​ಎಪಿಎಂಸಿ ವರ್ತಕರ ಮುಷ್ಕರಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಬೆಂಬಲ

ಕೊಪ್ಪಳ : ಅಗಸ್ಟ 8 ರಂದು ನಗರ ಎಪಿಎಂಸಿ ಕಛೇರಿ ಎದುರುಗಡೆ ಕೊಪ್ಪಳ ಎಪಿಎಂಸಿ ವರ್ತಕರ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಧರಣಿ ನಿರತರಾಗಿದ್ದು ಸ್ಥಳಕ್ಕೆ ಕೊಪ್ಪಲ ಶಾಸಕ ರಾಘವೇಂದ್ರ ಹಿಟ್ನಾಳ ಬೇಟಿ ನೀಡಿ ಬೆಂಬಲ ಸೂಚಿಸಿದರು.

ದಲ್ಲಾಲರು ಮತ್ತು ವರ್ತಕರು ಸಂಘಗಳ ಪದಾಧಿಕಾರಿಗಳು ಎಣ್ಣೆ ಕಾಳು ವ್ಯಾಪಾರಸ್ಥರು, ಮೆಕ್ಕೆಜೋಳ ವರ್ತಕರು, ಅಕ್ಕಿ ಮಾರಟ ವರ್ತಕರು ಬಹಳ ಸಂಖ್ಯೆಯಲ್ಲಿ ಧರಣಿ ನಿರತರಾಗಿದ್ದು ಶಾಸಕರು ಬೇಟಿ ನೀಡಿದ ಸಂದರ್ಭದಲ್ಲಿ ಸಮಿತಿಯ ಸದಸ್ಯರು ಹಾಗೂ ವರ್ತಕರ ಪ್ರತಿನಿಧಿಯಾದ ನೇಮರಡ್ಡಿ ಮೇಟಿಯವರುಮಾತನಾಡುತ್ತಾ ಪ್ರಸ್ತುತ ರಾಜ್ಯ ಸರ್ಕಾರವು ಜಾರಿಗೋಳಿಸಲು ಉದ್ದೇಶಿಸಿರುವ ಕೃಷಿ ಉತ್ಪನ್ನಗಳ ಮಾರಾಟದ ಸಂದರ್ಭದಲ್ಲಿ ಇ-ಪೆಮೆಂಟ್ ವಾಸ್ತವಾಗಿ ನಿರ್ವಹಿಸಲು ಸಾದ್ಯವಾಗುವದಿಲ್ಲ ವ್ಯಾಪಾರದ ಮುಖ್ಯ ತಳಹದಿ, ಕೊಳ್ಳುವರ, ಮಾರಿಸುವವರ, ಮಾರುವವರ ನಡುವಿನ ಪರಸ್ಪರ ನಂಬಿಕೆ ವಿಶ್ವಾಸವನ್ನು ಹೊಂದಿರುತ್ತದೆ ಆದ್ದರಿಂದ ಸರ್ವಾನುಮತದಿಂದ ಈ ಕೆಳಗೆ ಸೂಚಿಸಿದ ನಿರ್ಣಯಗಳನ್ನು ಜಾರಿಗೊಳಿಸುವಂತೆ ಕ್ರಮ ಕೈಗೊಳ್ಳಲಾಯಿತು.

ಬೇಡಿಕೆಗಳಾದ ರಾಜ್ಯಾದ್ಯಂತ ಎಪಿಎಂಸಿ ಮಾರುಕಟ್ಟೆಗಳಲ್ಲಿ ಇ-ಪೆಮೆಂಟ್ ವ್ಯವಸ್ಥೆ ಬೇಡವೇ ಬೇಡ, ರೇಮ್ಸ್ (ರಾಷ್ಟ್ರೀಯ ಇ ಮರ್ಕೆಟಿಂಗ್ ಸರ್ವಿಸ್ ) ಅವಶ್ಯಕತೆ ಇರುವುದಿಲ್ಲ, ಒಂದು ದೇಶ ಒಂದು ತೆರಿಗೆ ಜಿ.ಎಸ್.ಟಿ ಮಾದರಿಯಲ್ಲಿ ಇರುವಂತೆಯೇ ಎಪಿಎಂಸಿ ಮಾರುಕಟ್ಟೆಯಲ್ಲಿ ಕೂಟ ಒಂದು ಸೆಸ್ ಜಾರಿಯಾಗಿರಬೇಕು ಕೆಲವೊಂದು ರಾಜ್ಯಗಳಲ್ಲಿ ಶೇ 0.85% ಶೇ 0.90% ಶೇ 0.75% ಹಾಗೂ 1.00% ಆದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ 1.5 % ಇರುತ್ತದೆ ಆದ್ದರಿಂದ ಒಂದೇ ದರದ ಸೆಸ್ ಆಕರಣೆ ಮಾಡುವಂತಾಗಬೇಕೆಂದು ಒತ್ತಾಯಿಸಿ ಆದಷ್ಟು ಬೇಗನೇ ರೈತರು, ವರ್ತಕರ ಹಾಗೂ ಸಮಾಜದ ಸಾಮರಸ್ಯದ ದೃಷ್ಟಿಯಿಂದ ಸರ್ಕಾರಕ್ಕೆ ಸೂಕ್ತ ಕ್ಗರಮ ಜರುಗಿಸಬೇಕೆಂದು ಶಾಸಕರನ್ನು ಒತ್ತಾಯಿಸಿದರು.

Please follow and like us:
error