​ಆ. 18 ರಂದು ಗದಗ-ವಾಡಿ ಹೊಸ ರೈಲ್ವೆ ಮಾರ್ಗ ಕಾಮಗಾರಿ ಪ್ರಾರಂಭ 


ಗದಗ-ವಾಡಿ ಹೊಸ ರೈಲ್ವೆ ಮಾರ್ಗ ಕಾಮಗಾರಿ ಪ್ರಾರಂಭ, ಭಾನಾಪುರ-ಕೊಪ್ಪಳ ಸೆಕ್ಷನ್ ಜೋಡಿ ಮಾರ್ಗ ರಾಷ್ಟ್ರಕ್ಕೆ ಸಮರ್ಪಣೆ ಹಾಗೂ ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಹೊಸ ಪ್ಲಾಟ್ ಫಾರಂ ಸಂಖ್ಯೆ 2/3 ರ ಉದ್ಘಾಟನಾ ಸಮಾರಂಭ ಆಗಸ್ಟ್. 18 ರಂದು ಕೊಪ್ಪಳ ಜಿಲ್ಲೆಯ ಭಾನಾಪುರ ರೈಲ್ವೆ ನಿಲ್ದಾಣದಲ್ಲಿ ಬೆಳಿಗ್ಗೆ 11-30 ಗಂಟೆಗೆ ನಡೆಯಲಿದೆ.
 ಕೇಂದ್ರ ರೈಲ್ವೆ ಸಚಿವರಾದ ಸುರೇಶ ಪ್ರಭಾಕರ್ ಪ್ರಭು ಅವರು ವಿಡಿಯೋ ಕಾನ್‍ಫರೆನ್ಸ್ ಮೂಲಕ ಚಾಲನೆ ನೀಡುವರು.  ಮುಖ್ಯ ಅತಿಗಳಾಗಿ ಕೇಂದ್ರ ಸರ್ಕಾರದ ಸಚಿವರುಗಳಾದ ಡಿ.ವಿ ಸದಾನಂದ ಗೌಡ, ಅನಂತ ಕುಮಾರ, ರಮೇಶ ಚಂದಪ್ಪ ಜಿಗಜಿಣಗಿ, ಹಾಗೂ ನಿರ್ಮಲಾ ಸೀತಾರಾಮನ್ ಅವರು ಪಾಲ್ಗೊಳ್ಳುವರು.  

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಮಂತ್ರಿಗಳಾದ ಆರ್.ವಿ ದೇಶಪಾಂಡೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ, ವೈದ್ಯಕೀಯ ಶಿಕ್ಷಣ ಮಂತ್ರಿಗಳಾದ ಶರಣಪ್ರಕಾಶ ರುದ್ರಪ್ಪ ಪಾಟೀಲ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ವಕ್ಫ್ ಮಂತ್ರಿಗಳಾದ ತನ್ವೀರ ಸೇಠ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಪ್ರಮಾಸೋದ್ಯಮ ಮಂತ್ರಿಗಳಾದ ಪ್ರಿಯಾಂಕ ಖರ್ಗೆ,  ಸಂಸದರುಗಳಾದ ಮಲ್ಲಿಕಾರ್ಜುನ ಖರ್ಗೆ, ಕರಡಿ ಸಂಗಣ್ಣ, ಬಿ.ವಿ. ನಾಯಕ, ರಾಜ್ಯಸಭಾ ಸದಸ್ಯರಾದ ಬಸವರಾಜ ಪಾಟೀಲ, ಕೊಪ್ಪಳ ಜಿ.ಪಂ. ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ, ಶಾಸಕರುಗಳಾದ ಕೆ. ರಾಘವೇಂದ್ರ ಹಿಟ್ನಾಳ, ದೊಡ್ಡನಗೌಡ ಪಾಟೀಲ, ಮಾನಪ್ಪ ಡಿ. ವಜ್ಜಲ, ರಾಜಾ ವೆಂಕಟಪ್ಪ ನಾಯಕ, ಗುರು ಪಾಟೀಲ್ ಶಿರವಾಳ, ಡಾ. ಅಜಯ್ ಸಿಂಗ್, ಮಾಲಿಕಯ್ಯ ವೆಂಕಯ್ಯ ಗುತ್ತೆದಾರ, ಪ್ರತಾಪಗೌಡ ಪಾಟೀಲ್, ಶಿವರಾಜ ತಂಗಡಗಿ, ವಿಧಾನಪರಿಷತ್ ಸದಸ್ಯರುಗಳಾದ ಶರಣಪ್ಪ ಮಟ್ಟೂರ, ಬಸವರಾಜ ಪಾಟೀಲ ಇಟಗಿ, ಬಿ.ಜಿ. ಪಾಟೀಲ್, ಅಮರನಾಥ ಪಾಟೀಲ್ ಹಾಗೂ ಬಸವರಾಜ ಎಸ್. ಮುಗಂಡಮಠ ಮೊದಲಾದ ಗಣ್ಯರು ಪಾಲ್ಗೊಳ್ಳುವರು ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.