​ಕೊಪ್ಪಳದಲ್ಲಿ ಪೋಲೀಸರ ಸೇವೆ ಶ್ಲಾಘನೀಯ 

ಕೊಪ್ಪಳ ನಗರದ ರಾಷ್ಟ್ರೀಯ ಹೆದ್ದಾರಿ ೬೩ರ ರಸ್ತೇಯಲ್ಲಿ ಸಾಕಷ್ಟು ಗುಂಡಿಗಳು ಬಿದ್ದ ವಾಹನ ಸವಾರರು ಪರದಾಡುವಂತಾಗಿತ್ತು. ಪೊಲಿಸರ ಕೆಲಸ ಕೇವಲ ಟ್ರಾಫಿಕ್ ಹತೊಟಿಗೆ ತರುವದು ಮಾತ್ರವಾದರೂ   ಟ್ರಾಪಿಕ್ ಗುಂಡಿಗಳಿಂದ ತೊಂದರೆ ಆಗುತ್ತಿದೆ ಎಂದು ಮನಗಂಡು ಇಂದು ಬೆಳ್ಳಂ ಬೆಳಿಗ್ಗೆ  ಟ್ರಾಫಿಕ್ ಪೊಲೀಸರಿಂದಲೇ ಗುಂಡಿ ಮುಚ್ಚುವ ಕಾರ್ಯನಡೆಯಿತು.

ಟ್ರಾಫಿಕ್ ಪಿಎಸ್ಐ ಗಣೇಶ, ಪೇದೆಗಳಾದ ಶ್ರೀಕಾಂತ ಅಬ್ಬಿಗೇರಿ, ಮಹೇಶ್ ಅವರಿಂದ ಗುಂಡಿ ಮುಚ್ಚುವ ಕಾರ್ಯವನ್ನು ಮಾಡಿದರು. ಗುಂಡಿ ಮುಚ್ಚವಂತೆ ಸಾಕಷ್ಟು ಬಾರಿ ಸ್ಥಳಿಯರು ಲೋಕೋಪಯೋಗಿ ಇಲಾಖೆಯವರಿಗೆ ಮನವಿ ಮಾಡಿದರೂ ಯಾವದೇ ಪ್ರಯೊಜನವಾಗಿರಲಿಲ್ಲ, ಆದರೆ ಇದು ಟ್ರಾಫಿಕ್ ಪೊಲಿಸರು ಗುಂಡಿ ಮುಚ್ಚಿದ್ದು ಸಾರ್ವಜನಿಕರಲ್ಲಿ ಸಂತಸ ಉಂಟು ಮಾಡಿದೆ.

ಟ್ರಾಫಿಕ್ ಪೊಲಿಸರ ಕಾರ್ಯಕ್ಕೆ ಕೊಪ್ಪಳ ಜನತೆ  ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Leave a Reply