​ಮಧ್ಯಮ ವರ್ಗ, ರೈತ, ಮಹಿಳಾ ಬಜೆಟ್ : ಕೊಪ್ಪಳ ಸಂಸದ ಸಂಗಣ್ಣ ಕರಡಿ ಅನಿಸಿಕೆ 

|ರಾಜ್ಯದ ಶೂನ್ಯ ಪದ್ಧತಿ ಕೃಷಿಗೆ ಒತ್ತು ನೀಡಿದ ಎನ್‌ಡಿಎ
ಕೊಪ್ಪಳ: ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಇದೊಂದು ಮಧ್ಯಮ, ಬಡವರ, ರೈತರ ಹಾಗೂ ಮಹಿಳಾ ಸ್ನೇಹಿ ಬಜೆಟ್ ಆಗಿದೆ. ಆ ಮೂಲಕ ನವ ಭಾರತ ನಿರ್ಮಾಣ ಮಾಡುವ ಕನಸನ್ನು ಸಾಕಾರಗೊಳಿಸುವ ಮುಂಗಡ ಪತ್ರ ಮುಂದಿಟ್ಟಿದ್ದಾರೆ ಎಂದು ಕೊಪ್ಪಳ ಲೋಕಸಭಾ ಸದಸ್ಯರಾದ ಸಂಗಣ್ಣ ಕರಡಿ ಹೇಳಿದ್ದಾರೆ.
ಶುಕ್ರವಾರ ಮಂಡನೆಯಾದ ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ್ದು, ತೆರಿಗೆ ವಿನಾಯಿತಿಯನ್ನು ೫ ಲಕ್ಷ ರೂಪಾಯಿವರೆಗೆ ನೀಡಿದ್ದಾರೆ. ಆ ಮೂಲಕ ಮಧ್ಯಮ ವರ್ಗದ ಜನತೆ ಪಾಲಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇನ್ನು ಮನೆ ಖರೀದಿ ಮಾಡುವ ಜನತೆಗೆ ೭ ಲಕ್ಷ ವರೆಗಿನ ಗೃಹ ಸಾಲಕ್ಕೆ ೧೫ ವರ್ಷ ತೆರಿಗೆ ವಿನಾಯಿತಿ ನೀಡಿದ್ದು ದೊಡ್ಡ ಸಹಕಾರ. ಮುಂದಿನ ೫ ವರ್ಷಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ೧೦೦ ಕೋಟಿ ಅನುದಾನ ನೀಡಿದ್ದು ಗ್ರಾಮ ಭಾರತವನ್ನು ನವ ಭಾರತವನ್ನಾಗಿ ಮಾಡಲು ಇಟ್ಟ ಹೆಜ್ಜೆಯಾಗಿದೆ ಎಂದಿದ್ದಾರೆ.

ದೇಶದ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದು, ನಾರಿ ಟು ನಾರಾಯಣಿ ಯೋಜನೆ ಮೂಲಕ ಗ್ರಾಮೀನ ಮಹಿಳಾ ಪಾಲುದಾರಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಲಿಂಗ ತಾರತಮ್ಯ ಹೋಗಲಾಡಿಸಲು ದಿಟ್ಟ ಕ್ರಮಕ್ಕೆ ಮುಂದಾಗಿದ್ದಾರೆ. ೬೦ ವರ್ಷ ಮೇಲ್ಪಟ್ಟವರಿಗೆ ಮಾಸಿಕ ೩೦೦೦ ಸಾವಿರ ಪಿಂಚಣಿ ಘೋಷಿಸುವ ಮೂಲಕ ಹಿರಿಯ ಜೀವಿಗಳಿಗೆ ರಕ್ಷಣೆ ನೀಡಿದ್ದಾರೆ. ಸ್ಟ್ಯಾಂಡ್‌ಪ್ ಯೋಜನೆ ಮೂಲಕ ಎಸ್ಸಿ, ಎಸ್ಟಿ, ಮಹಿಳೆಯರಿಗೆ ಹಣಕಾಸು ಸಹಾಯ ನೀಡಿದ್ದಾರೆ. ಸ್ವಚ್ಚ ಭಾರತ್ ಮಿಷನ್ ಅಡಿ ೯.೫ ಕೋಟಿ ಶೌಚಾಲಯ ನಿರ್ಮಾಣ ಮಾಡುವುದು, ಗ್ರಾಮೀಣ ಅಭಿವೃದ್ಧೀ ನಿಟ್ಟಿನಲ್ಲಿ ಕುಡಿಯುವ ನೀರು, ಶೌಚಾಲಯ, ಚರಂಡಿ ನಿರ್ಮಾಣ. ಮುಂದಿನ ೫ ವರ್ಷದಲ್ಲಿ ೨೫ ಸಾವಿರ ಕಿಮೀ ರಸ್ತೆ ನಿರ್ಮಾಣದ ಗುರಿ ಹೊಂದಿರುವ ಬಗ್ಗೆ ಘೋಷಣೆ ಮಾಡಿದ್ದು ಅಭಿವೃದ್ಧಿ ಪರ ಬಜೆಟ್ ಎಂದು ತೋರಿಸುತ್ತದೆ.

ಇನ್ನು ಕೃಷಿಗಾಗಿ ನಮ್ಮ ಸರ್ಕಾರ ಸಾಕಷ್ಟು ಯೋಜನೆಗಳನ್ನು ಘೋಷಣೆ ಮಾಡಿದೆ. ಶೂನ್ಯ ಬಂಡವಾಳ ಮೂಲದ ಕೃಷಿಯನ್ನು ಅಭಿವೃದ್ಧಿಪಡಿಸುವ ಕುರಿತು ಘೊಷಣೆ ಮಾಡುವ ಮೂಲಕ ಕರ್ನಾಟಕ ಮೂಲದ ಶೂನ್ಯ ಕೃಷಿ ಪದ್ಧತಿಗೆ ಪ್ರೋತ್ಸಾಹ ನೀಡಿದ್ದಾರೆ. ರೈತರ ಬೆಳೆಗೆ ಸೂಕ್ತ ಮಾರುಕಟ್ಟೆ, ಸೂಕ್ತ ಬೆಂಬಲ ಬೆಲೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ತಿಳಿಸಿದ್ದಾರೆ. ದೇಶದಲ್ಲಿ ೧೦ ಸಾವಿರ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ ಮಾಡುವ ಘೊಷಣೆ. ಬರುವ ವರ್ಷಗಳಲ್ಲಿ ದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ೧.೯೫ ಕೋಟಿ ಮನೆಗಳ ನಿರ್ಮಾಣಕ್ಕೆ ನಮ್ಮ ಸರ್ಕಾರ ಮುಂದಾಗಿದೆ. ಮೂಲ ಸೌಕರ್ಯ, ಉದ್ಯೋಗ ಸೃಷ್ಟಿಗೆ ಕ್ರಮ ಸೇರಿದಂತೆ ಇದೊಂದು ಅಭಿವೃದ್ಧಿ ಪರ, ರೈತ, ಮಧ್ಯಮ ವರ್ಗದ ಪರ ಬಜೆಟ್ ಮಂಡಿಸಿದ್ದಾರೆ ಎಂದು ಹೇಳಿದ್ದಾರೆ.

Please follow and like us:
error