​ಅಕ್ರಮ ಮದ್ಯ ಮಾರಾಟ, ಇಸ್ಪೀಟು, ಮಟ್ಕಾ ದಂದೆಕೋರರ ಮೇಲೆ ದಾಳಿ ಬಂಧನ

ಅಕ್ರಮ ಮದ್ಯ ಮಾರಾಟ ದಾಳಿ ದಿನಾಂಕ 27 – 06 – 2019 ರಂದು ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಕುವೆಂಪು ನಗರದ 500 ಪ್ಲಾಟ ಬಸನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಹನುಮಪ್ಪ ತಂದೆ ಹುಗ್ಗಪ್ಪ ಕಟ್ಟಿಮನಿ ಸಾ : ಕುವೆಂಪು ನಗರ ಈತನು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುವಾಗ ಶಿವಾನಂದ ವಾಲಿಕಾರ ಪಿ . ಐ , ಕೊಪ್ಪಳ ನಗರ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿತನಿಂದ ರೂ 2 , 858 / – ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ . 
ಅಕ್ರಮ ಮರಳು ಕಳ್ಳ ಸಾಗಾಣಿಕೆ ದಾಳಿ

 ದಿನಾಂಕ 27 – 06 – 2019 ರಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕಿನ್ನಾಳ – ಮಾದಿನೂರ ಸೀಮಾದ ಹಿರೇಹಳ್ಳದಲ್ಲಿ 03 ಟ್ರಾಕ್ಟರಗಳಲ್ಲಿ ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಿಂದ ಅಕ್ರಮವಾಗಿ ಟ್ರಾಕ್ಟರನಲ್ಲಿ ಸಾಗಾಟ ಮಾಡುವಾಗ  ಗುರುರಾಜ ಪಿ . ಎಸ್ . ಐ . ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಲು 03 ಟ್ಯಾಕ್ಟರ ಚಾಲಕರು ಟ್ರಾಕ್ಟರ ಬಿಟ್ಟು ಓಡಿ ಹೋಗಿದ್ದು ಟ್ರಾಕ್ಟರ ಜಪ್ತಿ ಪಡಿಸಿಕೊಂಡು ಚಾಲಕ ಮತ್ತು ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ . ದಿನಾಂಕ 27 – 06 – 2019 ರಂದು ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ನಂದಿಹಳ್ಳಿ ತುಂಗಭದ್ರಾ ಹೊಳೆಯಿಂದ ಟ್ರಾಕ್ಟರನಲ್ಲಿ ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಿಂದ ಅಕ್ರಮವಾಗಿ ಸಾಗಾಟ ಮಾಡುವಾಗ ಶ್ರೀ ಶರತಕುಮಾರ ಪಿ . ಎಸ್ . ಐ . ಕಾರಟಗಿ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಲು ಟ್ರ್ಯಾಕ್ಟರ ಚಾಲಕ ಟ್ಯಾಕ್ಟರ ಬಿಟ್ಟು ಓಡಿ ಹೋಗಿದ್ದು ಟ್ರ್ಯಾಕ್ಟರ ಜಪ್ತಿ ಪಡಿಸಿಕೊಂಡು ಚಾಲಕ ಮತ್ತು ಮಾಲಿಕನ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ .

ಇಸ್ಪೀಟು ಆಟ ಬಂಧನ

 ದಿನಾಂಕ 27 – 06 – 2019 ರಂದು ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಬೂದಗುಂಪಿ ಗ್ರಾಮದ ಶರಣಬಸವೇಶ್ವರ ದೇವಸ್ಥಾನದ ಮುಂದ ಸಾರ್ವಜನಿಕ ಸ್ಥಳದಲ್ಲಿ 05 ಜನ ಆರೋಪಿತರು ಕೂಡಿ ಇಸ್ಟೇಟ್ ಜೂಜಾಟದಲ್ಲಿ ತೊಡಗಿದ್ದಾಗ  ಬಸವರಾಜ ಪಿ . ಎಸ್ . ಐ ಯಲಬುರ್ಗಾ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತರಿಂದ ರೂ . 5 , 300 / – ರೂ ವಶಪಡಿಸಿಕೊಂಡು 05 ಜನ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ . ಮಟಕಾ ಜೂಜಾಟ ದಾಳಿ ದಿನಾಂಕ 27 – 06 – 2019 ರಂದು ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕವಲೂರ ಗ್ರಾಮದ ರಣದಮ್ಮ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ವೀರಭದ್ರಪ್ಪ ದ್ಯಾಮಪುರ ಸಾ : ಕವಲೂರ ಈತನು ಮಟಕಾ ಜೂಜಾಟದಲ್ಲಿ ತೊಡಿಗಿದ್ದಾಗ ರಾಮಪ್ಪ ಪಿ . ಎಸ್ . ಐ ಅಳವಂಡಿ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತನಿಂದ ರೂ . 1 , 110 / – ರೂ ವಶಪಡಿಸಿಕೊಂಡು ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ . ಅಕ್ರಮ ಮದ್ಯ ಮಾರಾಟ ದಾಳಿ ದಿನಾಂಕ 27 – 06 – 2019ರಂದು ಕುಕನೂರ ಪೊಲೀಸ್ ಠಾಣೆ ವ್ಯಾಪ್ತಿಯ ಬಳಗೇರಿ ಬೂದಗುಂಪ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಲಾಲ್ಯಪ್ಪ ಹೊನ್ನುಂಚೆ ಸಾ : ಕಹಳ್ಳಿ ತಾಂಡಾ ಈತನು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುವಾಗ ರಾಘವೇಂದ್ರ ಪಿ . ಎಸ್ . ಐ . ಕುಕನೂರ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿತನಿಂದ ರೂ 2 , 789 / – ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ .

Please follow and like us:
error