​ನವವೃಂದಾವನಕ್ಕೆ ರಕ್ಷಣೆ ನೀಡಲು ಸಂಸದ ಸಂಗಣ್ಣ ಕರಡಿಯವರಿಂದ ಮನವಿ ಸಲ್ಲಿಕೆ 

ಸಂಸತ್‌ನಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರಿಗೆ ಒತ್ತಾಯ
ಕೊಪ್ಪಳ:ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ನವವೃಂದಾವನಗಡ್ಡೆಯಲ್ಲಿನ ಶ್ರೀ ವ್ಯಾಸರಾಜತೀರ್ಥರ ಮೂಲ ವೃಂದಾವನ ಧ್ವಂಸಗೊಳಿಸಿದ್ದನ್ನು ಖಂಡಿಸಿರುವ ಕೊಪ್ಪಳ ಸಂಸದ ಕರಡಿ ಸಂಗಣ್ಣನವರು, ಕೂಡಲೇ ನವವೃಂದಾವನಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಸಂಸತ್ ಕಲಾಪ ನಡೆಯುತ್ತಿರುವ ವೇಳೆ ಸಂಸತ್‌ನಲ್ಲೇ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿರುವ ಸಂಸದರು, ವ್ಯಾಸರಾಜತೀರ್ಥರು ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಅರಸ ಶ್ರೀಕೃಷ್ಣದೇವರಾಯರಿಗೆ ರಾಜಗುರುಗಳಾಗಿದ್ದರು. ಅಲ್ಲದೆ ಮಾಧ್ವ ಪರಂಪರೆಯ ಸಮುದಾಯಗಳಿಗೆ ಇವರು ಶ್ರೇಷ್ಠ ಯತಿಗಳು ಇಂತಹ ಮಹಾನ್ ಸಂತನ ಮೂಲ ವೃಂದಾವನವನ್ನು ಬುಧವಾರ ರಾತ್ರಿ ಯಾರೋ ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ. ಇದು ಹಿಂದೂ ಸಮುದಾಯಕ್ಕೆ ಆದ ಅವಮಾನ, ಇದರಿಂದಾಗಿ ವ್ಯಾಸರಾಜತೀರ್ಥರ ಆರಾಧಕರಿಗೆ ತೀವ್ರ ನೋವುಂಟಾಗಿದೆ. ಇಲ್ಲಿ ೯ ಯತಿಗಳ ವೃಂದಾವನಗಳಿದ್ದು, ಮತ್ತೆ ಈ ರೀತಿ ಆಗದಂತೆ ಕೇಂದ್ರ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಧ್ವಂಸ ಮಾಡಿದ ಪ್ರಕರಣದ ಕುರಿತು ಈಗಾಗಲೇ ಗಂಗಾವತಿ ಗ್ರಾಮೀಣ ಠಾಣೇಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಪಕ್ಕದಲ್ಲೇ ಯುನೆಸ್ಕೋ ಘೋಷಣೆ ಮಾಡಿದ ವಿಶ್ವಪರಂಪರೆ ತಾಣ ಹಂಪೆ ಇದೆ. ಈ ವೃಂದಾವನಗಡ್ಡೆ ಸಹ ಅದೇ ಪರಿಸರದಲ್ಲಿ ಬರುವ ಕಾರಣ ಇದೊಂದು ಐತಿಹಾಸಿಕ, ಧಾರ್ಮಿಕ ಶ್ರದ್ಧಾಕೇಂದ್ರವಾಗಿದೆ. ಇಲ್ಲಿ ನಾಡಿನ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಇಂತಹ ಧಾರ್ಮಿಕ, ಐತಿಹಾಸಿಕ ಸ್ಥಳಕ್ಕೆ ಸೂಕ್ತ ರಕ್ಷಣೆ ಇಲ್ಲದಿರುವುದು ಖೇದಕರ ಸಂಗತಿ. ಕೂಡಲೇ ಕೇಂದ್ರ ಸರ್ಕಾಕ ಐತಿಹಾಸಿಕ ಸ್ಥಳವಾದ ನವವೃಂದಾವನಗಡ್ಡೆಗೆ ಭದ್ರತೆ, ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

Please follow and like us:
error