶ ಅವರು ಸ್ವಾಗತಿಸಿ ಕೊನೆಯಲ್ಲಿ ಹೊಂದಿಸಿದರು.

Leave a Reply

Top