You are here
Home > Koppal News > ​ಬಿಜೆಪಿ ಸಂಸ್ಥಾಪನಾ ದಿನಾಚರಣೆ : ಸಿ.ವಿ.ಚಂದ್ರಶೇಖರರ ಮನೆಯಲ್ಲಿ ಧ್ವಜಾರೋಹಣ

​ಬಿಜೆಪಿ ಸಂಸ್ಥಾಪನಾ ದಿನಾಚರಣೆ : ಸಿ.ವಿ.ಚಂದ್ರಶೇಖರರ ಮನೆಯಲ್ಲಿ ಧ್ವಜಾರೋಹಣ

cvc_koppalಬಿಜೆಪಿ ಪಕ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕೊಪ್ಪಳದಲ್ಲಿಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಂ.ದಿನದಯಾಳ ಉಪಾಧ್ಯಾಯರ ನೂರನೇ ವರ್ಷಾಚರಣೆಯ ನಿಮಿತ್ಯ ಇಡೀ ವರ್ಷಪೂರ್ತಿ ಅಭಿಯಾನವನ್ನಾಗಿ ಆಚರಿಸಲಾಗುತ್ತದೆ.

ರಾಜ್ಯದ ಒಟ್ಟು 54497 ಬೂತ್ ಗಳಲ್ಲಿ ಎಲ್ಲಾ ಬೂತ್ ಅಧ್ಯಕ್ಷರ ಮನೆಯ ಮೇಲೆ  ಧ್ವಜಾರೊಹಣವಾಗಬೇಕೆಂಬ ರಾಜ್ಯದ ಕರೆಯ ಹಿನ್ನೆಲೆಯಲ್ಲಿ ರಾಷ್ಟ್ರ,ರಾಜ್ಯ, ಜಿಲ್ಲಾ ಹಾಗೂ ತಾಲೂಕ ಮಟ್ಟದ ಎಲ್ಲಾ ನಾಯಕರುಗಳ ಮನೆಯ ಮೇಲೆ ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತಿದೆ. ಇದರ ನಿಮಿತ್ಯ ರಾಷ್ಟ್ರಿಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ ಅವರ ಮನೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಬಿಇಜೆಪಿಯ  ನಾಯಕರಾದ ಡಾ.ಕೆ.ಜಿ.ಕುಲಕರ್ಣಿ, ಶಿವಕುಮಾರ ಹಕ್ಕಾಪಕ್ಕಿ, ವಿರುಪಾಕ್ಷಪ್ಪ ಅಗಡಿ, ಹೇಮಲತಾ ಪರಿಕ್ಷಿತರಾಜ್, ಸೈಯದ್ ನಾಸಿರುದ್ದೀನ್ , ಹಾಲೇಶ್ ಕಂದಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

Leave a Reply

Top