​ಕೊಪ್ಪಳದಲ್ಲಿ ಬರೀ ಧೂಳು: ಜನರ ಪಾಡು ಗೋಳು

ಕೊಪ್ಪಳದಲ್ಲಿ ಬರೀ ಧೂಳು.. ಜನರ ಪಾಡು ಗೋಳೋ ಗೋಳು. ಎತ್ತನೋಡಿದರೂ ಧೂಳು. ಇದು ಕೊಪ್ಪಳ ನಗರದ ಸ್ಥಿತಿ, ಯಾವ ರಸ್ತೆಗೆ ಹೋದರೂ ಧೂಳು ಕಟ್ಟಿಟ್ಟ ಬುತ್ತಿಯಾಗಿದೆ. ಧೂಳಿನಿಂದ ಜನರು ಬದುಕು ಮೂರಾಬಟ್ಟೆಯಾಗಿದೆ. ಬೈಕ್ ಸವಾರರು, ಆಟೋ ರೀಕ್ಷಾ, ಸೈಕಲ್ ಹೀಗೆ ಕಾಲು ನಡಿಗೆಯಿಂದ ಓಡಾಡುವ ಜನರು ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕ್ಕುತ್ತಾ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.. ಇನ್ನೂ ಧೂಳಿನ ದರ್ಬಾರ್‌‌ಗೆ ರಸ್ತೆ ಅಪಘಾತಗಳು ಕೂಡ ನಗರದಲ್ಲಿ ಹೆಚ್ಚಿವೆ. ಜೊತೆಗೆ ಕೆಮ್ಮು, ಧಮ್ಮು, ಅಸ್ತಮಾದಿಂದ ಬಳಲುತ್ತಿದ್ದವರ ಪಾಡು ಹೇಳತೀರದಂತಾಗಿದೆ…

Leave a Reply