ಹೋರಾಟಕ್ಕೆ ಸಿಕ್ಕ ಜಯ

Koppal News

ಇಂದು 2 ಗಂಟೆಗೆ ಹಿಟ್ನಾಳ ಟೋಲ್ ಗೇಟ್ ನಲ್ಲಿ ವಿಕಲಚೇತನರು ತಮ್ಮ ವಿಕಲತೆಗೆ ತಕ್ಕಂತೆ ಮಾರ್ಪಾಡು ಮಾಡಿರುವ ವಾಹನಗಳಿಗೆ ದೇಶದ ರಾಜ್ಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಉಚಿತ ಪ್ರವೇಶವಿದ್ದು,ರಾಜ್ಯದ ಯಾವ ಜಿಲ್ಲೆಯಲ್ಲಿ ಯಾವುದೇ ತೊಂದರೆಯಾಗದೇ ಕೇವಲ ಕೊಪ್ಪಳ ಜಿಲ್ಲೆಯ ಹಿಟ್ನಾಳ, ಶಹಪೂರ ಮತ್ತು ಹೆಮಗುಡ್ಡ ಟೋಲ್ ನಲ್ಲಿ ವಿನಾಯತಿ ನೀಡದೇ ಒತ್ತಾಯ ಪೂರಕವಾಗಿ ಹಣ ವಸೂಲಿ ಮಾಡುವುದು ಜೊತೆಗೆ ಟೋಲ್ ಗೇಟ್ ನ ಬಳಿ ವಿವಿಧ ವಾಹನಗಳಿಗೆ ಇರುವ ವಿನಾಯತಿಯ ನಾಮಪಲಕದಲ್ಲಿ ವಿಕಲಚೇತನರು ತಮ್ಮ ವಿಕಲತೆಗೆ ಅನುಗುಣವಾಗಿ ಮಾರ್ಪಾಡು ಮಾಡಿರುವ ವಾಹನಗಳಿಗೆ ವಿ‌‌ನಾಯತಿ ಇದೇ ಎಂದು ನಾಮಪಲಕದಲ್ಲಿ ಇರುವುದಿಲ್ಲ. ನಾಮಪಲಕದಲ್ಲಿ ವಿಕಲಚೇತನ ವಾಹನಗಳಿಗೆ ವಿನಾಯತಿ ಇದೇ ಎಂದು ಹಾಕುವಂತೆ ದಿನಾಂಕ 06.09.2018 ರವರೆಗೆ ಸಮಯ ನೀಡಲಾಗಿದ್ದರು ಕೂಡಾ ಯಾವುದೇ ಬದಲಾವಣೆ ಮಾಡಿದ್ದಿಲ್ಲ ಇದನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ವಿಕಲಚೇತನರು ಮಾರ್ಪಾಡು ಮಾಡಿರುವ ವಾಹನಗಳಿಗೆ ವಿನಾಯತಿ ಇದೇ ಎಂದು ನಾಮಪಲಕದಲ್ಲಿ ಹಾಕುವಂತೆ ಸೆ.೬ ರ ವರೆಗೆ ಸಮಯ ನಿಗಧಿ ಮಾಡಿದರು ಕೂಡಾ ಟೋಲ್ ಸಿಬ್ಬಂದಿಯವರು ನಾಮಪಲಕದಲ್ಲಿ ಯಾವುದೇ ರೀತಿಯಲ್ಲಿ ವಿಕಲಚೇತನರಿಗೆ ವಿನಾಯತಿ ಇದೇ ಎಂದು ನಾಮಪಲಕ ಹಾಕಿದ್ದಿಲ್ಲ . ಆದರೆ ಸೆ.೮ ರ ಮಧ್ಯಾಹ್ನ ೨ ಗಂಟೆಗೆ ಪ್ರತಿಭಟನೆ ಮಾಡುತ್ತವೆ ಎಂದು ಎಚ್ಚರಿಕೆ ಕೊಟ್ಟ ಮೇಲೆ ಇದನ್ನು ಗಂಭೀರವಾಗಿ ಪರಿಗಣಿಸಿದ ಟೋಲ್ ಸಿಬ್ಬಂದಿಯವರು ಇಂದು ಅವಸರವಾಗಿ ನಾಮಪಲಕದಲ್ಲಿ ವಿಕಲಚೇತನರಿಗೆ ವಿನಾಯತಿ ಇದೇ ಎಂದು ಹಾಕಿದ್ದಾರೆ. ಇದು ನಿಜಕ್ಕೂ ಬೀರಪ್ಪ ಅಂಡಗಿ ಹಾಗೂ ಅವರ ಸಂಘಟನೆಯವರ ಹೋರಾಟಕ್ಕೆ ಸಿಕ್ಕ ಜಯ‌

Please follow and like us:
error