ಹೊಸ ವರ್ಷದ ಸ್ವಾಗತಕ್ಕೆ ತಯಾರಿ 

ಕೊಪ್ಪಳದ ಭಾಗ್ಯನಗರದಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಸಂಭ್ರಮದ ತಯಾರಿ ೨೦೧೬ ರ ಕೊನೆಯ ದಿನದಂದು ಹೊಸ ವರ್ಷದ ಸ್ವಾಗತಕ್ಕೆ ನಾನಾ ತಯಾರಿಗಳು ನಡೆಯುತ್ತಿವೆ. ದಿನಾಲೂ ಕುಡಿಯುವವರು ಇವತ್ತೊಂದಿನ ರಜ ಮಾಡುವ ಯೋಚನೆಯಲ್ಲಿದ್ದರೆ… ಸೀಸನಲ್ ಕುಡುಕರು ಸ್ಥಳದ ಹುಡುಕಾಟದಲ್ಲಿದ್ದಾರೆ. ಅದನ್ನು ಹೊರತು ಪಡಿಸಿ ಬೇರೆ ರೀತಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಲೂ ಸಿದ್ದತೆಗಳು ನಡೆಯುತ್ತಿವೆ. ಎಸ್ ಎಂಎಸ್, ಟ್ವಿಟರ್, ಫೇಸ್ ಬುಕ್, ವಾಟ್ಸ್ ಪ್ ಕಾಲದಲ್ಲಿ ಗ್ರೀಟಿಂಗ್ ಕಾರ್ಡಗಳ ಮಾರಾಟ ಗಣನೀಯವಾಗಿ ಕುಸಿದಿದ್ದು ಮಾರಾಟವೇ ಇಲ್ಲ ಎನ್ನುತ್ತಿದ್ದಾರೆ ಅಂಗಡಿಕಾರರು. ನಗರದ ವಿವಿಧ ಬೇಕರಿ ಅಂಗಡಿಗಳಲ್ಲಿ ನಾನಾ ನಮೂನೆಯ ಕೇಕ್ ಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಶ್ರೀ ಲಕ್ಷೀ ವೆಂಕಟೇಶ್ವರ ಸ್ವೀಟ್ಸ್ ಬೇಕರಿಯಲ್ಲಿ ಕೇಕ್ ನಲ್ಲಿ ಹಲವಾರು ಆಕೃತಿಗಳನ್ನು ರಚಿಸಲಾಗಿದೆ..

Please follow and like us:
error