೧೬೧೦ ಕೋಟಿ ಸಿಎಂ ಪ್ಯಾಕೇಜ್ : ಜನತೆಯಲ್ಲಿ ಚೈತನ್ಯ ತುಂಬಿದೆ- ಸಿ.ವಿ. ಚಂದ್ರಶೇಖರ್

Koppal ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವ ನಿರ್ಧಾರಕ್ಕೆ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ ಚಂದ್ರಶೇಖರ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ರಾಜ್ಯದ ಆರ್ಥಿಕ ಸ್ಥಿತಿಗತಿ ಉತ್ತಮ ಇಲ್ಲದೇ ಇದ್ದರೂ ರೈತರು ಹಾಗೂ ಸಣ್ಣ ಪುಟ್ಟ ಉದ್ಯೋಗಸ್ಥರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಘೋಷಣೆಯನ್ನು ಮಾಡಿರುವುದು, ಬಳಲುತ್ತಿರುವ ಜೀವಕ್ಕೆ ಹೊಸ ಚೈತನ್ಯ ತುಂಬಿದಂತಾಗಿದೆ.ಲಾಕ್‌ಡೌನ್ ಪರಿಣಾಮ ಹೂ ಬೆಳಗಾರರು ಸಂಕಷ್ಟದಲ್ಲಿದ್ದು ಒಂದು ಹೆಕ್ಚೇರ್‌ಗೆ 25,000 ದಂತೆ ಪರಿಹಾರ ಧನ ಘೋಷಣೆ ಮಾಡಿದ್ದು, ಇದೇ ರೀತಿ ತರಕಾರಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಸರ್ಕಾರ ಚಿಂತನೆ ನಡೆಸಿರುವುದು. ಹಾಗೂ ರಾಜ್ಯದಲ್ಲಿ ಸುಮಾರು 60,000 ಅಗಸರಿಗೆ, 2, 30,000 ಜನ ಕ್ಷೌರಿಕ ವೃತ್ತಿಯಲ್ಲಿರುವರಿಗೆ 5000 ಪರಿಹಾರವನ್ನು ಘೋಷಣೆ ಮಾಡಿರುವುದು.
ನೇಕಾರರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ನೇಕಾರರ ಸಮ್ಮಾನ್ ಯೋಜನೆ ಜಾರಿಗೊಳಿಸಿ, ಕೈ ಮಗ್ಗ ನೇಕಾರರಿಗೆ 2000 ಪರಿಹಾರ ಘೋಷಣೆ ಮಾಡಿ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತಿರುವುದು.ಕಟ್ಟಡ ಕಾರ್ಮಿಕರಿಗೆ ಹೆಚ್ಚುವರಿಗೆ 3000 ಪರಿಹಾರ ಘೋಷಣೆ ಮಾಡಲಾಗಿದ್ದು ಇದರಿಂದ ಕಟ್ಟಡ ಕಾರ್ಮಿಕರಿಗೆ ಒಟ್ಟು 5000 ಪರಿಹಾರ ನೀಡಿರುವುದು.ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರು ತಮ್ಮ ದೈನಂದಿನ ಉದ್ಯೋಗವನ್ನು ನಡೆಸಲಾಗಿದೇ ತಮ್ಮ ಆದಾಯವನ್ನು ಕಳೆದುಕೊಂಡಿರುವುದರಿಂದ ರಾಜ್ಯದಲ್ಲಿ ಇರುವ ಇಂತಹ 7,75,000 ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ 5000 ರೂಗಳನ್ನು ನೀಡಿರುವುದು.
ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳನ್ನು ನಡೆಸುವ ಉದ್ದಿಮೆದಾರರು ತಮ್ಮ ಉದ್ದಿಮೆಗಳನ್ನು ತೆರೆಯಲಾಗಿದೆ ಹಾಗೂ ತಮ್ಮ ಉತ್ಪನ್ನಗಳನ್ನು ಸಾಗಿಸಿ ಮಾರಾಟ ಮಾಡಲಾಗದೆ ನಷ್ಟವನ್ನು ಅನುಭವಿಸಿದ್ದಾರೆ ಎನ್ನುವುದನ್ನು ಅರಿತು ಮುಂದಿನ ದಿನಗಳಲ್ಲಿ ವಹಿವಾಟು ಚೇತರಿಕೆಯಾಗಲು ಕೆಲವು ತಿಂಗಳ ಸಮಯ ಬೇಕಾಗಿರುವುದರಿಂದ ಅತಿಸಣ್ಣ, ಸಣ್ಣ ಹಾಗೂ ಉದ್ಯಮ ಉದ್ದಿಮೆಗಳ ವಿದ್ಯುತ್ ಬಿಲ್ಲಿನ ಫಿಕ್ಸ್ಡ್ ಚಾರ್ಜನ್ನು ಎರಡು ತಿಂಗಳ ಅವಧಿಗೆ ಪೂರ್ತಿಯಾಗಿ ಮನ್ನಾ ಮಾಡಿರುವುದು.ಬೃಹತ್ ಕೈಗಾರಿಕೆಗಳಿಗೆ ಅವರ ವಿದ್ಯುತ್ ಬಿಲ್ಲಿನ ಫಿಕ್ಸ್ಡ್ ಚಾರ್ಜ್ ನ ಪಾವತಿಯನ್ನು ಎರಡು ತಿಂಗಳ ಅವಧಿಗೆ ಯಾವುದೇ ಬಡ್ಡಿ ಅಥವಾ ದಂಡ ಇಲ್ಲದೇ ಬಡ್ಡಿ ರಹಿತವಾಗಿ ಮುಂದೂಡಿದ್ದು,  ನಿಗದಿತ ಸಮಯದೊಳಗೆ ವಿದ್ಯುತ್ ಬಿಲ್ಲಿನ ಮೊತ್ತವನ್ನು ಪಾವತಿಸುವ ಎಲ್ಲಾ ವರ್ಗದ ಗ್ರಾಹಕರಿಗೆ ಪ್ರೋತ್ಸಾಹ ರಿಯಾಯಿತಿಯನ್ನು ನೀಡಿರುವುದು.ವಿಳಂಬ ಪಾವತಿಗಾಗಿ ವಿದ್ಯುತ್ ಬಿಲ್ಲಿನ ಮೊತ್ತದ ಮೇಲೆ ವಿಧಿಸುವ ಬಡ್ಡಿಯನ್ನು ಕಡಿಮೆಗೊಳಿಸಲಾಗಿರುವುದು, 
ಕಂದಾಯ ಬಾಕಿ ಮೊತ್ತವನ್ನು ಕಂತುಗಳಲ್ಲಿ ಭಾಗವಾಗಿ ಪಾವತಿಸಲು ಅವಕಾಶ ಕಲ್ಪಿಸಿ ಮತ್ತು ಕಂದಾಯ ಬಾಕಿ ಮೊತ್ತವನ್ನು ಪಾವತಿಸದಿರುವ ಗ್ರಾಹಕರಿಗೆ 30.06.2020 ರವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸದೇ ಇರಲು ನಿರ್ಧಾರ ಮಾಡಲಾಗಿರುವ ಸರ್ಕಾರದ ಈ ನಿರ್ಧಾರ ನಮ್ಮ ಸರ್ಕಾರ ನಾಡಿನ ಜನತೆಯ ಬಗೆಗಿರುವ ಕಾಳಜಿಯನ್ನು ತೋರಿಸುತ್ತದೆ. 
ಮುಖ್ಯಮಂತ್ರಿಗಳು ಇಂತಹ ಸಂಧಿಗ್ದ ಸಮಯದಲ್ಲೂ ಇಂತಹ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದು ನಾಡಿನ ಜನತೆಯ ಒಳತಿಗಾಗಿ ಎನ್ನುವುದನ್ನ ಮನನ ಮಾಡಿಕೊಂಡು ನಾಡಿನ ಜನತೆಯು ಸರ್ಕಾರದ ಆದೇಶ ಮತ್ತು ನಿರ್ದೇಶನಗಳಿಗೆ ಬದ್ಧರಾಗಿ ಲಾಕ್ ಡೌನ್ ಮುಗಿಯುವವರೆಗೂ ಮನೆಯಲ್ಲೇ ಇರೋಣ ಕರೋನ ವಿರುದ್ಧ ಹೋರಾಡೋಣ ಜನನಾಯಕ ಯಡಿಯೂರಪ್ಪ ಜೀ ಸರ್ಕಾರದೊಂದಿಗೆ ಕೈ ಜೋಡಿಸೋಣ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ ಚಂದ್ರಶೇಖರ ಕರೆ ನೀಡಿದ್ದಾರೆ

Please follow and like us:
error