You are here
Home > Koppal News > ​ದೇಶದಲ್ಲಿ ಸಾಮರಸ್ಯ ಜೀವನಕ್ಕೆ ಸೂಫಿ ಸಂತರ ಕೊಡುಗೆ ಅಪಾರ: ರಾಘವೇಂದ್ರ ಹಿಟ್ನಾಳ

​ದೇಶದಲ್ಲಿ ಸಾಮರಸ್ಯ ಜೀವನಕ್ಕೆ ಸೂಫಿ ಸಂತರ ಕೊಡುಗೆ ಅಪಾರ: ರಾಘವೇಂದ್ರ ಹಿಟ್ನಾಳ


ಕೊಪ್ಪಳ ನಗರದ ಮರ್ದಾನೆಗೈಬ್ ಉರ್ಸ್ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಸತ್ಯ, ಸನ್ಮಾರ್ಗದಲ್ಲಿ ನಡೆಯಲು ಜನತೆಗೆ ಬೋಧನೆ ಮಾಡಿದ ಸೂಫಿ ಸಂತರು ನಮ್ಮ ದೇಶದ ಉದ್ದಗಲ್ಲಕ್ಕೂ ಪ್ರಸಿದ್ಧ ದರ್ಗಾಗಳು ಇದ್ದು ಇವುಗಳು ಹಿಂದೂ ಮುಸಲ್ಮಾನರ ಭಾವೈಕ್ಯತೆಯ ಪವಿತ್ರ ಸ್ಥಳಗಳಾಗಿವೆ. ತಮ್ಮ ದಿವ್ಯ ಶಕ್ತಿಯಿಂದ ಸಮಾಜದ ಎಲ್ಲಾ ವರ್ಗದ ಜನರ ಕಲ್ಯಾಣ ಬಯಸುವ ಸೂಫಿ ಸಂತರು ಯಾವತ್ತು ತಮ್ಮ ಜೀವನದಲ್ಲಿ ಜಗತ್ತಿನ ವ್ಯಾಮೋಹಗಳನ್ನು ತೈಜಿಸಿ ಸೃಷ್ಠಿಕರ್ತನ ಮಾರ್ಗದಲ್ಲಿ ನಡೆದು ಅಲ್ಲಾನು ಕರುಣಿಸಿದ ತಮಗೆ ನಾಡಿನ ಜನರ ಒಳಿತಿಗಾಗಿ ಶ್ರಮಿಸಿದ್ದಾರೆ. ಅನೇಕ ಪವಾಡಗಳ ಇತಿಹಾಸವುಳ್ಳ ಮರ್ದಾನಗೈಬ್ ದರ್ಗಾವು ಕೊಪ್ಪಳ ನಾಡಿನ ಅರಾಧ್ಯ ದೈವವಾಗಿದ್ದಾರೆ. ಇಲ್ಲಿ ಬಂದ ಜನರು ತಮ್ಮ ಜೀವನದ ಕಷ್ಟ ಕಾರ್ಪಣ್ಯಗಳಿಗೆ ಮೊರೆ ಹೋದರೆ ಅವರ ಆಕಾಂಕ್ಷೆಗಳು ಈಡೇರಿದ ಅನೇಕ ಉದಾಹರಣೆಗಳಿವೆ. ದರ್ಗಾದ ಪಕ್ಕದಲ್ಲಿರುವ ಕೆರೆಯಲ್ಲಿ ಹುಲಿಯೊಂದು ಸ್ನಾನ ಮಾಡಿ ಪೂಜ್ಯರ ಅಂಗಳವನ್ನು ಸ್ವಚ್ಛ ಮಾಡಿದ ಇತಿಹಾಸವು ಕೊಪ್ಪಳದಲ್ಲಿ ಮನೆಮಾತಾಗಿದೆ. ಆದ್ದರಿಂದ ಈ ಕೆರೆಗೆ ಹುಲಿಕೆರೆ ಎಂದು ಪ್ರಶಿದ್ಧಿ ಪಡೆದಿದೆ. ದರ್ಗಾ ಅಭಿವೃದ್ಧಿಗೆ ಸುಮಾರು 2 ಕೋಟಿ ಅನುದಾನ ಮಂಜೂರು ಮಾಡಿಸಿದ್ದು ಬರುವ ದಿನಗಳಲ್ಲಿ ಕೊಪ್ಪಳದ ದರ್ಗಾವು ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿ ಮಾರ್ಪಡಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದಿವ್ಯ ಸಾನಿದ್ಯ ಜಗದ್ಗುರು ಲಿಂಗಬಂದ್ ಖಾದರಲಿಂಗ ಸಾಹೇಬ್, ಧರ್ಮ ಗುರುಗಳಾದ ಮುಫ್ತಿ ನಜೀರ್ ಅಹೆಮದ್, ಸಂಸದ ಕರಡಿ ಸಂಗಣ್ಣ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳ, ಸಹಾಯಕ ಆಯುಕ್ತರಾದ ಇಸ್ಮಾಯಿಲ್‍ಸಾಬ ಶಿರಹಟ್ಟಿ, ಮುಖಂಡರುಗಳಾದ ಪ್ರದೀಪಗೌಡ ಮಾಲೀಪಾಟೀಲ್, ಕೆ.ಎಂ.ಸೈಯ್ಯದ್, ನಗರಸಭಾ ಸದಸ್ಯರುಗಳಾದ ಅಮ್ಜದ್ ಪಟೇಲ್, ಮುತ್ತುರಾಜ ಕುಷ್ಟಗಿ, ರಾಮಣ್ಣ ಹದ್ದಿನ, ಪ್ರಾಣೇಶ ಮಾದಿನೂರ, ಬಸವರಾಜ ಚಿನ್ನೂರ, ಖಾಜಾವಲಿ ಬನ್ನಿಕೊಪ್ಪ, ಮೌಲಾಹುಸೇನ ಜಮಾದರ, ಸಮಾಜದ ಮುಖಂಡರುಗಳಾದ ಬಾಷುಸಾಬ ಖತೀಬ್, ಜಾಕೀರಹುಸೇನ ಕಿಲ್ಲೇದಾರ, ಕಾಟನ್ ಪಾಷಾ, ಜಾಫರಖಾನ್, ಸಾಬೇರ ಹುಸೇನಿ, ರಹೆಮತ್ ಹುಸೇನಿ, ಮಾನ್ವಿ ಪಾಷಾ, ಮುನೀರ್ ಕೊತ್ವಾಲ್, ಸಲ್ಲಾಹುದ್ದೀನ ಸಿದ್ದಿಕಿ, ಹುಸೇನ ಪೀರಾ ಮುಜಾವರ, ಲಿಯಾಖತಲಿಸಾಬ್, ಅಕ್ಬರ್ ಪಾಷಾ ಪಲ್ಟನ್, ಧಾರವಾಡ ರಫಿ, ಇನ್ನೂ ಅನೇಕ ಸಮಾಜದ ಗಣ್ಯ ವ್ಯಕ್ತಿಗಳು ಹಾಗೂ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply

Top