೨೦೨೦ ರ ಶ್ರೀಮಠದ ಜಾಗೃತಿ ನಡಿಗೆ- ಲಕ್ಷ ವೃಕ್ಷೋತ್ಸವ

ಶ್ರೀ ಗವಿಸಿದ್ಧೇಶ್ವರ ಜಾತ್ರ ಮಹೋತ್ಸವ ೧೨,೧೩,೧೪ ಜನೇವರಿ ೨೦೨೦ರಂದು ಜರುಗುವ ನಿಮಿತ್ಯ ಈ ವರ್ಷದ ಜಾಗೃತಿ ಜಾಥಾ ಕಾರ್ಯಕ್ರಮ ಲಕ್ಷ ವೃಕ್ಷವನ್ನು ನೆಟ್ಟು ಬೆಳೆಸುವ ಲಕ್ಷ ವೃಕ್ಷೆತ್ಸವ ಎಂಬ ಶಿರ್ಷಿಕೆ ದೈವ ಸಾಕ್ಷಾತ್ಕಾರಕ್ಕೆ ಲಕ್ಷ ದೀಪೋತ್ಸವ, ಪ್ರಕೃತಿ ಸಾಕ್ಷಾತ್ಕಾರಕ್ಕೆ ಕ್ಷ ವೃಕ್ಷೋತ್ಸವ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಲಕ್ಷ ವೃಕ್ಷೆತ್ಸವ ವಿಶೇಷ ಹಾಗೂ ವಿನೂತನವಾದ ಕಾರ್ಯಕ್ರಮವಾಗಿದ್ದು ಪರಿಸರ ರಕ್ಷಣೆ ಕೇವಲ ಭಾಷಣ, ಮೆರವಣಿಗೆ, ಘೋಷಣೆಗೆ ಸಿಮಿತವಾಗದೆ ಪ್ರಾಯೋಗಿಕವಾಗಿ ಅನುಷ್ಟಾನಗೊಳಿಸುವದಾಗಿದೆ. ಮರ ಬೆಳಿಸಿ ಎಂದು ಹೇಳದೆ ಖುದ್ದಾಗಿ ಸಸಿ ನೆಟ್ಟು ರಕ್ಷಿಸಿ, ಪೋಷಿಸಿ ವೃಕ್ಷ ಮಾಡಬೇಕಿದೆ. ಒಂದು ಮರವು ಸಕಲ ಜೀವ ಸಂಕುಲಕ್ಕೆ ಅನ್ನ, ಆಶ್ರಯ, ನೇರಳು, ಪ್ರಾಣ ವಾಯು ನೀಡುವ ನಿತ್ಯ ದಾಸೋಹ ಅಕ್ಷಯ ಪಾತ್ರೆ. ಅನ್ನ ದಾಸೋಹ, ಅಕ್ಷರ ದಾಸೋಹ, ಆರೋಗ್ಯ ದಾಸೋಹದ ಜೊತೆಗೆ ಶ್ರೀ ಮಠದ ವತಿಯಿಂದ ವಿನೂತನ ವೃಕ್ಷ ಸಂಕಲ್ಪ ಜಾಗೃತಿ ಅಭಿಯಾನವನ್ನು ಲಕ್ಷ ವೃಕ್ಷೆತ್ಸವ ಶಿರ್ಷಿಕೆಯ ದೈವ ಸಾಕ್ಷಾತ್ಕಾರಕ್ಕೆ ಲಕ್ಷ ದೀಪೋತ್ಸವ, ಪ್ರಕೃತಿ ಸಾಕ್ಷಾತ್ಕರಕ್ಕೆ ಲಕ್ಷ ವೃಕ್ಷೆತ್ಸವ ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚಿನ ವಿವಿಧ ಸಸಿಗಳನ್ನು ಬೆಳೆಯಲಾಗಿದ್ದೂ ಶ್ರೀ ಮಠದ ವತಿಯಿಂದ ಉಚಿತವಾಗಿ ವಿತರಿಸಿ ಆ ಎಲ್ಲಾ ಸಸಿಗಳೆನ್ನೆಲ್ಲಾ ಗಿಡಗಳಾಗಿ, ಮರಗಳಾಗಿ ಬೆಳೆಯು ಹಾಗೆ ಮಾಡುವದೇ ಈ ಕಾರ್ಯಕ್ರಮದ ಮೂಲ ಉದ್ಧೇಶವಾಗಿದೆ. ಹಿರೇಹಳ್ಳದ ಎಡ-ಬಲಗಳಲ್ಲಿ ತೆಂಗು, ನೇರಳೆ ಸಸಿಗಳನ್ನು ನೆಡುವುದರಿಂದ ಉತ್ತಮ ಪರಿಸರ ಹಾಗೂ ರೈತರಿಗೆ ಉತ್ತಮ ಆದಾಯದ ಮೂಲಗಳನ್ನು ಈ ಮೂಲಕ ಕಂಡುಕೊಳ್ಳುವಲ್ಲಿ ಇದು ಪ್ರಮುಕ ಪಾತ್ರ ವಹಿಸುತ್ತದೆ. ಈ ಕಾರ್ಯಕ್ರಮವು ದಿನಾಂಕ: ೦೮-೦೧-೨೦೨೦ರಂದು ಕೊಪ್ಪಳದ ಸಾರ್ವಜನಿಕ ಮೈದಾನ/ತಾಲೂಕ ಕ್ರಿಡಾಂಗಣದಲ್ಲಿ ಶ್ರೀ ಗವಿಮಠ ಪರಮ ಪೂಜ್ಯರು, ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಸಣ್ಣ ನೀರಾವರಿ ಮತ್ತು ಕೆರೆಯ ಅಬಿವೃದ್ಧಿ ಪ್ರಾಧಿಕಾರ, ಖಾಸಗಿ ಶಾಲಾ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಗಳು ಭಾಗಿಯಾಗಲಿವೆ.

Please follow and like us:
error