​ಇಸ್ಟೇಟ್‌ಜೂಜಾಟ,ಓಸಿ,ಅಕ್ರಮ ಮರಳು ಸಾಗಾಣಿಕೆ ದಾಳಿ : ಬಂಧನ

 ದಿನಾಂಕ 30 – 07 – 2019 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಗಡ್ಡಿ ಗ್ರಾಮದ ಸೀಮಾದಲ್ಲಿ ಬೇವಿನ ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ 07 ಜನ ಆರೋಪಿತರು ಕೂಡಿ ಇಸ್ಪೇಟ ಜೂಜಾಟದಲ್ಲಿ ತೊಡಗಿದ್ದಾಗ  ಪ್ರಕಾಶ ಮಾಳಿ ಪಿ . ಎಸ್ . ಐ . ಗಂಗಾವತಿ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತರಿಂದ ರೂ . 1 , 28 , 800 / – ರೂ ವಶಪಡಿಸಿಕೊಂಡು 07 ಜನ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ . 
ಮಟಕಾ ದಾಳಿ ದಿನಾಂಕ 30 – 07 – 2019 ರಂದು ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಮಿಟ್ಟೆಕೇರಿ ಓಣಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಖಲೀಲ ತಂದೆ ಬಾಷುಸಾಬ ಸಾ : ಕೊಪ್ಪಳ ಇತನು ಮಟಕಾ ಪಟ್ಟಿ ಎರೆಯುತ್ತಿದ್ದಾಗ  ವಿನಾಯಕ , ಪಿ . ಎಸ್ . ಐ , ಕೊಪ್ಪಳ ನಗರ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿದಾಳೆ ಮಾಡಿ , ಆರೋಪಿತರಿಂದ ನಗದು ಹಣ ರೂ . 1 , 200 = 00 ಗಳನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ . 

ಅಕ್ರಮ ಮರಳು ಕಳ್ಳ ಸಾಗಾಣಿಕೆ ದಾಳಿ ದಿನಾಂಕ 30 – 07 – 2019 ರಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹಳಗೊಂಡಬಾಳ ಅರೇಹಳ್ಳದಿಂದ ವದಗನಾಳ ಗ್ರಾಮದ ಹತ್ತಿರ ಅಕ್ರಮವಾಗಿ ಮರಳನ್ನು ಯಾವುದೇ ಪರವಾನಿಗೆ ಇಲ್ಲದೆ ಟಿಪ್ಪರನಲ್ಲಿ ಸಾಗಾಟ ಮಾಡುವಾಗ ರವಿ ಉಕ್ಕುಂದ ಸಿ . ಪಿ . ಐ . ಕೊಪ್ಪಳ ಗ್ರಾಮೀಣ ವೃತ್ತ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಇಬ್ಬರು ಆರೋಪಿತರನ್ನು ದಸ್ತಗಿರಿ ಮಾಡಿ ಟಿಪ್ಪರನ್ನು ಜಪ್ತಿ ಪಡಿಸಿಕೊಂಡು ಚಾಲಕ ಮತ್ತು ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Please follow and like us:
error