​ಉತ್ಸವಗಳು ಕೇವಲ ಮನರಂಜನೆಯ ಆಚರಣೆಯಲ್ಲ– ಸಚಿವ ಸಿ.ಟಿ.ರವಿ

 ಭಾರತೀಯ ಪರಂಪರೆಯ ರಕ್ಷಣೆಗೆ ಮುನ್ನುಡಿ ಬರೆದ ಭೂಮಿ ಆನೆಗೊಂದಿ 

ಕೊಪ್ಪಳ ( ಜ.09: 
ಇವತ್ತು ರಾಷ್ಟ್ರೀಯ ಹಿತಾಸಕ್ತಿ ಕಡೆಗಣಿಸಿ, ರಾಜಕೀಯ ಹಿತಾಸಕ್ತಿಗಾಗಿ ಮತಬ್ಯಾಂಕ್ ಓಲೈಕೆ ರಾಜಕಾರಣ ಮಾಡದೇ , ನಮ್ಮ ಪೂರ್ವಿಕರ ಇತಿಹಾಸ ಅರಿತು ಮೌಲ್ಯ ಮತ್ತು ಪರಂಪರೆಯನ್ನು ನಮ್ಮ  ವರ್ತಮಾನ ಹಾಗೂ ಭವಿಷ್ಯ ರೂಪಿಸಿಕೊಳ್ಳಲು ಇಂತಹ ಸಾಂಸ್ಕೃತಿಕ ಉತ್ಸವಗಳು ಸಹಕಾರಿಯಾಗಲಿವೆ.

 ನಮ್ಮ ಸನಾತನ ಸಂಸ್ಕೃತಿಯನ್ನು ರಕ್ಷಿಸಲು ವಿಜಯನಗರದ ಸಾಮ್ರಾಜ್ಯ ಸ್ಥಾಪನೆಯಾಯಿತು.  ದಕ್ಷಿಣದ ಮಲಿಕ್ ಕಾಫರ್ ನ ಬರ್ಬರ ದಾಳಿಯನ್ನು ಎದುರಿಸಲಾರದೇ ಹಳೆಬೀಡಿನ ಹೊಯ್ಸಳರು, ವಾರಂಗಲ್ ಕಾಕತೀಯರು ,ಮಧುರೆಯ ಪಾಂಡ್ಯರು, ದೇವಗಿರಿಯ ಯಾದವರ ವಂಶಗಳು ನೆಲಕಚ್ಚಿದಾಗ  ಅದನ್ನು ಎದುರಿಸಿ ಮತ್ತೆ ಭಾರತೀಯ ಪರಂಪರೆಯ ಪುನರುತ್ಥಾನಕ್ಕೆ ಮುನ್ನುಡಿ ಬರೆದ ನೆಲ ಆನೆಗೊಂದಿಯಾಗಿದೆ

ಎಂದು ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಸಕ್ಕರೆ ಸಚಿವ ಸಿ.ಟಿ.ರವಿ ಹೇಳಿದರು.
ಆನೆಗೊಂದಿ ಉತ್ಸವದ ಶ್ರೀಕೃಷ್ಣದೇವರಾಯ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಇಂದು ಡಾ.ಶರಣಬಸಪ್ಪ ಕೋಲಕಾರ ಸಂಪಾದಕತ್ವದ “ಭವ್ಯ ಪರಂಪರೆಯ ತಾಣ ಆನೆಗೊಂದಿ” ಸ್ಮರಣ ಸಂಚಿಕೆ , ಡಾ.ವಿಜಯ ಢಣಾಪುರ, ಡಾ.ಹಾಲೇಶ, ಡಾ.ಶ್ರೀನಿವಾಸ ಸಂಪಾಕತ್ವದ “ಕಿಷ್ಕಿಂದಾ ಕಾಂಡ” ಔಷಧೀಯ ಸಸ್ಯಗಳ ಸಂಗ್ರಹವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಈ ಕ್ಷೇತ್ರ ರಾಮಾಯಣ ಕಾಲದಿಂದಲೂ ಪ್ರಸಿದ್ಧಿ ಹೊಂದಿದೆ, ರಾಮನಿಗೆ ಬೆಂಬಲವಾಗಿ ನಿಂತುಕೊಂಡು ಸತ್ಯ ಮತ್ತು ಧರ್ಮಕ್ಕೆ ಬೆಂಬಲ ಸೂಚಿಸಿದ ಭೂಮಿ ಇದೆ.ನೇಪಾಳದಿಂದ ಶ್ರೀಲಂಕಾವರೆಗಿನಿ ರಾಮಾಯಣ ಸರ್ಕ್ಯೂಟ್ ,ಮಹಾಭಾರತ,ಜೈನ,ಬುದ್ಧ ಸರ್ಕ್ಯೂಟ್ ನಡುವೆ ಸಂಪರ್ಕ ಕಲ್ಪಿಸಿ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಭಾರತ ಸರ್ಕಾರ ಚಿಂತನೆ ನಡೆಸಿದೆ.ನಮ್ಮ ಪೂರ್ವಿಕರ ಪ್ರಾಚೀನ ಪರಂಪರೆ ಮತ್ತು ಇತಿಹಾಸದ ಘಟನೆಗಳನ್ನು ತಿಳಿಯದವರು ವರ್ತಮಾನ ದಲ್ಲಿ ಯೂ ಸ್ವಾಭಿಮಾನದಿಂದ ಬದುಕಲು ಸಾಧ್ಯವಿಲ್ಲ.ಭವಿಷ್ಯವೂ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಸಂಸ್ಕೃತಿ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಆ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳಲಿದೆ.ಕಲ್ಯಾಣ ಕರ್ನಾಟಕ ಉತ್ಸವ, ಕನಕಗಿರಿ, ಕಿತ್ತೂರು ಮೊದಲಾದ ಉತ್ಸವಗಳು ಕೇವಲ ಮನರಂಜನೆಯ ಆಚರಣೆಗಳಾಗಬಾರದು.ನಮ್ಮನ್ನು ನಾವು ಅರಿಯಲು ಮತ್ತು ಪರಂಪರೆಯ ರಕ್ಷಣೆಯ  ದೀಕ್ಷೆ ತೊಡಲು ಇಂತಹ ಉತ್ಸವಗಳು ಸದ್ಬಳಕೆಯಾಗಬೇಕು ಎಂದರು.
ಮುಖ್ಯಮಂತ್ರಿಗಳು ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.

Please follow and like us:
error