​ಗೌರಿ-ಗಣೇಶ ಹಬ್ಬದ ಆಚರಣೆ : ಮದ್ಯ ಮಾರಾಟ ನಿಷೇಧ

 ಕೊಪ್ಪಳ ಜಿಲ್ಲೆಯಾದ್ಯಂತ ಆ. 25 ರಂದು ಗೌರಿ-ಗಣೇಶ ಹಬ್ಬದ ಆಚರಣೆ ನಿಮಿತ್ಯ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಶಾಂತಿಪಾಲನೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಆದೇಶ ಹೊರಡಿಸಿದ್ದಾರೆ.
 ಗಣೇಶ ವಿಸರ್ಜನೆಯನ್ನು ಪ್ರತಿ ವರ್ಷದಂತೆ ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅಲ್ಲದೇ ಸೆಪ್ಟೆಂಬರ್. 02 ರಂದು ಮುಸ್ಲಿಂ ಬಾಂಧವರು ಬಕ್ರಿದ್ ಹಬ್ಬವನ್ನು ಆಚರಿಸಲಿದ್ದು, ಈ ಎರಡೂ ಹಬ್ಬಗಳ ಆಚರಣೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಮಧ್ಯಪಾನವನ್ನು ಈ ಕೆಳಕಂಡ ದಿನಗಳಂದು ನಿಷೇಧಿಸಲಾಗಿದೆ.   
ಗಣೇಶ ವಿಸರ್ಜನೆಯ 3ನೇ ದಿನದ ಅಂಗವಾಗಿ ಆ. 26 ರಂದು ರಾತ್ರಿ 12-00 ಗಂಟೆಯಿಂದ 27ರ ರಾತ್ರಿ 12-00 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯಪಾನ ನಿಷೇಧಿಸಲಾಗಿದೆ.  5ನೇ ದಿನದ ವಿಸರ್ಜನೆ ಅಂಗವಾಗಿ  ಆ. 28 ರಂದು ರಾತ್ರಿ 12-00 ಗಂಟೆಯಿಂದ ಆ. 29ರ ರಾತ್ರಿ 12-00 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮಧ್ಯಪಾನ ನಿಷೇಧಿಸಲಾಗಿದೆ.  ಗಣೇಶ ವಿಸರ್ಜನೆಯ 7ನೇ ದಿನದ ಅಂಗವಾಗಿ  ಆ. 30 ರಂದು  ರಾತ್ರಿ 12-00 ಗಂಟೆಯಿಂದ ಆ. 31ರ ರಾತ್ರಿ 12-00 ಗಂಟೆಯವರೆಗೆ ಗಂಗಾವತಿ ತಾಲೂಕಿನಲ್ಲಿ.  9ನೇ ದಿನದ ಅಂಗವಾಗಿ ಸೆಪ್ಟೆಂಬರ್. 01 ರಂದು ರಾತ್ರಿ 12-00 ಗಂಟೆಯಿಂದ ಸೆ. 02ರ ರಾತ್ರಿ 12-00 ಗಂಟೆಯವರೆಗೆ ಕೊಪ್ಪಳ ಮತ್ತು ಗಂಗಾವತಿ ತಾಲೂಕಿನಲ್ಲಿ.  11ನೇ ದಿನದ ಅಂಗವಾಗಿ ಸೆ. 03 ರಂದು ರಾತ್ರಿ 12-00 ಗಂಟೆಯಿಂದ ಸೆ. 04 ರ ರಾತ್ರಿ 12-00 ಗಂಟೆಯವರೆಗೆ ಗಂಗಾವತಿ ಮತ್ತು ಕೊಪ್ಪಳ ತಾಲೂಕುಗಳಲ್ಲಿ ಮಧ್ಯಪಾನ ನಿಷೇಧಿಸಲಾಗಿದೆ. ಗಣೇಶ ವಿಸರ್ಜನೆಯ 13ನೇ ದಿನದ ಅಂಗವಾಗಿ ಸೆ. 05 ರಂದು ರಾತ್ರಿ 12-00 ಗಂಟೆಯಿಂದ ಸೆ.06 ರ ರಾತ್ರಿ 12-00 ಗಂಟೆಯವರೆಗೆ ಗಂಗಾವತಿ ತಾಲೂಕಿನಲ್ಲಿ ಹಾಗೂ 15ನೇ ದಿನ ಸೆ. 07 ರಂದು ರಾತ್ರಿ 12-00 ಗಂಟೆಯಿಂದ ಸೆ. 08 ರ ರಾತ್ರಿ 12-00 ಗಂಟೆಯವರೆಗೆ ಗಂಗಾವತಿ ನಗರದಲ್ಲಿ ಮಧ್ಯಪಾನ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

Related posts