೩ನೇ ವಾರ್ಡನ ಯುವಕರು ಜೆಡಿಎಸ್ ಸೇರ್ಪಡೆ

ಕೊಪ್ಪಳ : ನಗರದ ೩ನೇ ವಾರ್ಡನ ಹಮಾಲರ ಕಾಲೂನಿಯಲ್ಲಿ ಶನಿವಾರದಂದು ಸಂಜೆ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾಧ್ಯಕ್ಷ ಪ್ರದೀಪಗೌಡ ಮಾಲಿಪಾಟೀಲ ಮಾತನಾಡಿ ನಗರದ ಅನೇಕ ವಾರ್ಡಿನಲ್ಲಿ ಅಭಿವೃದ್ಧಿ ಕುಂಟಿತಗೊಂಡಿದ್ದು ಎದ್ದು ಕಾಣುತ್ತದೆ ವಾರ್ಡಿನಲ್ಲಿ ಮೂಲಭೂತ ಸೌಕರ್ಯಗಳಾದ ಸ್ವಚ್ಚತೆ, ಶುದ್ಧವಾದ ಕುಡಿಯುವ ನೀರು, ವಿದ್ಯುತ್‌ದೀಪ ಇನ್ನೂ ಅನೇಕ ಸಮಸ್ಯಗಳಿದ್ದು ವಾರ್ಡಿನ ಸದಸ್ಯರು ಹಾಗೂ ನಗರಸಭೆ ಮಲಗಿಕೊಂಡಿದೆ ಎಂದು ಇನ್ನಾದರೂ ಮೂಲಬೂತ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಬದಲ್ಲಿ ಯುವಘಟಕದ ಜಿಲ್ಲಾಧ್ಯಕ್ಷ ಕೆ.ಎಸ್ ಕೊಡತಗೇರಿ ಹಬೀಬ್ ಖಾನ್ ಎಫ್.ಎಫ್.ಸಿ ರವರನ್ನು ಯುವ ನಗರ ಘಟಕದ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದರು.
ನಂತರ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಸೈಯದ್ ಮಾತನಾಡಿ ಕೊಪ್ಪಳದಲ್ಲಿ ನಗರ ಅಭಿವೃದ್ದಿಗಿಂತ ಶಾಸಕರು ತಮ್ಮ ಅಭಿವೃದ್ಧಿಯಲ್ಲಿ ಮುಂದಾಗಿದ್ದಾರೆ ನಗರಗಳಲ್ಲಿ ಹಲವಾರು ಸಮಸ್ಯೆಗಳಿದ್ದು ರಸ್ತೆಗಳು ಪೂರ ಹದೆಗೆಟ್ಟಿದ್ದು, ಧೂಳಿನಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಮುಂಬರುವ ದಿನಗಳಲ್ಲಿ ಶಾಸಕರಿಗೆ ಸಾರ್ವಜನಿಕರು ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮವು ಹಬೀಬ ಖಾನ ಎಫ್.ಎಫ್.ಸಿ, ಅಶ್ಫಕ ಅರಗಂಜಿ ರವರ ನೇತೃತ್ವದಲ್ಲಿ ಸುಮಾರು ೪೦ ಕ್ಕೂ ಹೆಚ್ಚು ಯುವಕರು ಮತ್ತು ಮಹಿಳೆಯರು ಜೆಡಿಎಸ್ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಧ್ಯಕ್ಷ ವೀರೇಶ ಮಾಹಾಂತಯ್ಯನಮಠ, ಶಿವು ಮೊರನಾಳ, ಮಂಜುನಾಥ ಗಡ್ಡದ, ಲತಾ ಅಳವಂಡಿಕರ, ಜಾಫರ ಖಾನ್, ಗಾಳೆಪ್ಪ ಗಡೆಮನಿ, ಸಮದ, ಮಹೆಮೂದ, ಕಲಿಲ್, ಜಾಫರ ಸಾಬ ಸಂಗಟಿ, ಬಸೀರ, ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು .

Please follow and like us:
error