೧೬ನೇ ಕಿರಿಯರ ರಾಷ್ಟ್ರಮಟ್ಟದ ವಾಲಿಬಾಲ್ ಚಾಂಪಿಯನ್‌ಷಿಪ್ ಕ್ರೀಡಾಕೂಟಕ್ಕೆ ನಂದಿನಿ ಆಯ್ಕೆ

ಕೊಪ್ಪಳ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳ ಸಾಧನೆ

ಕೊಪ್ಪಳ ಫೆ.  : ಕೊಪ್ಪಳ ೧೬ನೇ ಕಿರಿಯರ ರಾಷ್ಟ್ರಮಟ್ಟದ ವಾಲಿಬಾಲ್ ಚಾಂಪಿಯನ್‌ಷಿಪ್ ಕ್ರೀಡಾಕೂಟಕ್ಕೆ ಕೊಪ್ಪಳ ಕ್ರೀಡಾ ವಸತಿ ನಿಲಯದ ಕ್ರೀಡಾಪಟು ನಂದಿನಿ ತಂದೆ ಮಂಜುನಾಥ ಮೇದ್ರಳ್ಳಿ ಆಯ್ಕೆಯಾಗಿದ್ದಾಳೆ.
೧೬ನೇ ಕಿರಿಯರ ರಾಷ್ಟ್ರಮಟ್ಟದ ವಾಲಿಬಾಲ್ ಚಾಂಪಿಯನ್‌ಷಿಪ್ ಕ್ರೀಡಾಕೂಟವು ಫೆ. ೨೩ ರಿಂದ ೨೮ ರವರೆಗೆ ಭುಬನೇಶ್ವರ (ಓಡಿಸ್ಸಾ) ದಲ್ಲಿ ಜರುಗಲಿದೆ. ಈ ಕ್ರೀಡಾಕೂಟದಲ್ಲಿ ಕ್ರೀಡಾಪಟು ನಂದಿನಿ ಭಾಗವಹಿಸಲಿದ್ದು, ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಕ್ರೀಡಾಪಟು ನಂದಿನಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ. ನಾಡಗೀರ, ಖೋಖೋ ತರಬೇತುದಾರ ಎ.ಎನ್. ಯತಿರಾಜು, ವ್ಹಾಲಿಬಾಲ್ ತರಬೇತುದಾರ ಸುರೇಶ ಯಾದವ, ಕ್ರೀಡಾ ಇಲಾಖೆಯ ಸಿಬ್ಬಂದಿಗಳಾದ ತುಕಾರಾಮ ರಂಜಪಲ್ಲಿ, ಹನುಮೇಶ ಪೂಜಾರ ಸೇರಿದಂತೆ ಇತರೇ ಸಿಬ್ಬಂದಿ ವರ್ಗದವರು ಶುಭ ಹಾರೈಸಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸಲಿ ಎಂದು ಅಭಿನಂದಿಸಿದ್ದಾರೆ.

Please follow and like us:

Related posts