You are here
Home > Koppal News > ೨ ಲಕ್ಷ ಕ್ಯೂಸೆಕ್ಸ್ ನೀರು ಹೊರಕ್ಕೆ : ಹೊಲ,ಗದ್ದೆಗಳಿಗೆ ನುಗ್ಗಿದ ನೀರು, ಜನ ಕಂಗಾಲು

೨ ಲಕ್ಷ ಕ್ಯೂಸೆಕ್ಸ್ ನೀರು ಹೊರಕ್ಕೆ : ಹೊಲ,ಗದ್ದೆಗಳಿಗೆ ನುಗ್ಗಿದ ನೀರು, ಜನ ಕಂಗಾಲು

ಆ ಜಿಲ್ಲೆಯಲ್ಲಿ ಮಳೆಯಿಲ್ಲದೇ ಅನ್ನದಾತರು ಕಂಗಾಲಾಗಿದ್ರು. ಬಿತ್ತನೆ ಮಾಡಿದ್ದ ಬೆಳೆಗಳನ್ನ ನಾಶ ಮಾಡಿ ಕಣ್ಣೀರು ಹಾಕಿದ್ರು, ಈಗ ಮಳೆನಾಡು ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗ್ತಿದ್ದು, ತುಂಗಾಭದ್ರೆಯ ಒಡಲು ಭರ್ತಿಯಾಗಿದೆ. ಒಳಹರಿವು ಹೆಚ್ಚಾಗುತ್ತಿದ್ದಂತೆ ನದಿಗೆ ಲಕ್ಷಾಂತರ ಕ್ಯೂಸೆಕ್ಸ್ ನೀರು ಹರಿಬಿಟ್ಟಿದ್ದು ಸೇತುವೆಗಳು ಮುಳುಗಡೆಯಾಗಿವೆ…

ತುಂಬಿ ಹರಿಯುತ್ತಿರೋ ತುಂಗಾಭದ್ರಾ ನದಿ, ಮತ್ತೊಂದೆಡೆ ನದಿಯ ಮುಂದೆ ಸೆಲ್ಪೀ ತೆಗೆದುಕೊಳ್ತಿರೋ ಯುವಕರು. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು, ಕೊಪ್ಪಳ ಜಿಲ್ಲೆಯಲ್ಲಿ. ಹೌದು, ಕರಾವಳಿ ಹಾಗೂ ಮಲೆನಾಡಿನಾದ್ಯಂತ ವರುಣನ ಆರ್ಭಟ ಜೋರಾಗಿದೆ. ಹೀಗಾಗಿ ಹೊಸಪೇಟೆಯ ತುಂಗಾಭದ್ರ ಡ್ಯಾಂ ಭರ್ತಿಯಾಗಿದ್ದು, ಜಲಾಶಯದಿಂದ ಬರೋಬ್ಬರಿ ಒಂದೂವರೆ ಲಕ್ಷ ಕ್ಯೂಸೇಕ್ ನೀರನ್ನ ನದಿಗೆ ಬಿಟ್ಟಿದ್ದು, ಬಹುತೇಕ ಸೇತುವೆಗಳು ಮುಳುಗಿವೆ. ಅಲ್ದೇ, ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಬಳ್ಳಾರಿ ಜಿಲ್ಲೆಯ ಕಂಪ್ಲಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಸಂಪೂರ್ಣ ಬಂದ್ ಆಗಿದೆ. ಹೆಚ್ಚಿನ ಪ್ರಮಾಣದ ನೀರು ಬಿಟ್ಟಿದ್ದರಿಂದ ನದಿ ಪಾತ್ರದ ರೈತರ ಜಮೀನುಗಳಿಗೂ ನೀರು ನುಗ್ಗಿದ್ದು ಬೆಳೆಗಳು ಜಲಾವೃತಗೊಂಡಿವೆ.

ಇನ್ನೂ, ನದಿಗೆ ಭಾರೀ ಪ್ರಮಾಣದ ನೀರು ಹರಿಬಿಡುತ್ತಿರುವುದರಿಂದ ಅಪಾಯದ ಮಟ್ಟ ಮೀರಿ ನದಿ ತುಂಬಿ ಹರಿಯುತ್ತಿದೆ. ತುಂಗಾಭದ್ರ ಡ್ಯಾಂಗೆ ಒಳಹರಿವು ಹೆಚ್ಚಾಗಿರುವುದರಿಂದ ೨ ಲಕ್ಷ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗಿದೆ‌ ಹಲವಾರು ಹಳ್ಳಿಗಳು ಸೇರಿದಂತೆ ರೈತರ ಜಮೀನುಗಳು ಜಲಾವೃತವಾಗುವ ಸಂಭವ ಇದೆ.. ಮತ್ತೊಂದೆಡೆ ನೀರು ನೋಡೋಕೆ ಪ್ರವಾಸಿಗರ ದಂಡು ಕೂಡ ಹರಿದುಬರ್ತಿದೆ. ನೀರನ ರುದ್ರ ರಮಣೀಯ ದೃಶ್ಯವನ್ನ ನೋಡಿ, ಸೆಲ್ಪಿ ತೆಗೆದುಕೊಂಡು ಸಂಭ್ರಮಿಸುವುದು ಒಂದೆಡೆಯಾದ್ರೆ, ಮತ್ತೊಂದೆಡೆ ಜಲಾಶಯ ಭರ್ತಿಯಾಗಿದ್ದಕ್ಕೆ ನದಿಗೆ ಬಾಗೀನ ಅರ್ಪಿಸುವುದು ಕಂಡು ಬಂತು.

ಒಟ್ನಲ್ಲಿ ನದಿಗೆ ನೀರು ಬಿಟ್ಟಿದ್ದಕ್ಕೆ ರೈತರ ಮೊಗದಲ್ಲಿ ಹರ್ಷಷ ಕಂಡುಬಂದ್ರೆ, ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನ ಸವಿದು ಸಂಭ್ರಮಿಸಿದ್ರು.

Top