​ಅಜ್ಜನ ಜಾತ್ರೆಗೆ ಪಾರ್ಕಿಂಗ್ ವ್ಯವಸ್ಥೆ 

ಕೊಪ್ಪಳದ ಶ್ರೀ ಗವಿಸಿದ್ದೇಶ್ವರನ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಜಾತ್ರೆ ಸಂದರ್ಭದಲ್ಲಿ  ಸುಗಮ ಸಂಚಾರ ವ್ಯವಸ್ಥೆಗಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 

ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಕುಷ್ಟಗಿ ರಸ್ತೆ ರೈಲ್ವೇ ಗೇಟ್ ಕಡೆಯಿಂದ ಬರುವ ಟಾಂ ಟಾಂ, ಟ್ರ್ಯಾಕ್ಟರ್, ಲಾರಿ, ಆಟೋಗಳಿಗೆ ಕುಷ್ಟಗಿ ರಸ್ತೆಯಲ್ಲಿರುವ ತಾಲೇಡಾ ಹೋಂಡಾ ಶೋ ರೂಂ ಎದುರು.  ಹೊಸಪೇಟೆ ಕಡೆಯಿಂದ (ಎಂ.ಆರ್.ಐ. ಸ್ಕ್ಯಾನ್ ಸೆಂಟರ್) ಮಾರ್ಗವಾಗಿ, ಗಂಗಾವತಿ ಕಡೆಯಿಂದ (ಕುಟೀರ ಹೋಟೆಲ್ ಮಾರ್ಗವಾಗಿ), ಗಂಜ್ ಸರ್ಕಲ್ ಕಡೆಯಿಂದ ಬರುವ (ಬಿಎಸ್ ಪವಾರ್ ಹೋಟೆಲ್ ಮಾರ್ಗವಾಗಿ), ಗದಗ-ಹಲಗೇರಿ ಕಡೆಯಿಂದ ಬರುವ (ಹಳೆ ಡಿ.ಸಿ. ಕಚೇರಿ ಕ್ರಾಸ್ ಮುಖಾಂತರ)   ಆಗಮಿಸುವ ಟಾಂ ಟಾಂ, ಟ್ರ್ಯಾಕ್ಟರ್, ಲಾರಿ, ಆಟೋಗಳಿಗೆ ಶ್ರೀ ಮಲಿಯಮ್ಮ ಗುಡಿಯ ಹಿಂದುಗಡೆ ಖಾಲಿ ಸ್ಥಳದಲ್ಲಿ. ಹಾಲವರ್ತಿ, ಕುಣಿಕೇರಿ, ಹೂವಿನಾಳ  ಕಡೆಯಿಂದ ಬರುವ ಟಾಂಟಾಂ, ಟ್ರ್ಯಾಕ್ಟರ್, ಲಾರಿ, ಆಟೋಗಳಿಗೆ ಕುವೆಂಪು ನಗರದ ಹತ್ತಿರ ಇರುವ ಪಾರ್ಕಿಂಗ್ ಸ್ಥಳದಲ್ಲಿ.  ಬಗನಾಳ, ಹಾಲವರ್ತಿ, ಕುಣಿಕೇರಿ, ಹೂವಿನಾಳ ಕಡೆಯಿಂದ ಬರುವ ಮೋಟಾರ್ ಸೈಕತಿ ಶಾಲೆ ಹತ್ತಿರ ಇರುವ ಪಾರ್ಕಿಂಗ್ ಸ್ಥಳದಲ್ಲಿ.  ಅಳವಂಡಿ, ಸಿಂದೋಗಿ, ಬಹದ್ದೂರಬಂಡಿ ಕಡೆಗಳಿಂದ (ಗಡಿಯಾರ ಕಂಬ, ಶಾರದಾ ಟಾಕೀಸ್ ಕ್ರಾಸ್, ಅಂಬೇಡ್ಕರ್ ಸರ್ಕಲ್ ಮುಖಾಂತರ ಬರುವ ಟಾಂಟಾಂ, ಟ್ರ್ಯಾಕ್ಟರ್, ಲಾರಿ, ಆಟೋಗಳಿಗೆ ಆಯುರ್ವೆದಿಕ್ ಕಾಲೇಜು ಹತ್ತಿರ ಇರುವ ಪಾರ್ಕಿಂಗ್ ಸ್ಥಳದಲ್ಲಿ. ಗಡಿಯಾರ ಕಂಭ ಕಡೆಯಿಂದ ಬರುವ ಮೋಟಾರ್ ಸೈಕಲ್‍ಗಳಿಗೆ ಪಾಂಡುರಂಗ ಗುಡಿಯ ಹಿಂದೆ ಹಮಾಲರ ಕಾಲೊನಿಯಲ್ಲಿರುವ ಖಾಲಿ ಸ್ಥಳದಲ್ಲಿ.  ಬಸವೇಶ್ವರ ವೃತ್ತದ ಕಡೆಯಿಂದ ಬರುವ ವಿಐಪಿ ವಾಹನಗಳಿಗೆ ಗವಿಮಠ ರಸ್ತೆಯಲ್ಲಿ ಬಿಬಿಎಂ ಕಾಲೇಜ್ ಆವರಣದಲ್ಲಿ. ಗಿಣಿಗೇರಾ, ಗಂಗಾವತಿ, ಕುಷ್ಟಗಿ, ಗದಗ ಕಡೆಯಿಂದ ಬರುವ ಎತ್ತಿನ ಬಂಡಿಗಳಿಗೆ ಗವಿಮಠ ರಸ್ತೆಯಲ್ಲಿ ಬಾಲಕೀಯರ ಹಾಸ್ಟೆಲ್ ಕಾಲೇಜು ಪಕ್ಕದ ಪಾರ್ಕಿಂಗ್ ಸ್ಥಳದಲ್ಲಿ.  ಬಸವೇಶ್ವರ ವೃತ್ತದ ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಎಪಿಎಂಸಿ-01 ಗೇಟ್ ಮುಖಾಂತರ 1,2,3,4,5 ನೇ ಗೇಟ್‍ಗಳ ಪಾಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 

 

Leave a Reply