​ಸಿಂಧನೂರಿಗೆ ಹೊಸ ಮೆಡಿಕಲ್ ಕಾಲೇಜ್ ಪ್ರಾರಂಭಕ್ಕೆ    ಸಂಸದ ಸಂಗಣ್ಣ ಕರಡಿ ಮನವಿ

ಕೇಂದ್ರ ಆರೋಗ್ಯ ಮಂತ್ರಿ ಹರ್ಷವರ್ಧನ ಭೇಟಿ 

ಕೊಪ್ಪಳ : ರಾಜ್ಯದ ಹಿಂದುಳಿದ‌ ಮೂರು ಜಿಲ್ಲೆಗಳಲ್ಲಿ 
ವೈಧ್ಯಕೀಯ ಕಾಲೇಜು ಸ್ಥಾಪನೆ ಮಾಡುವದಾಗಿ ಕಳೆದ‌ಸಾಲಿನ‌2018-19 ನೇ ಸಾಲಿನಲ್ಲಿ ಅಂದಿನ ವಿತ್ತ ಮಂತ್ರಿ ಅರುಣ ಜೇಟಲ್ ಅವರು ತಮ್ಮ ಬಜೇಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಯಚೂರು ಜಿಲ್ಲೆಯ ಸಿಂಧನೂರ ನಗರಕ್ಕೆ  ಅತ್ಯಂತ ಸೂಕ್ತವಾಗಿದ್ದು, ಇಲ್ಲಿ ಮೆಡಿಕಲ್ ಕಾಲೇಜು ಆರಂಭಿಸಬೇಕೆಂದು ಕೇಂದ್ರ ಆರೋಗ್ಯ ಮಂತ್ರಿ ಹರ್ಷವರ್ಧನ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಸಂಸದ ಸಂಗಣ್ಣ ಕರಡಿ ಅವರು ಭೇಟಿ ಮಾಡಿ ಇಚಿಗೆ ಮನವಿ ಸಲ್ಲಿಸಿದ್ದಾರೆ.

ಹೈ- ಕ ಭಾಗದ ಕೊಪ್ಪಳ, ರಾಯಚೂರು, ಬಳ್ಳಾರಿ  ಈ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಂದರಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗುವುದು ಎಂದು ಪ್ರಸ್ತಾಪಿಸಿದ್ದರು, ಈ ಹಿನ್ನಲೆಯಲ್ಲಿ ರಾಯಚೂರು ಜಿಲ್ಲೆಯ ಸೀಂದನೂರ ನಗರ ಆತ್ಯಂತ ಸೂಕ್ತವಾಗಿದೆ,ದೇಶದಲ್ಲಿಯೇ ಟ್ರಾಕ್ಯಕ್ಟರ್ ಮಾರಾಟದಲ್ಲಿ ನಂಬರ್ ಒನ್ ಆಗಿದೆ, ಕೃಷಿ, ನೀರಾವರಿ ಕ್ಷೇತ್ರದಲ್ಲಿ ಅನೇಕ ಅವಕಾಶಗಳು ಇವೆ. ಇಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವದರಿಂದ ಜನರಿಗೆ ಆರೋಗ್ಯ ಸೇವೆ ಮತ್ತು ಶೈಕ್ಷಣಿಕ ಕ್ಷೇತ್ತದಲ್ಲಿ ಬೆಳವಣಿಗೆಗೆ ಸಹಾಯಕವಾಗಲಿದೆ.

ಈ‌ ಕುರಿತು ಕೇಂದ್ರ ಆರೋಗ್ಯ ಮಂತ್ರಿ ಕಾಳಜಿ ವಹಿಸಿ ಸಿಂಧನೂರನಲ್ಲಿ ಮೆಡಿಕಲ್‌ ಕಾಲೇಜು ಪ್ರಾರಂಭಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ, ಮನವಿ ಸ್ವೀಕರಿಸಿದ ಕೇಂದ್ರ ಸಚಿವರು ಸಿಂಧನೂರಿಗೆ ಶೀಘ್ರದಲ್ಲೇ ಹೊಸದಾಗಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಮಂಜೂರಾತಿ ನೀಡುವದಾಗಿ ಭರವಸೆಯನ್ನು ‌ನೀಡಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿರುವರು.

Please follow and like us:
error