​ಪತ್ರಕರ್ತರ ಸಂಘಕ್ಕೆ ಕಸಾಪದಿಂದ ಅಗೌರವ :  ಖಂಡನೆ

ಕೊಪ್ಪಳ.ಜು.೦೪:  ಜಿಲ್ಲೆಯ ಕುಕನೂರ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಶ್ರೀ ಈಶ್ವರ ಹಾಗೂ ಮಾರುತೇಶ್ವರ ಸಮುದಾಯ ಭವನದಲ್ಲಿ ದಿ ೧೨ ಮತ್ತು ೧೩ ರಂದು ಜರುಗಲಿರುವ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ೧೧ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದ ಆಮಂತ್ರಣ ಪತ್ರಿಕೆಯಲ್ಲಿ ನಮ್ಮ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರ ಹೆಸರು ಹಾಕುವಲ್ಲಿ ನಿರ್ಲಕ್ಷö್ಯ ತೋರಿ ಹಿಂದಿನ ಅಧ್ಯಕ್ಷರ ಹೆಸರು ಮುದ್ರಣ ಮಾಡಿ ಹಾಲಿ ಅಧ್ಯಕ್ಷರ ಹೆಸರನ್ನು ಮುದ್ರಿಸದೇ ಅಗೌರವ ತೋರಿರುವುದು ಖಂಡರ್ನಾಹವಾಗಿದೆ ಎಂದು ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ.ದೊಡ್ಡಮನಿ, ರಾಜ್ಯ ಕಾರ್ಯಕಾರಣಿ ಸದಸ್ಯ ಜಿ.ಎಸ್.ಗೋನಾಳ, ಹಾಗೂ ನಾಮಕರಣ ರಾಜ್ಯ ಸದಸ್ಯ ಹರೀಶ್ ಹೆಚ್.ಎಸ್. ಸೇರಿದಂತೆ ಸದಸ್ಯ ಪತ್ರಕರ್ತರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿ ಕಸಪಾ ನಿರ್ಲಕ್ಷ್ ಧೋರಣೆಗೆ ಖಂಡಿಸಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇಡೀ ರಾಜ್ಯದ್ಯಾಂತ ಹೆಸರು ಮಾಡಿರುವಂತದ್ದು ಇದ್ದು, ಈ ಸಂಘ  ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವಂತವಾಗಿದೆ. ಈ ಸಂಘದ ಕೊಪ್ಪಳ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾಗಿ ಎಂ. ಸಾದಿಕ್ ಅಲಿ ಅವರು ಕಳೆದ ಒಂದು ವರ್ಷದ ಹಿಂದೆ ಆಯ್ಕೆಯಾಗಿದ್ದರೆ, ಒಂದು ವರ್ಷವಾದರೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರಾಜಶೇಖರ್ ಅಂಗಡಿ ಈ ವಿಷಯ ಅರಿತುಕೊಳ್ಳದೇ ಇರುವುದು ಅತ್ಯಂತ ದುರಂತದ ಸಂಗತಿಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯದಲ್ಲಿ ಸಮ ಪ್ರಮಾಣದಲ್ಲಿ ಭಾಷೆ, ನಾಡು, ನುಡಿ,  ಗಡಿ, ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುವಂತೆ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿವೆ. ಆದರೆ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾ ೧೧ ನೇ ಸಾಹಿತ್ಯ ಸಮ್ಮೆಳನದ ಆಮಂತ್ರಣ ಪತ್ರಿಕೆಯಲ್ಲಿ ಈ ರೀತಿಯ ಅವಘಡವನ್ನು ಜಿಲ್ಲೆಯ ನಾಗರಿಕರು ನಿರೀಕ್ಷಿಸಲಿರಲ್ಲಿಲ್ಲ, ಜಿಲ್ಲೆಯ ಕಾರ್ಯನಿರತ ಪತ್ರಕರ್ತರಿಗೆ ಇದು ಅಗೌರವ ತೋರಿದಂತಾಗಿದೆ.

ಅಲ್ಲದೇ ಜಿಲ್ಲೆಯ ಹಿರಿಯ ಸಾಹಿತಿಗಳನ್ನು ಮತ್ತು ಬರಹಗಾರನ್ನು ಹಾಗೂ ಕೆಲ ಹಿರಿಯ ಪತ್ರಕರ್ತರನ್ನು ವಿವಿಧ ಸಮ್ಮೆಳನದ ಗೋಷ್ಠಿಗಳಲ್ಲಿ ಹೆಸರು ಹಾಕದೆ ಅವಮಾನಿಸಿದೆ ಈ ಘಟನೆಯು ಸಹ ಖಂಡನಾರ್ಹವಾಗಿದೆ, ಜಿಲ್ಲೆಯ ಕಾರ್ಯನಿರತ ಪತ್ರಕರ್ತರೆಲ್ಲರು ಸಾಮೊಹಿಕವಾಗಿ ಕಸಪಾ ಜಿಲ್ಲಾ ಸಮ್ಮೆಳನವನ್ನು ಬಹಿಷ್ಕರಿಸಬೇಕು ಎಂದು ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ.ದೊಡ್ಡಮನಿ, ರಾಜ್ಯ ಕಾರ್ಯಕಾರಣಿ ಸದಸ್ಯ ಜಿ.ಎಸ್.ಗೋನಾಳ, ಹಾಗೂ ನಾಮಕರಣ ರಾಜ್ಯ ಸದಸ್ಯ ಹರೀಶ್ ಹೆಚ್.ಎಸ್. ಸೇರಿದಂತೆ ಜಿಲ್ಲೆಯ ಕಾರ್ಯನಿರತ ಪತ್ರಕರ್ತರು  ಒತ್ತಾಯಿಸಿದ್ದಾರೆ.

Please follow and like us:
error