You are here
Home > Koppal News > ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೬೩ನೇ ಕನ್ನಡ ರಾಜ್ಯೋತ್ಸವ ಆಚರಣೆ

ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೬೩ನೇ ಕನ್ನಡ ರಾಜ್ಯೋತ್ಸವ ಆಚರಣೆ


ಕೊಪ್ಪಳ : ನ.೧, ಭಾಗ್ಯನಗರದ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ೬೩ನೇ ಕನ್ನಡ ರಾಜ್ಯೋತ್ಸವದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಿ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳು ಕನ್ನಡ ನಾಡಿನ ಭವ್ಯ ಚರಿತೆಯನ್ನು ಅರಿಯಬೇಕು, ನಾಡಿಗಾಗಿ ಬಲಿಧಾನ ಗೈದ ಹೋರಾಟಗಾರರನ್ನು ಸ್ಮರಿಸಬೇಕು. ೮ ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ ಸಮೃದ್ಧಭಾಷೆ ನಮ್ಮದು ಇದನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ನಮ್ಮೆಲ್ಲರದು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷೆಯನ್ನು ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ವನಿತಾ ಗಡಾದ ವಹಿಸಿದ್ದರು, ಮಂಜುನಾಥ ಚಿತ್ರಗಾರ, ಸುನಿತಾ ಪಾಟೀಲ, ವಜನಾಕ್ಷಿ ವಿಭೂತಿ, ಮಮತಾಜ ನದಾಫ್, ರಂಗನಾಥ ಅಕ್ಕಸಾಲಿಗ, ಇನ್ನರ್‌ವ್ಹೀಲ್ ಕ್ಲಬ್‌ನ ಅಧ್ಯಕ್ಷೆ ಸುಜಾತ ಆಡೂರು ಮುಂತಾದವರು ಭಾಗವಹಿಸಿದ್ದರು.
ಈ ಅರ್ಥಪೂರ್ಣ ಸಮಾರಂಭವು ಹಚ್ಚೇವು ಕನ್ನಡದ ದೀಪ ಪ್ರಾರ್ಥನ ನೃತ್ಯದೊಂದಿಗೆ ಪ್ರಾರಮಭವಾಯಿತು. ಕನ್ನಡ ಕನ್ಮಣಿಗಳಾದ ಮಯೂರ ವರ್ಮ, ಬಸವೇಶ್ವರ, ಅಕ್ಕಮಹಾದೇವಿ, ಪುಟ್ಟರಾಜ ಗವಾಯಿಗಳು, ಕುವೇಂಪು, ಡಾ. ರಾಜಕುಮಾರ ಹಾಗೂ ರಾಹುಲ್ ದ್ರಾವೀಡ್ ವೇಷ ಧರಿಸಿ ವಿದ್ಯಾರ್ಥಿಗಳು ಸಭಿಕರ ಗಮನ ಸೆಳೆದರು.

Top