You are here
Home > Koppal News > ಹೊನ್ನುಣಿಸಿ ಕ್ರಾಸ್ ಅಚ್ಚುಕಟ್ಟು ನಾಟಕ ಪ್ರದರ್ಶನ

ಹೊನ್ನುಣಿಸಿ ಕ್ರಾಸ್ ಅಚ್ಚುಕಟ್ಟು ನಾಟಕ ಪ್ರದರ್ಶನ

ಮನಸ್ಸಿನ ಕ್ರಾಸ್, ಜೀವನದ ಕ್ರಾಸ್, ಸಂಬಧದ ಕ್ರಾಸ್, ಈ ಪ್ರದರ್ಶನದಲ್ಲಿರುವ ಸಾಕಷ್ಟು ಅಂಶಗಳು ಮತಭೇದ, ಬ್ರಷ್ಟಾಚಾರ, ಪ್ರಸ್ತುತ ಯುವಕರ ಮೇಲಿನ ಮಾನಸಿಕ ಒತ್ತಡಗಳು, ಗ್ರಾಮಿಣ ಪ್ರದೇಶದಲ್ಲಿ ನಡೆಯುವ ಕುಟುಂಬೇತರ ಘಟನೆಗಳನ್ನ ರಂಗಶಾಲೆಯ ನಟರುಗಳು ತಮ್ಮ ಸ್ವಂತ ಕಥೆಗಳ ಆಧಾರಿತ ತಮ್ಮ ಪ್ರತಿರೋಧಗಳ ‘ಹೊನ್ನುಣಿಸಿ ಕ್ರಾಸ್’ ಬಹಳ ಅಚ್ಚುಕಟ್ಟಾಗಿ ಯಾವುದೇ ಆಡಂಬರದ ಸಂಗೀತವಿಲ್ಲದೆ ದೇಹ, ಭಾವ, ಕವಿತೆಗಳು, ದೃಶ್ಯಸಂಯೋಜನೆಗಳು ನಮ್ಮನ್ನು ಸೆಳೆದವು ಎಂದು ಸಾಹಿತಿ ಕಳಕೇಶ ಬಡಿಗೇರ ನುಡಿದರು.ನಾಟಕದ ಕೊನೆಯ ದೃಶ್ಯದ ಮಾತು, ಗಂಗೆಯಲ್ಲಿ ಮುಳುಗಿದವರು ನಮ್ಮವರು, ಆದರೆ ದೋಣಿಗೆ ತೂತು ಹಾಕಿದವರು ಯಾರು ನೀಜ ಹೇಳು ಎಂಬ ಮಾತು ಎಲ್ಲರ ಮನಮುಟ್ಟಿತು. ನಿನ್ನೆ ಚಿಕ್ಕಬಿಡನಾಳ ಗ್ರಾಮದ ವಿಸ್ತಾರ್ ರಂಗಶಾಲೆಯ ರಂಗಕಲಿಕಾರ್ತಿಗಳಿಂದ ಮೂರುದಿನಗಳ ಪ್ರದರ್ಶನ ಯಶಸ್ವಿಯಾಗಿ ಕೊನೆಯ ದಿನದ “ಹೊನ್ನುಣುಸಿ ಕ್ರಾಸ್” ನಾಟಕ ಪ್ರದರ್ಶನ ಕಂಡಿತು. ಅದರಲ್ಲೂ ವಿಶೇಷವಾಗಿ ಯುವಕನ್ನು, ಮಕ್ಕಳನ್ನು, ಮಾತನಾಡುವಂತೆ ಪ್ರದರ್ಶಿಸಲ್ಪಟ್ಟಿತು. ಥೇಟರ್ ಮೇಕಿಂಗ್ ಪ್ರೋಡಕ್ಷನ್ ಜವಾಬ್ದಾರಿ ಹೊತ್ತ ಅನೀಶ್À ವಿಕ್ಟರ್, ಸಹ ನಿರ್ದೇಶಕ ಲಕ್ಷ್ಮಣ ಮತ್ತೂರ. ಸಮರ್ಥವಾಗಿ ತಮ್ಮ ಜವಾಬ್ದಾರಿಯನ್ನ ನಿಬಾಯಿಸಿದ್ದಾರೆ. ಪ್ರದರ್ಶನ ಮುಗಿದ ನಂತರ ಸಮುವಾದದಲ್ಲಿ ಕೊಪ್ಪಳದ ಹಿರಿಯ ಕಿರಿಯ ಸಾಹಿತಿಗಳು, ಶಿಕ್ಷಕರು, ಕಲಾವಿದರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಅಲ್ಲಮಪ್ರಭು ಬೆಟದೂರು, ವಿಜಯಲಕ್ಷ್ಮಿ ಕೊಟಗಿ, ಸುರೇಶ ಕಂಬಳಿ, ಗುರುರಾಜ ಹೊಸಪೇಟೆ, ವೀರೇಶ ಮ್ಯಾಗಳೆ, ಪುತ್ರಪ್ಪ ಶಿವಶಿಂಪಿ, ಮರಿಯಪ್ಪ ಪೂಜಾರ, ವೀರುಪಾಕ್ಷಪ್ಪ ಯತ್ನಟ್ಟಿ, ಮಂಗಳೆ ದೆಸಾಯಿ ಹಿರಿಯರಾದ ನೀಲಪ್ಪ ವಕ್ರಿ, ಸಂಸ್ಥೆಯ ಉಪನಿರ್ದೇಶಕರಾದ ಆಶಾ ವಿ, ಯುಸೇಫ , ರೇಣುಕಾ ಹೊನ್ನಳ್ಳಿ, ಶರಣಪ್ಪ ಗೊಂಡಬಾಳ, ಸುಂಕಪ್ಪ ಮೀಸಿ, ಅಕ್ಷಯ ಬಿ, ಕರಿಯಪ್ಪ, ಅನೇಕರು ಭಾಗವಹಿಸಿದ್ದರು.

Top