​ರೂ.೬ ಕೋಟಿಯ ವಿವಿಧ ಕಾಮಗಾರಿಗಳಿಗೆ  ಶಾಸಕರಿಂದ ಭೂಮಿಪೂಜೆ

ಕೊಪ್ಪಳ:೦೮, ಗಿಣಿಗೇರಾ ಹಾಗೂ ಗೊಂಡಬಾಳ ಜಿಲ್ಲಾ 
ಪಂಚಾಯತಿಯ ವಿವಿಧ ಗ್ರಾಮಗಳಲ್ಲಿ ಅಂದಾಜು ಮೊತ್ತ 

ರೂ.೬ ಕೋಟಿಯ ಕಾಮಗಾರಿ ಭೂಮಿಪೂಜೆ ನೇರವೇರಿಸಿ 

ಗಿಣಿಗೇರಾ ಗ್ರಾಮದಲ್ಲಿ ೫೦-೫೪ ರಾಜ್ಯ ಹೆದ್ದಾರಿ ರಸ್ತೆ 

ಸುದಾರಣೆಗಳ ೨೦೧೮-೧೯ ಅನುದಾನದಲ್ಲಿ ರೂ.೪.೯೦ ಕೋಟಿ 

ಕಲ್ ಮಾಲ್ -ಸಿಗ್ಗಾವ್ ರಸ್ತೆಯ ೯ ಮೀಟರ್ ಅಗಲೀಕರಣ ಹಾಗೂ 

ಡಾಂಬರೀಕರಣಕ್ಕೆ ಭೂಮಿಪೂಜೆ ನೇರವರೇಸಿ ಬಳಿಕ 

ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ೩೦ 

ವರ್ಷಗಳ ಹೋರಾಟದ ಬೇಟಗೇರಿ ಅಳವಂಡಿ ಏತ ನೀರಾವರಿ 

ಕಾಮಗಾರಿಯು ರೂ.೮೮ ಕೋಟಿ ವೆಚ್ಚದಲ್ಲಿ ೮ ಸಾವಿರ ಏಕರೆ 

ಹೊಣಬೇಸಾಯದ ಭುಮಿಯು ನೀರಾವರಿಗೆ ಒಳಪಡಲಿದೆ. 

ಕ್ಷೆÃತ್ರದ ಇನ್ನೊÃಂದು ಮಹತ್ವಾಕಾಂಕ್ಷಿ ಏತ ನೀರಾವರಿ 

ಯೋಜನೆಯಾದ ರೂ.೧೮೦ ಕೋಟಿಯ ಬಹದ್ದೂರಬಂಡಿ 

ನವಲಕಲ್ ನೀರಾವರಿ ಕಾಮಗಾರಿಯು ಬರದಿಂದ ಸಾಗಿದ್ದು, 

ಕ್ಷೆÃತ್ರದಲ್ಲಿ ಅಂತರ್ಜಲ ಕುಸಿದಿದ್ದು, ಇದಕ್ಕಾಗಿ ಸರಣಿಪಿಕಪ್, 

ಬ್ರಿÃಜ್ ಕಂ ಬ್ಯಾರೇಜ್, ಚಕ್ ಡ್ಯಾಂ ನಿರ್ಮಾಣಗಳನ್ನು 

ಕೈಗೆತ್ತಿಕೊಳ್ಳಲಾಗಿದೆ. ಜನಸಂಖ್ಯಾ ಅನುಗುಣವಾಗಿ ಪ್ರತಿ 

ಗ್ರಾಮಕ್ಕೂ೧ ಕೋಟಿಯಿಂದ ರೂ.೨೦ ಕೋಟಿ ಅನುದಾನ 

ಮಂಜೂರು ಮಾಡಿಸಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿಗೆ 

ಪ್ರಾಮಾಣಿಕ ಪ್ರಯತ್ನಮಾಡಿದ್ದೆÃನೆ. ರೂ. ೨೬೫ 

ಕೋಟಿಯ ಕೊಪ್ಪಳ-ಯಲಬುರ್ಗಾ ಕೆರೆ ತುಂಬಿಸುವ 

ಅನುದಾನದಲ್ಲಿ ಗಿಣಿಗೇರಿ ಗ್ರಾಮವನ್ನು ಶಿವಪೂರದ 

ತುಂಗಭದ್ರಾ ಹಿನ್ನಿÃರಿನಿಂದ ಗಿಣಿಗೇರಿ ಕೆರೆಗೆ ಕೆರೆ 

ತುಂಬಿಸಲಾಗುವುದು. ಗಿಣಿಗೇರಿ ಗ್ರಾಮದ ಬಸ್ ಸ್ಟಾö್ಯಂಡ್ 

ನಿರ್ಮಾಣಕ್ಕೆ ರೂ.೧ ಕೋಟಿ ಅನುದಾನ ಬಿಡುಗಡೆಯಾಗಿದ್ದು, 

ರೂ.೨.೫೦ ಕೊಟಿಯ ಹಾಸ್ಟೆÃಲ್ ನಿರ್ಮಾಣ ಕಾಮಗಾರಿಯು 

ಮುಕ್ತಾಯಹಂತದಲ್ಲಿದ್ದು, ಶ್ರಿÃಘ್ರವೇ 

ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು. 

ಅಭಿವೃದ್ದಿಯ ದೂರದೃಷ್ಟಿಯುಳ್ಳ ನಾಯಕರ 

ಕೈಜೋಡಿಸಲು ಜನತೆಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಹಾಲಿ ಸದಸ್ಯ 

ಕೆ.ರಾಜಶೇಖರ ಹಿಟ್ನಾಳ, ಜಿ.ಪಂ.ಸದಸ್ಯೆ ಗುಳಪ್ಪ ಹಲಗೇರಿ 

ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ 

ಸುರೇಶಬೂಮರೆಡ್ಡಿ, ಮುಖಂಡರುಗಳಾದ ಗಾಳೆಪ್ಪ 

ಪೂಜಾರ, ಬಸವರಾಜ ಆಗೋಲಿ, ಸುಬ್ಬಣ್ಣ ಪೂಜಾರ, 

ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ, ರವಿ, 

ಮುತ್ತುರಾಜ ಪೂಜಾರ, ಪಂಪಣ್ಣ ಪೂಜಾರ, ಪೀರಾ ಹುಸ್ಸೆÃನ್ 

ಗೊಂದಿಹೊಸಳ್ಳಿ, ಉಮೇಶ ಪೂಜಾರ, ವಕ್ತಾರ 

ಕುರಗೋಡ ರವಿ ಯಾದವ್ ಉಪಸ್ಥಿತರಿದ್ದರು.

Please follow and like us:
error