ಹೊಸಪೇಟೆ ಸಂಪೂರ್ಣ ಬಂದ್‌:​ಕಾಲುವೆಗಳಿಗೆ ನೀರು ಹರಿಸಲು ಆಗ್ರಹ

 

ಹೊಸಪೇಟೆ: ತುಂಗಭದ್ರ ಜಲಾಶಯದಿಂದ ಬಸವರಾಯ ಹಾಗೂ ತುರ್ತಾ ಬೆಲ್ಲಾ ಕಾಲುವೆಗಳಿಗೆ ನೀರು ಹರಿಬಿಡುವಂತೆ ಆಗ್ರಹಿಸಿ ರೈತರು ಕರೆ ನೀಡಿರುವ ಹೊಸಪೇಟೆ ಬಂದ್‌ಗೆ ಇಂದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಮುಖವಾಗಿ ಈ ಕಾಲುವೆಗಳ ವ್ಯಾಪ್ತಿಯಲ್ಲಿ ಭತ್ತ-ಬಾಳೆ ಸೇರಿದಂತೆ ಇನ್ನಿತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಆದ್ದರಿಂದ ಕಾಲುವೆಗಳಿಗೆ ನೀರು ಹರಿಸಿ ಎಂದು ಈ ಭಾಗದ ರೈತರು ಆಗ್ರಹಿಸಿದ್ದರು. ಬಂದ್‌ ಹಿನ್ನೆಲೆ ಇಂದು ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ವ್ಯಾಪಾರ ವಹಿವಾಟಿನ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಅಂಗಡಿ ಮುಗ್ಗಟ್ಟುಗಳ ಬಾಗಿಲು ಮುಚ್ಚಲಾಗಿದೆ. ಇನ್ನು ಸಂಚಾರ ವ್ಯವಸ್ಥೆಯನ್ನು ಸಹ ಬಂದ್ ಮಾಡಲಾಗಿದೆ. ಬಂದ್ ಹಿನ್ನೆಲೆ ನಗರದ ಕೆಲ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ. ಪಟ್ಟಣದ ಒಳ ಬರುವ ಬಸ್‌ಗಳನ್ನು ಬದಲಿ ಮಾರ್ಗದ ಮೂಲಕ ತೆರಳಲು ಅನುಕೂಲ ಮಾಡಲಾಗಿದೆ. 

 ಇನ್ನು ಬಂದ್‌ಗೆ ಕರೆ ಕೊಟ್ಟಿರುವ ರೈತ ಸಂಘದ ಕಾರ್ಯಕರ್ತರು ನಗರದಲ್ಲಿಂದು ಪ್ರತಿಭಟನೆ ನಡೆಸಲಿದ್ದಾರೆ. ಶಾನಭಾಗ್ ವೃತ್ತದಲ್ಲಿ ಧರಣಿ ಕೂರಲಾಗಿದೆ.ಇನ್ನು  ಹೊಸಪೇಟೆ ಬಳಿಯ ಕೊಂಡನಾಯಕನ ಹಳ್ಳಿ ಮತ್ತು ಮಲ್ಲಪ್ಪನಗುಡಿ ಗ್ರಾಮದ ಬಳಿಯ ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

Leave a Reply