೨ನೇಯ ಹಂತದ ವೇತನ ವರದಿಯನ್ನು ಯಥಾವತ್ತು ಜಾರಿಗೊಳಿಸಲು ಆಗ್ರಹ

 ಬಡ್ತಿ ಪ್ರೌಢಶಾಲಾ ಶಿಕ್ಷಕರ ತಾರತಮ್ಯ ಸರಿಪಡಿಸಲು ಹಾಗೂ ೨ನೇ ವೇತನ ವರದಿಯನ್ನು ಯತ್ತಾವತ್ತು ಜಾರಿಗೊಳಿಸಲು ಕೋರಿ ಕೊಪ್ಪಳ ಜಿಲ್ಲೆಯ ಸಮಸ್ತ ಬಡ್ತಿ ಪ್ರೌಢಶಾಲಾ ಶಿಕ್ಷಕರು ರಾಜ್ಯದ ಮುಖ್ಯಮಂತ್ರಿಯವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.

o ಕೊಪ್ಪಳ : ದಿನಾಂಕ : ೨೫-೦೮-೨೦೧೮ ರಂದು ಕೊಪ್ಪಳ ಜಿಲ್ಲೆಯ ಬಡ್ತಿ ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
o ೬ನೇ ವೇತನದ ಆಯೋಗದ ೨ನೇ ಸಂಪುಟದ ವರದಿಯನ್ನು ಯತ್ತಾವತ್ತು ಜಾರಿಗೆಗೊಳಿಸುವುದು.
o ಪ್ರೌಢಶಾಲಾ ಪದನೊತ್ತಿಯಿಂದಾಗಿ ೧೦. ೧೫. ೨೦.೨೫.೩೦ ಸೇವಾ ವರ್ಷಗಳ ಕಾಲಬದ್ದ ಬಡ್ತಿ ವೇತನವನ್ನು ಮಂಜೂರು ಮಾಡುವುದು.
GO NO:ED78 SLB 2016 DATE : 15-04-2016  ೧೫-೦೪-೨೦೧೬ ಈ ಆದೇಶದ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ಮೂಲ ವೇತನದಿಂದ ತೆಗೆದು ಪಿಪಿ ಯಲ್ಲಿ ಸೇರಿಸದೆ ಮೂಲ ವೇತನದಲ್ಲಿಯೇ ಮುಂದುವರಿಸಲು ಬೇಡಿಕೆ.
ಈ ಸಂದರ್ಭದಲ್ಲಿ : ಜಿಲ್ಲಾಧ್ಯಕ್ಷರಾದ ಈರಣ್ಣ ಕುಂಬಾರ, ಜಿಲ್ಲಾ ಕಾರ್ಯದರ್ಶಿ ರಾಮಣ್ಣ ಚಲವಾದಿ, ಕುಷ್ಟಗಿ ತಾಲೂಕ ಅಧ್ಯಕ್ಷರಾದ ವಿ.ವಿ.ಕೊಳ್ಳಿ, ಕಾರ್ಯದರ್ಶಿ ಸುಬಾಸ.ವಿ.ನಿಡಸನೂರ, ಗಂಗಾವತಿ ಅಧ್ಯಕ್ಷರಾದ ಉಮೇಶ ಮಡಿವಾಳರ, ಕಾರ್ಯದರ್ಶಿ ಶಿವಾನಂದ ತಿಮ್ಮಾಪೂರ, ಈರಣ್ಣ ಢಾಣಾಪೂರ, ಯಲಬುರ್ಗಾ ತಾಲೂಕ ಅಧ್ಯಕ್ಷ ಅಶೋಕ ಮಾಲಿಪಾಟೀಲ, ಕಾರ್ಯದರ್ಶಿ ಬಸವರಾಜ ಮೇಟಿ, ಜಗನ್ನಾಥ, ರಾಮಣ್ಣ ಬಾರಕೇರ, ಹೇಮಣ್ಣ ಕವಲೂರು, ಶಂಕರಗೌಡ ಪಾಟೀಲ, ಹನುಮಂತಪ್ಪ ದಾಸರ, ಗೋಪಾಲ ರಾಥೋಡ, ಎ.ಪಿ.ಅಂಗಡಿ, ನೀಲಪ್ಪ, ಮುಂತಾದವರ ಉಪಸ್ಥಿತಿಯಲ್ಲಿ ಮನವಿ ಸಲ್ಲಿಸಲಾಯಿತು.

Please follow and like us:

Related posts