​ಮಕ್ಕಳಲ್ಲಿ ಕಲೆಯ ಅಭಿರುಚಿ ಹಚ್ಚಬೇಕು – ಅಶೋಕ ಕುಲಕರ್ಣಿ

ಪರಿಶುದ್ಧವಾದ ವಾತಾವರಣ ಮಕ್ಕಳಲ್ಲಿ ಜ್ಞಾನ, ತಿಳುವಳಿಕೆ, ಪ್ರತಿಭೆಯನ್ನು ಪ್ರೋತ್ಸಾಹಿಸುತ್ತದೆ. ಅದೇ ರೀತಿಯಾಗಿ ಮಕ್ಕಳ ಕಲೆಯನ್ನು ಎಂದು ಪ್ರೋತ್ಸಾಹಿಸಿದಾಗ ಪರಿಶುದ್ದವಾದ ವಾತಾವರಣ ಸೃಷ್ಟಿಯಾಗುತ್ತದೆ ಹಾಗಾಗಿ ನಾವುಗಳು ಮಕ್ಕಳಲ್ಲಿ ಕಲೆಯ ಅಭಿರುಚಿಯನ್ನು ಹಚ್ಚಬೇಕು ಸಾರ್ವಜನಿಕ ಶಿಕ್ಷಣ ಇಲಾಖೆಯ ಪರಿವೀಕ್ಷಕ  ಅಶೋಕ್ ಕುಲಕರ್ಣಿ ತಿಳಿಸಿದರು.
ಅವರು ಇತ್ತೀಚಿಗೆ ನಗರದ ಹಿರಿಯ ಪ್ರಾಥಮಿಕ ಶಾಲೆ ರೈಲ್ವೆ ಸ್ಟೇಷನ್ ಎದರುಗಡೆ ಕೊಪ್ಪಳದಲ್ಲಿ ರಕ್ಷಣಾ ಟ್ರಸ್ಟ್ ಬೂದಗುಂಪಾ  ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕೊಪ್ಪಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರುಗಳ ಸಹಯೋಗದೊಂದಿಗೆ ನಡೆದ ‘ಒಂದು ತಿಂಗಳ ರಂಗ ಶಿಬಿರದ ಮುಕ್ತಾಯ ಸಮಾರಂಭ ಮತ್ತು ನಾಟಕ ಪ್ರದರ್ಶನ’ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಮಾತನಾಡಿದರು.

ನಂತರ ಮಹಿಳಾ ಮತ್ತು ಮಕ್ಕಳ ಇಲಾಖೆಯ ನಿರೂಪಣಾಧಿಕಾರಿ ಮಂಜುನಾಥ್ ರವರು ಮಾತನಾಡುತ್ತಾ  ಮಕ್ಕಳ ಕೌಶಲ್ಯ, ಪ್ತತಿಭೆ, ಆಸಕ್ತಿಗಳನ್ನು ಗುರುತಿಸಲು ರಂಗಭೂಮಿ ಒಂದು ವಿಶಿಷ್ಟ ಮಾಧ್ಯಮ ಎಂದರು.  ರಂಗ ನಿರ್ದೇಶಕಿ ಶೀಲಾ ಹಾಲ್ಕುರಿಕೆಯವರು ತಮ್ಮ ಪ್ರಾಸ್ತಾವಿಕದಲ್ಲಿ ಮಕ್ಕಳ ರಂಗಭೂಮಿಯು ಮಕ್ಕಳಲ್ಲಿ ಸಮುದಾಯ, ಸಮಾಜ, ಸಂಸ್ಕøತಿಗಳ ಜ್ಞಾನವನ್ನು ಎಳೆಯ ವಯಸ್ಸಿನಲ್ಲೇ ಬಿತ್ತುತ್ತದೆ ಮತ್ತು ಅವರು ಉತ್ತಮ ಪ್ರಜೆಯಾಗಲು ಸಹಕರಿಸುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಬೆಪ್ಪು ತಕ್ಕಡಿ ಬೋಳೇಶಂಕರ ನಾಟಕವು ಪ್ರದರ್ಶನಗೊಂಡಿತು. ಮಕ್ಕಳು ಮನೋಜ್ಞವಾಗಿ ಅಭಿನಯಿಸಿದರು. 

ಈ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಮಹಾಂತೇಶ ಮಲ್ಲನಗೌಡರ್, ಮುಖ್ಯೋಪಾದ್ಯಾಯ ಲಸಗರ ನಾಯಕ್, ಕವಿ ಶರಣಪ್ಪ ಟಿ.ವಿ  ಗಿಣಿಗೇರಿ, ಗೋವಿಂದರಾಜ ಈಳೀಗೇರ್ ಅಧ್ಯಕ್ಷರು ರಕ್ಷಣಾ ಟ್ರಸ್ಟ್, ಡಾ|| ರಾಧಾ ಕುಲಕರ್ಣಿ, ತ್ರಿಶಾಲಾ ಪಾಟೀಲ್ ಸಮಾಜ ಸೇವಕಿ, ಶಿವಾರೆಡ್ಡಿ, ಸಂಗಪ್ಪ ಚಕ್ರಸಾಲಿ ಸಿ.ಆರ್.ಪಿಗಳು, ಮತ್ತು ಶಾಲಾ ಶಿಕ್ಷಕ ವರ್ಗ, ಹಾಗೂ ಮಕ್ಕಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 

ಕಾರ್ಯಕ್ರಮದ ನಿರೂಪಣೆಯನ್ನು ಷಣ್ಮುಖಯ್ಯ ಸ್ವಾಮಿ ಮತು

Please follow and like us:
error