​ಪತ್ರಿಕೋದ್ಯಮ ಮತ್ತು ಸಂವಹನ ತರಬೇತಿಗೆ ಪ್ರೋತ್ಸಾಹ ಧನ : ಅರ್ಜಿ ಆಹ್ವಾನ*****************

 ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪತ್ರಿಕೋದ್ಯಮ ಮತ್ತು ಸಂವಹನ (ಪ್ರಿಂಟ್ & ಎಲೆಕ್ಟ್ರಾನಿಕ್ ಮೀಡಿಯಾ) ತರಬೇತಿಗೆ ಪ್ರೋತ್ಸಾಹ ಧನ ನೀಡಲು ಅರ್ಹ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. 

 ಅಲ್ಪಸಂಖ್ಯಾತರ ಸಮುದಾಯದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ)  ಅಭ್ಯರ್ಥಿಗಳಿಗೆ ಮಾತನಾಡುವ, ಬರೆಯುವ ಸಾಮಥ್ರ್ಯ, ಸಂಕ್ಷಿಪ್ತ, ವಸ್ತುನಿಷ್ಠ ಮತ್ತು ನಿಖರವಾಗಿ ಅರ್ಥಮಾಡಿಕೊಳ್ಳಲು ಸುಲಭವಾದಂತಹ, ಸಾಮಥ್ರ್ಯ ಹೊಂದಿರುವ ಕಥೆಗಳು ಅಥವಾ ಮಾಹಿತಿಯ ಸುದ್ದಿಯನ್ನು ಮೌಲ್ಯಮಾಪನ ಮಾಡಲು ಸಾಮಥ್ರ್ಯ ಹೊಂದಿರುವ, ಸ್ಥಳಗಳು ಮತ್ತು ಇವೆಂಟ್‍ಗಳಲ್ಲಿ ಆಸಕ್ತಿ ಹೊಂದುವವರನ್ನು ಅತ್ಯುತ್ತಮ ಆಲಿಸುವಿಕೆ ಮತ್ತು ವೀಕ್ಷಣೆ ಕೌಶಲ್ಯಗಳು, ಉತ್ತಮ ಸಾಮಾನ್ಯ ಜ್ಞಾನ, ಸ್ವತಂತ್ರ ಸಸಂಶೋಧನೆ ಮತ್ತು ಒಳ್ಳೆಯ ವೇಗ ಮತ್ತು ವಿರಾಮಗಳನ್ನು ನಡೆಸುವ ಸಾಮಥ್ರ್ಯ ಹೊಂದಿರುವ, ವಿಡಿಯೋಗಳನ್ನು ಸಂಪಾದಿಸಲು ಮತ್ತು ಹೇಳುವ ಸಾಮಥ್ರ್ಯ ಹೊಂದಿರುವ ಅಡೋಬ್ ಪ್ಲ್ಯಾಷ್, ಸಂಪಾದನೆ ಅಡಿಯೋ ಮತ್ತು ಪ್ರೊಡಕ್ಷನ್‍ಗಳನ್ನು ಉತ್ಪಾದಿಸುವ ಮೂಲಭೂತ ಸಾಮಥ್ರ್ಯವನ್ನು ಹೊಂದಿರುವ ಕ್ಷೇತ್ರದಲ್ಲಿ ಬ್ರೇಕಿಂಗ್ ನ್ಯೂಸಿಂಗ್ ಫೈಲ್ ಮಾಡುವ ಸಾಮಥ್ರ್ಯ, ಮತ್ತು ಆನ್‍ಲೈನ್ ಮೂಲಕ ಚರ್ಚೆಯನ್ನು ಮಾಧ್ಯಮಗೊಳಿಸುವ ಸಾಮಥ್ರ್ಯ ಹೊಂದಿರುವವರನ್ನು ಆಯ್ಕೆ ಮಾಡಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪತ್ರಿಕೋದ್ಯಮ ಮತ್ತು ಸಂವಹನ (ಪ್ರಿಂಟ್ & ಎಲೆಕ್ಟ್ರಾನಿಕ್ ಮೀಡಿಯಾ) ತರಬೇತಿ ನೀಡಲು ಪ್ರೋತ್ಸಾಹ ಧನ ನೀಡಲಾಗುವುದು.  

 ತರಬೇತಿಯಲ್ಲಿ ನೀಡುವ ಪ್ರೋತ್ಸಾಹ ಧನ ವಿವರ ಇಂತಿದೆ, ಅಭ್ಯರ್ಥಿಗೆ 03 ತಿಂಗಳ ಅವಧಿಯ ತರಬೇತಿಗೆ ರೂ. 30,000/-, 6 ತಿಂಗಳ ಅವಧಿಯ ತರಬೇತಿಗೆ ರೂ. 60,000/-, ಮತ್ತು 01 ವರ್ಷದ ಅವಧಿಯ ತರಬೇತಿಗೆ ರೂ. 1,20,000/-, ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕರ್ನಾಟಕದ ನಿವಾಸಿಯಾಗಿರಬೇಕು.  18 ರಿಂದ 40 ವರ್ಷ ವಯೋಮಿತಿಯಲ್ಲಿರಬೇಕು.  ಕುಟುಂಬದ ವಾರ್ಷಿಕ ಆದಾಯ ರೂ. 6.00 ಮೀರಿರಬಾರದು.  ಅಭ್ಯರ್ಥಿಗಳು ಪದವಿಧರರಾಗಿರಬೇಕು.  ಪತ್ರಿಕೋದ್ಯಮ ತರಬೇತಿಯನ್ನು ಸರ್ಕಾರಿ/ ಅರೆ ಸರ್ಕಾರಿ/ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳ ಮೂಲಕ ಪಡೆಯುತ್ತಿರಬೇಕು.  ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಪ್ರೋತ್ಸಾಹ ಧನಕ್ಕೆ ಅರ್ಹರಾಗಿರುತ್ತಾರೆ.  ಜೊತೆಗೆ ಕೇಂದ್ರ/ ರಾಜ್ಯ ಸರ್ಕಾರದಿಂದ ನೀಡುವ ಇತರೆ ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿರುತ್ತಾರೆ.  ಪ್ರತಿ ತಿಂಗಳು ತರಬೇತಿ ಸಂಸ್ಥೆಯ ಹಾಜರಾತಿ ತಃಖ್ತೆ ಮತ್ತು ಅಭ್ಯರ್ಥಿಯ ಪ್ರಗತಿ ವರದಿಯನ್ನು ಪಡೆದು ಪ್ರೋತ್ಸಾಹಧನ ನೀಡಲಾಗುವುದು.  ಹಾಜರಾತಿ ಶೇ. 80% ಇರಬೇಕು.  ಪ್ರತಿ  ಅಭ್ಯರ್ಥಿಯ ಪ್ರೋತ್ಸಾಹಧನವನ್ನು  ಎನ್.ಇ.ಎಫ್.ಟಿ ಮೂಲಕ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.   ತರಬೇತಿ ಪ್ರಾರಂಭವಾದ ನಂತರ ಪ್ರತಿ ಅಭ್ಯರ್ಥಿಗೆ ಒಂದು ಲ್ಯಾಪ್ ಟಾಪ್ ಮತ್ತು ಕ್ಯಾಮರ ಒದಗಿಸಲಾಗುವುದು.  ಒಬ್ಬ ಅಭ್ಯರ್ಥಿಗೆ ಒಂದು ಬಾರಿ ಮಾತ್ರ ತರಬೇತಿ ಸೌಲಭ್ಯವನ್ನು ಪಡೆಯಲು ಅವಕಾಶ ಇರುತ್ತದೆ.  

 ಅರ್ಜಿ ಸಲ್ಲಿಸಲು ಇಲಾಖಾ ವೆಬ್‍ಸೈಟ್  www.gokdom.kar.nic.in ನಲ್ಲಿ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯವಿರುವ ದಾಖಲಾತಿಗಳೊಂದಿಗೆ ನಿರ್ದೇಶಕರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬೆಂಗಳೂರು, 20ನೇ ಮಹಡಿ, ವಿಶ್ವೇಶ್ವರಯ್ಯ ಗೋಪುರ, ಡಾ. ಬಿ.ಆರ್ ಅಂಬೇಡ್ಕರ್ ವೀದಿ, ಬೆಂಗಳೂರು-580001 ಇಲ್ಲಿಗೆ ಶೀಘ್ರ ಅರ್ಜಿ ಸಲ್ಲಿಸಬೇಕು ಎಂದು ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಮಹಿಮೂದ್  ತಿಳಿಸಿದ್ದಾರೆ.

Please follow and like us:
error