ಹೋರಾಟಗಾರರ ಬಂಧನ ಖಂಡಿಸಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ.

Koppal News

ಮಾನವಹಕ್ಕುಗಳ ಹೋರಾಟಗಾರರ ಬಂಧನ ಖಂಡಿಸಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ ನಡೆಸಿದವು. ಕೊಪ್ಪಳದ ಬಸವೇಶ್ವರ ಸರ್ಕಲ್ ನಲ್ಲಿ ಪ್ರತಿಭಟನೆ‌ ಮಾಡಿದ ಸಂಘಟಕರು ಮಾನವ ಹಕ್ಕುಗಳ ಹೋರಾಟಗಾರರ ವಿರುದ್ದದ ಸುಳ್ಳು ಆಪಾದನೆಗಳನ್ನು ಹಿಂಪಡೆಯಲು ಹಾಗೂ ಬಿಡುಗಡೆಗೆ ಆಗ್ರಹ…

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮದ್ಯ ಪ್ರವೇಶಕ್ಕೆ ಆಗ್ರಹಿಸಿದ ಹೋರಾಟಗಾರರು. ಸರಕಾರದ ಪ್ರಭುತ್ವ ವಿರೋಧಿ, ಜನವಿರೋಧಿ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಹೋರಾಟಗಾರರಿಗೆ ಅರ್ಬನ್ ನಕ್ಸಲ್ ಪಟ್ಟ ಕಟ್ಟುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು ಸರಕಾರದ ವಿರುದ್ದ ದಿಕ್ಕಾರ ಕೂಗಿದರು.

https://youtu.be/PE0FrJT5NJw

ವಿಠ್ಠಪ್ಪ ಗೋರಂಟ್ಲಿ, ಮಹಾಂತೇಶ ಕೊತಬಾಳ ಸೇರಿದಂತೆ ವಿವಿಧ ಪ್ರಗತಿ ಸಂಘಟನೆಗಳ ಮುಖಂಡರು ಭಾಗೀಯಾಗಿದ್ದರು.

ಹೋರಾಟಗಾರರನ್ನು ಧಮನಿಸುತ್ತಿರುವ ಸರಕಾರದ ನೀತಿಯನ್ನು ಖಂಡಿಸಿ ಗಂಗಾವತಿಯಲ್ಲೂ ಪ್ರತಿಭಟನೆ ನಡೆಸಲಾಯಿತು. ಕಾರ್ಮಿಕ ಮುಖಂಡ ಹೋರಾಟಗಾರ ಜೆ.ಭಾರದ್ವಾಜ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

Please follow and like us:
error