೩ ಮಕ್ಕಳ ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ : ನಿಜಾಂಶ ಏನು ?

Koppal ತಾಯಿಯೇ ದೇವರು, ತಾಯಿ ಎಂದು ಕ್ರೂರಿ ಆಗೋಕೆ ಸಾಧ್ಯವಿಲ್ಲ, ಅಪ್ಪಿ ತಪ್ಪಿ ಸಾವು ಅಂತ ಕಣ್ ಮುಂದೆ ಬಂದ್ರೆ ಮೊದಲು ತಾನು ಸತ್ತು ತನ್ನ ಮಕ್ಕಳನ್ನು ರಕ್ಷಿಣೆ ಮಾಡ್ತಾಳೆಎಂಬ ಮಾತುಗಳಿವೆ. ಆದರೆ ಈ ಎಲ್ಲ ಮಾತುಗಳು ಈ ಪ್ರಕರಣದಲ್ಲಿ ಸುಳ್ಳಾಗಿ ಹೋಗಿದೆ. ತಾನಗೊದಗಿ ಬಂದ ನೋವು – ಸಂಕಟಗಳಿಗೆ ಆ ತಾಯಿ ಮಕ್ಕಳನ್ನೆ ಬಲಿ ತೆಗೆದುಕೊಂಡು ಕೊನೆಗೆ ತಾನು ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ನಡೆದಿದೆ. ರಾತ್ರಿ ಇದ್ದವರು ಬೆಳಗಾಗುವದರೊಳಗೆ ಆ ತಾಯಿ ತನ್ನ ಮೂರು ಮುಗ್ದ ಮಕ್ಕಳನ್ನು ಕೊಂದು, ತಾನು ಬಾರದ ಲೋಕಕ್ಕೆ ತೆರಳಿದ್ದಾಳೆ. ಅವು ಇನ್ನು ಏನು ಅರಿಯದ ಮುಗ್ದ ಕಂದಮ್ಮಗಳು ಗಂಡನ ಕಿರುಕುಳಕ್ಕೆ ಹೆಂಡತಿ ಮಾಡಿದ್ದೇನು.ಮೂವರು ಮಕ್ಕಳನ್ನ ಕೊಂದು ಆಕೆ ನೇಣಿಗೆ ಶರಣಾಗಿದ್ದೇಕೆ ನೀರಿನಲ್ಲಿ ಮುಳುಗಿಸಿ ಮುಗ್ದ ಮಕ್ಕಳನ್ನ ಕೊಂದಿದ್ಯಾಕೆ ಆಕೆ.

ಈ ಭೂಮಿ ಮೇಲೆ ಹುಟ್ಟಿದ ಮೇಲೆ ಒಂದು ಹೆಣ್ಣು ಒಂದು ಗಂಡು ಅಂತ ದೇವರು ಸೃಷ್ಠಿ ಮಾಡಿರ್ತಾನೆ ಅಂತಾರೆ. ಬಾಲ್ಯದಲ್ಲಿ ತಂದೆ-ತಾಯಿ ಆಶ್ರಯದಲ್ಲಿ ಬೆಳೆದ ಮಕ್ಕಳು ಯವ್ವನವಸ್ತೆಗೆ ಬಂದಮೇಲೆ ಮದುವೆ ಮಾಡ್ಬೇಕು ಅಂತ ನಮ್ಮ ನಮ್ಮ ಜವಾಬ್ದಾರಿ ಕಳ್ಕೋ ಬೇಕು ಅಂತ ಯಾವುದೇ ತಂದೆ ತಾಯಿ ಆದ್ರು ಮಾಡೋ ಕರ್ತವ್ಯ ಅದು, ಗಂಡು ಮಕ್ಕಳುಕ್ಕಿಂತ ಹೆಣ್ಮಕ್ಕಳ ಮನೆಯಲ್ಲಿ ಜವಾಬ್ದಾರಿ ಜಾಸ್ತಿ ಇರುತ್ತೆ. ನಮ್ಮ ಮಗಳಿಗೆ ಒಳ್ಳೆ ಹುಡುಗನ್ನ ಹುಡುಕಬೇಕು, ನನ್ನ ಮಗಳನ್ನ ಹೂವಿನಂತೆ ನೋಡ್ಕೋ ಬೇಕು ಅಂತ, ಇತ್ತ ಹೆಣ್ಮಕ್ಳು ಕೂಡ. ನನ್ನ ಗಂಡ ಹಾಗಿರಿಬೇಕು, ಈಗಿರಬೇಕು ಅಂತ ಹತ್ತಾರು ಕನಸುಗನ್ನ ಕಟ್ಟಿಕೊಂಡಿರ್ತಾರೆ. ನಿತ್ಯ ನನ್ನ ಗಂಡ ನನ್ನ ಸೆರಗಿಡದು ಓಡಾಡುತ್ತಿರಬೇಕು. ಪ್ರೀತಿಯಿಂದ ಮಾತನಾಡಿಸಬೇಕು. ಒಂದು ಕ್ಷಣ ಕೂಡ ನನ್ನ ಗಂಡ ನನ್ನಿಂದ ಮರೆಯಾಗಬಾರ್ದು ಯಾವಾಗಲು ನನ್ನ ಕಣ್ ಮುಂದೆ ಇರಬೇಕು ಅಂತ ಕನಸಿನ ಗೋಪುರವೇ ಕಟ್ಟಿಕೊಂಡಿರ್ತಾರೆ. ಆದ್ರೆ ಈ ಎಲ್ಲ ಕನಸುಗಳು ಈ ಘಟನೆಯಲ್ಲಿ ನುಚ್ಚು ನೂರಾಗಿ ಹೋಗಿದೆ. ಆಸೆಯ ಗೋಪುರ ಹೊಡೆದು ಹೋಗಿದೆ. ಅಷ್ಟೆ ಯಾಕೇ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ.

ಹೌದು. ನಾವು ಈವತ್ತು ಹೇಳ ಹೊರಟ ಸ್ಟೋರಿ ಇದೆ. ಇಲ್ನೋಡಿ.. ಒಂದೆಡೆ ನೇಣಿಗೆ ಶರಣಾದ ತಾಯಿ, ಮತ್ತೊಂದೆಡೆ ಸತ್ತು ಬಿದ್ದಿರುವ ಪುಟ್ಟ ಕಂದಮ್ಮಗಳು, ಇನ್ನೊಂದೆಡೆ ತಾಯಿ ಮಕ್ಕಳು ಬಾರದ ಲೋಕಕ್ಕೆ ಹೋಗಿದ್ದ ದೃಶ್ಯ ಕಂಡು ದುಃಖ ತಡೆಯಲಾರದೆ ಗೋಳೋ ಅಂತ ಕಣ್ಣೀರು ಸುರಿಸುತ್ತಿರುವ ಗ್ರಾಮಸ್ಥರು. ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೊಪ್ಪಳ ಜಿಲ್ಲೆಯಲ್ಲಿ. ಹೌದು, ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಎಂಬ ಪುಟ್ಟ ಗ್ರಾಮದಲ್ಲಿ ಇಂತಹದೊಂದು ಮನಕಲುಕುವ ಘಟನೆ ನಡೆದುಹೋಗಿದೆ. ಯಲ್ಲಮ್ಮ ಬಾರಕೇರ ತನ್ನ ಮೂವರು ಮಕ್ಕಳನ್ನ ಕೊಂದು ತಾನೂ ಸಾವಿನ ಮನೆಯ ಕದ ತಟ್ಟಿದ್ದಾಳೆ. ಏಳು ವರ್ಷದ ಅಕ್ಷತಾ, ನಾಲ್ಕು ವರ್ಷದ ಕಾವ್ಯ, ಇನ್ನೊಬ್ಬ ಎರಡು ವರ್ಷದ ನಾಗರಾಜ್ ನನ್ನು ನಿರ್ದಯದಿಂದ ಮನಸ್ಸು ಕಲ್ಲು ಮಾಡಿಕೊಂಡು, ಒಂಬತ್ತು ತಿಂಗಳು ಹೊತ್ತು ಹೆತ್ತು,ತುತ್ತು ಅನ್ನ ಉಣಬಡಿದ ಹೆತ್ತಮ್ಮಳೆ ಹತ್ಯೆಗೈದಿದ್ದಾಳೆ. ಮನೆಯಲ್ಲಿ ಕುಡಿಯಲು, ಬಳಕೆ ಮಾಡಲು ತುಂಬಿದ್ದ ನೀರಿನ ಟ್ಯಾಂಕಿ, ಹಂಡೆ, ಪಾತ್ರೆಯಲ್ಲಿ ಮುಳುಗಿಸಿ ಕೊಂದಿದ್ದಾಳೆ…

ಯಲ್ಲಮ್ಮ ತಾನೇ ಹೆತ್ತು ಕೈತುತ್ತು ನೀಡಿ ಮುದ್ದಿನಿಂದ ಸಾಕಿದ್ದ ಕರುಳ ಬಳ್ಳಿಯನ್ನ ನೀರಿನ ಮುಳುಗಿಸಿ ಕೊಂದು ಹಾಕಿದ್ದಾಳೆ. ಕೊನೆಗೆ ತಾನೂ ಕೂಡ ನೇಣಿಗೆ ಶರಣಾಗಿದ್ದಾಳೆ. ಗಂಡ ಉಮೇಶ ಬಾರ್ಕೇರ್ ಆಯಾಗಿ ಮನೆಯ ಹೊರಗಡೆ ನಿದ್ರೆಗೆ ಜಾರಿದಾಗ ಯಲ್ಲಮ್ಮ ಮೂವರು ಮಕ್ಕಳನ್ನ ಕೊಂದು ತಾನೂ ಸತ್ತುಹೋಗಿದ್ದಾಳೆ. ಬೆಳಿಗ್ಗೆ ಎದ್ದು ಕದ ತೆರೆಯಲು ಹೋದಾಗ ಬಾಗಿಲು ಓಪನ್ ಆಗಿಲ್ಲ. ಬಾಗಿಲು ತೆರೆಯುವಂತೆ ಕೂಗಿದ್ರು ಬಾಗಿಲು ತೆರೆಯೊರು ಯಾರು ಇಲ್ಲ. ನನ್ನ ಹೆಂಡ್ತಿ ಯಾಕೆ ಬಾಗಿಲು ತೆಗೆಯುತ್ತಿಲ್ಲ ಅಂತ ಕಿಟಕಿಯಲ್ಲಿ ಹಿಣಿಕಿ ಹಾಕಿದಾಗ ಅಲ್ಲಿ ದೊಡ್ಡ ಅನಾಹುತವೇ ನಡೆದು ಹೋಗಿತ್ತು. ಅಲ್ಲೊಂದು ಇಲ್ಲೊಂದು ಮಕ್ಕಳು ಆಟವಾಡುತ್ತಿದ್ದ ಮನೆಯಲ್ಲಿ ಹೆಣವಾಗಿ ಹೋಗಿದ್ರು. ಹೆಂಡತಿ ಮನೆಯ ಚಾವಣಿಗೆ ತನ್ನದೆ ಲುಂಗಿಯಿಂದ ಕತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಲು. :. ಯಲ್ಲಮ್ಮ ಗದಗ ಜಿಲ್ಲೆಯ ಲಕ್ಕುಂಡಿಯವರು, ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದ ದೂರದ ಸಂಬಂಧಿ ಉಮೇಶ ಬಾರಕೇರ ಎನ್ನುವಾತನೊಂದಿಗೆ ಕಳೆದ 8 ವರ್ಷದ ಹಿಂದೆ ಮದುವೆಯಾಗಿತ್ತು. ಮೊದ ಮೊದಲು ಅನ್ಯುನ್ಯವಾಗಿ ಸುಖಿ ಜೀವನ ನಡೆಸುತ್ತಿದ್ರು. ಉಮೇಶ ವೃತ್ತಿಯಲ್ಲಿ ಮೆಕಾನಿಕ್ ಆಗಿದ್ದ ಅದೇ ಲಕ್ಕುಂಡಿಯಲ್ಲಿಯೇ ಸಣ್ಣದೊಂದು ಮೋಟಾರ್ ಸೈಕಲ್ ಗ್ಯಾರೇಜ್ ಇಟ್ಕೊಂಡು ಕೆಲಸ ಮಾಡುತ್ತಿದ್ದ. ಅದು ಯಾವಾಗ ಕುಡಿತದ ಚಟಕ್ಕೆ ಸಿಲುಕಿದ್ನೋ ಅಂದಿನಿಂದ ಯಲ್ಲಮ್ಮಳ ಬಾಳಲ್ಲಿ ಬಿರುಗಾಳಿ ಎದ್ದಂತಾಗಿತ್ತು. ರಾತ್ರಿಯಾದ್ರೆ ಕಂಠಪೂರ್ತಿ ಕುಡಿದು ಹೆಂಡತಿಯ ಜೊತೆ ನಿರಂತರವಾಗಿ ಜಗಳವಾಡುತ್ತಲೇ ಇದ್ದನಂತೆ. ಈಕೆಯ ಶೀಲ ಶಂಕಿಸಿ ನಿತ್ಯ ಕಿರುಕುಳ ನೀಡುತ್ತಿದ್ದನಂತೆ. ಇವರ ಈ ಜಗಳ ಇಡೀ ಎರಡು ಊರಿಗು ಗೊತ್ತು. ಗ್ರಾಮದ ಹಿರಿಯರು ಕೂಡ ಈತನಿಗೆ ಹಲವು ಬಾರಿ ಕರೆದು ಬುದ್ದಿವಾದ ಹೇಳಿದ್ರಂತೆ. ಆದ್ರು ಇದ್ಯಾವುದನ್ನ ಕೇಳದ ಉಮೇಶ ಹೆಂಡತಿಗೆ ಮಾನಸಿಕ,ದೈಹಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಈತನ ಈ ರಾಕ್ಷಸ ವರ್ತನೆಯಿಂದ ಬೇಸತ್ತುಹೋಗಿದ್ದ ಯಲ್ಲಮ್ಮ ತನ್ನ ಎಲ್ಲ ನೋವುಗಳನ್ನ ತನ್ನಲ್ಲಿಯೇ ನುಂಗಿಕೊಂಡು ಜೀವನ ಕಳೆಯುತ್ತಿದ್ಲು, ಪದೇ ಪದೇ ಗಂಡನ ಹಿಂಸೆ ತಾಳಲಾರದೆ ನಿನ್ನೆ ತಡರಾತ್ರಿ ಇಂತಹ ನಿರ್ಧಾರ ಮಾಡಿದ್ದಾಳೆ.ಜೀವನದಲ್ಲಿ ಜಿಗುಪ್ಸೆ ಗೊಂಡು ಮಕ್ಕಳನ್ನು ಹತ್ಯೆಗೈದು,ಕೊನೆಗೆ ತಾನು ನೇಣಿನ ಕುಣಿಕೆ ಏರಿದ್ದಾಳೆ.

ರಾತ್ರಿ ಮಲಗಿ ಬೆಳಗಾಗುವುದರೊಳ ಯಲ್ಲಮ್ಮ ಮತ್ತು ಆಕೆಯ ಮೂರು ಮಕ್ಕಳು ಇನ್ನಿಲ್ಲ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಇಡೀ ಗ್ರಾಮದ ಜನ್ರು ಎಲ್ಲಾ ಕೆಲಸವನ್ನ ಕೈಬಿಟ್ಟು ಸತ್ತವರ ಮನೆ ಬಳಿ ಜಮಾಯಿಸತೊಡಗಿದ್ರು. ಕಿಡಕಿಯಲ್ಲಿ ಹಿಣಕಿ ಹಾಕಿ ನೋಡ್ತಿದ್ರು. ಯಲ್ಲಮ್ಮ ಪಾಪ ಎಂತಃ ಕೆಲಸ ಮಾಡ್ಕೊಂಡ ಬಿಡ್ಲು ಅಂತ ಕಣ್ಣೀರು ಸುರಿಸುತ್ತಿದ್ರು. ತಾನು ಸತ್ರು ಸಾಯ್ಲಿ ಪಾಪ ಬಾಳಿ ಬದುಕಬೇಕಾಗಿದ್ದ ಆ ಮುಗ್ದ ಮಕ್ಕಳು ಏನು ಪಾಪ ಮಾಡಿದ್ರು. ಮಕ್ಕಳನ್ನ ಕೊಂದು ತಾನು ಸತ್ತೋದ್ಲಲ್ಲ ಅಂತ ಮಕ್ಕಳ ಕಂಡು ಮನಮಿಡಿಯುತ್ತಿದ್ವು. ಗಂಡ ಮಾಡೋ ಕೆಲಸದಿಂದ ಮುಗ್ದ ಜೀವಗಳ ಬಲಿಯಾದ್ವಲ್ಲ ಅಂತ ಪಾಪಿ ಪತಿರಾಯನಿಗೆ ಹಿಡಿಶಾಪ ಹಾಕ್ತಿದ್ರು.

ಯರೇಹಂಚಿನಾಳ ಗ್ರಾಮದಲ್ಲಿ ತಾಯಿ ಮಕ್ಕಳು ಸುಸೈಡ್ ಆಗಿದೆ ಎಂಬ ಸುದ್ದಿ ತಿಳದ ಕುಕನೂರು ಪೋಲಿಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕದ ತೆರೆದು ನೋಡಿದಾಗ ತಾಯಿ ಮಕ್ಕಳು ಹೆಣವಾಗಿ ಬಿದ್ದಿದ್ರು. ಇವರ ಈ ಸ್ಥಿತಿ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಘಟನೆಗೆ ಕಾರಣವಾದ ಗಂಡ ಉಮೇಶನನ್ನ ವಶ ಪಡೆದಿದ್ದಾರೆ. ಗಂಡ ಕುಡಿದು ನಿತ್ಯ ಹೆಂಡತಿಗೆ ಕಿರುಕುಳ ನೀಡುತ್ತಿದ್ದ, ಇವರ ಸಂಸಾರದಲ್ಲಿ ಪದೇ ಪದೇ ಜಗಳವಾಗುತ್ತಿತ್ತು, ಊರಲ್ಲಿ ಹಿರಿಯರು ಬುದ್ದಿವಾದ ಹೇಳಿದ್ರು ಕುಡಿಯುವುದು ಕಿರುಕುಳ ನೀಡುತ್ತಿದ್ದರಿಂದ ಈ ರೀತಿ ಘಟನೆ ನಡೆದಿದೆ. ನಾವು ಓಪನ್ ಮೈಂಡ್ ಹಿಡ್ಕೊಂಡು ತನಿಖೆ ಮಾಡ್ತಿವಿ ಅಂತಾ ಎಸ್ಪಿ ರೇಣುಕಾ ಕೆ ಸುಕುಮಾರ್ ಹೇಳ್ತಾರೆ.
ಈ ಹೃದಯ ವಿದ್ರಾವಕ ಘಟನೆ ತಿಳಿದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ ಕೂಡ ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಸತ್ತವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಇನ್ನು ಈ ಮನಕಲಕುವ ಘಟನೆ ಕಂಡು ಮಮ್ಮಲ ಮರಗಿದ್ದಾರೆ. ಸತತವಾಗಿ ಕಾಡುತ್ತಿರುವ ಬರಗಾಲದಿಂದ ಕೆಲಸ ಇಲ್ಲದಂತಹ ಪರಿಸ್ಥಿತಿ, ಹಾಗೂ ಎಲ್ಲೆಂದರಲ್ಲಿ ಯಥೇಚ್ಛವಾಗಿ ನಡೆದಿರುವ ಅಕ್ರಮ ಮದ್ಯ ಮಾರಾಟದಿಂದ ಜನ ಮದ್ಯವ್ಯಸನಿ ಗಳಾಗುತ್ತಿದ್ದಾರೆ. ಇದೊಂದು ಸಾಮಾಜಿಕ ಪಿಡುಗಾಗಿದ್ದು ಇದರ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಬರಬೇಕಿದೆ. ಎಂತಹ ಪರಿಸ್ಥಿತಿ ಬಂದು ಆತ್ಮಸ್ಥೈರ್ಯ ಬಿಡಬಾರ್ದು, ಆತ್ಮಹತ್ಯೆ ಯತ್ತ ಮುಖ ಮಾಡಬಾರದು. ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಬೇಕು,ಇದಕ್ಕೆಲ್ಲ ಆಯಾ ಗ್ರಾಮದಲ್ಲಿ ಗ್ರಾಮಸ್ಥರೆ ಮುಂದೆ ಬರಬೇಕು. ಆಗ ಮಾತ್ರ ಇಂತಹ ಘಟನೆಗಳು ತಟೆಗಟ್ಟಬಹುದು ಅಂತಾರೆ ಶಾಸಕರು.

ಒಟ್ನಲ್ಲಿ ತನ್ನ ಮುದ್ದು ಕಂದಮ್ಮಗಳನ್ನು ತಾನೇ ಕೊಲ್ಲುವಂತಹ ಮನಸ್ಥಿತಿಗೆ ಬಂದು, ತಾನೂ ನೇಣಿಗೆ ಶರಣಾದ ತಾಯಿಯ ಬಗ್ಗೆ ಗ್ರಾಮಸ್ಥರಲ್ಲಿ ಅನುಕಂಪದ ಜೊತೆಗೆ ಆಕ್ರೋಶ ಎರಡೂ ಇವೆ. ಮಕ್ಕಳ ಶವಗಳನ್ನು ವಾಹನಗಳಲ್ಲಿ ಸಾಗಿಸುವಾಗ ಇಡೀ ಗ್ರಾಮಸ್ಥರೇ ಕಣ್ಣು ತುಂಬಿ ಒದ್ದೆಯಾಗಿತ್ತು. ಇಡೀ ಗ್ರಾಮಸ್ಥರು ಸೇರಿ ಈ ತಾಯಿ ಮಕ್ಕಳ ಅಂತ್ಯ ಕ್ರಿಯೇ ನೆರವೇರಿಸಲಿದ್ದಾರೆ. ಸದ್ಯ ಪ್ರಕರಣ ಕುಕನೂರು ಠಾಣೆಯಲ್ಲಿ ದಾಖಲಾಗಿದ್ದು ಗಂಡನ ವಿಚಾರಣೆ ಮುಂದುವರೆದಿದೆ

Please follow and like us:
error