ಹೈ. ಕರ್ನಾಟಕದ ವಿಮೋಚನೆಗೆ ಕಾರಣಿಭೂತರಾದ ಪಟೇಲ: ಅಮರೇಶ ಕರಡಿ

ಕೊಪ್ಪಳ: ನಗರದಲ್ಲಿ ೩೧ ನೇ ಅಕ್ಟೋಬರ ೨೦೧೭ ರಂದು ಬೆಳಿಗ್ಗೆ ೭.೩೦ ಕ್ಕೆ ಭಾರತೀಯ ಜನತಾ ಪಾರ್ಟಿಯಿಂದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಬಾಯಿ ಪಟೇಲರ ಜನ್ಮದಿನದ ಪ್ರಯುಕ್ತ ಏಕತಾ ಓಟವನ್ನು ಶ್ರೀ ಗೌರಿಶಂಕರ ದೇವಸ್ಥಾನದಿಂದ ಕೇಂದ್ರೀಯ ಬಸ್ ನಿಲ್ದಾಣದವರೆಗೆ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಮುಂಖಂಡ ಸಂಗಪ್ಪ ವಕ್ಕಳದ ಮಾತನಾಡಿ ಭಾರತದ ಅಖಂಡತೆಯಲ್ಲಿ ಏಕತೆಯನ್ನು ಸಾಧಿಸುವಲ್ಲಿ ಪಟೇಲ ಶ್ರಮ ಅಸ್ಮರಣೀಯವಾಗಿದೆ. ೧೯೧೮ ರಲ್ಲಿ ತಮ್ಮ ವಕೀಲ ವೃತ್ತಿಯನ್ನು ತ್ಯಜೀಸಿ ಸ್ವತಂತ್ರ ಹೋರಾಟಕ್ಕೆ ಧುಮಿಕಿದರು. ಗಾಂಧೀಜಿಯರ ಮೇಲೆ ಪ್ರಭಾವಿತರಾಗಿ ಅವರ ಜೊತೆಗೂಡಿ ಚಳುವಳಿಯಲ್ಲಿ ನೂತನ ಮಾರ್ಗಗಳ ಪ್ರಯೋಗದಿಂದ ಹೋರಾಟದಲ್ಲಿ ಕಿಚ್ಚು ಹಚ್ಚಿದ ಧೀಮಂತ ಸೇನಾನಿಯಾಗಿದ್ದಾರೆ. ಭಾರತ ಸ್ವತಂತ್ರ ನಂತರ ೫೬೨ ದೇಶಿಯ ಸಂಸ್ಥಾನಗಳಿದ್ದವು. ಅವುಗಳೆಲ್ಲವನ್ನು ರಾಜರುಗಳು ಆಳುತ್ತಿದ್ದರು. ೧೯೪೭ ರ ಸ್ವತಂತ್ರ್ಯ ಕಾಯಿದೆಯಂತೆ ಸಂಸ್ಥಾನಗಳು ಭಾರತ ಅಥವಾ ಪಾಕಿಸ್ತಾನಕ್ಕೆ ಯಾವುದಾದರೊಂದಕ್ಕೆ ಸೇರಿಕೊಳ್ಳುವ ಇಲ್ಲವೇ ಸ್ವತಂತ್ರವಾಗಿ ಉಳಿಯುವ ಮಾನ್ಯತೆ ಹೊಂದಿದ್ದ ಸಮಯದಲ್ಲಿ ದೇಶಿಯ ರಾಜ್ಯಗಳು ಪ್ರತೇಕವಾಗಿ ಉಳಿಯುವುದರಿಂದ ದೇಶದ ಐಕ್ಯತೆ ಮತ್ತು ಸಮಗ್ರತೆಗೆ ದಕ್ಕೆ ಉಂಟಾಗಲಿದೆ. ಮತ್ತು ದೇಶಿಯ ಸಂಸ್ಥಾನಗಳು ಪ್ರತೇಕತೆಯಲ್ಲಿದ್ದರೆ, ಲಕ್ಷಾಂತರ ಭಾರತೀಯರ ಮೇಲೆ ಯುದ್ಧ ಸಾರಿದಂತೆ ಎಂದು ಅರಿತ ಪಟೇಲರು ದೇಶಿಯ ಸಂಸ್ಥಾನಗಳ ವಿಲೀನ ೧೯೪೭ ರ ಸೆಪ್ಟೆಂಬರ್ ೧೩ ರಂದು ಎಲ್ಲಾ ದೇಶಿಯ ರಾಜ್ಯಗಳಿಗೆ ಸುತ್ತೋಲೆ ಕಳುಹಿಸಿದ್ದರ ಪರಿಣಾಮವಾಗಿ ಹಾಗೂ ಒಕ್ಕೂಟಕ್ಕೆ ಸೇರುವ ರಾಜರಿಗೆ ರಾಜಧನ ಕೊಡಲಾಗುವುದು ಎಂದು ಕರೆ ನೀಡಿದ್ದರ ಸಲುವಾಗಿ ಕೆಲವೊಂದು ರಾಜ್ಯಗಳು ಭಾರತ ಒಕ್ಕೂಟ ಸೇರಿಕೊಂಡವು. ಆದರೆ ಒಕ್ಕೂಟದಿಂದ ಹೊರಗೂಳಿವ ರಾಜ್ಯಗಳಿಗೆ ಅಪಾಯದ ಘೋಷಣೆ ಮೊಳಗಿಸಿದ್ದರು. ಈ ರೀತಿ ದೇಶದ ಅಖಂಡತೆಯಲ್ಲಿ ಸಾರ್ವಭೌಮತ್ವ ಸ್ಥಾಪಿಸುವಲ್ಲಿ ಪ್ರಮುಖ ಸ್ಥಾನವಹಿಸಿದ್ದಾರೆಂದರು.
ಕೊಪ್ಪಳ ವಿಧಾಸಭಾ ಭೂತಮಟ್ಟದ ಅಧ್ಯಕ್ಷ ಅಮರೇಶ ಕರಡಿ ಮಾತನಾಡಿ ಪಟೇಲರು ೧೮೭೫ ಅಕ್ಟೋಬರ್ ೩೧ ರಂದು ಗುಜರಾತಿನ ನಾಡಿಯಾಡ್ ಎಂಬ ರೈತ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಜವೇರಬಾಯಿ ೧೮೫೭ ರಲ್ಲಿ ಸಿಪಾಯಿದಂಗೆಯಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿಯೊಂದಿಗೆ ಹೋರಾಡಿದ್ದರು. ಬಾಲ್ಯದಲ್ಲಿಯೇ ಹೋರಾಟವನ್ನು ಮೈಗೂಡಿಸಿಕೊಂಡಿದ್ದ ಪಟೇಲರು ಉತ್ತರ ಪ್ರದೇಶದ ಖೈರ ಜಿಲ್ಲೆಯಲ್ಲಿ ೧೯೧೭ ರಲ್ಲಿ ಪ್ರವಾಹ ಪೀಡಿತ ೪೨೫ ಗ್ರಾಮಗಳಲ್ಲಿ ಪರಿಹಾರ ಕಾರ್ಯ ಕೈಗೊಂಡು ರೈತರ ಕಂದಾಯ ಮಾಫಿ, ಅಹಮದಾಬಾದ ನ ಕಾರ್ಮಿಕರ ಪರವಾಗಿ ಹೋರಾಟ, ಗುಜರಾತನಲ್ಲಿ ಪ್ಲೇಗ್ ಆವರಿಸಿದಾಗ ಪರಿಹಾರ ಕಾರ್ಯ, ನಿರಾಶ್ರೀತರ ಸಮಸ್ಯೆಗಳ ನಿವಾರಣೆ, ಬಾರ್ದೋಲಿ ರೈತ ಸತ್ಯಾಗ್ರಹ, ಬಿಹಾರದ ಭೂಕಂಪ ಮತ್ತು ಗುಜರಾತ ಪ್ರವಾಹ ಪೀಡಿತರಿಗೆ ನೆರವು ನೀಡಿರುವುದು ಇದು ಪಟೇಲರಿಗೆ ರಾಷ್ಟ್ರನಾಯಕನ ಕೀರ್ತಿ ತಂದು ಕೊಟ್ಟಿತು. ನಂತರ ಸರ್ದಾರ ಎಂಬ ಬಿರುದನ್ನು ಸಹ ಗಾಂಧೀಜಿಯವರು ಪಟೇಲರಿಗೆ ನೀಡಿದ್ದರು ಎಂದರು. ಮುಂದುವರೆದು ಮಾತನಾಡಿದ ಅವರು ೧೯೪೮ ಸೆಪ್ಟಂಬರ ೧೨ ರಂದು ಪ್ರಧಾನಿ ನೆಹರು ರವರ ಸಂಪುಟಸಭೆ ನಡೆಸಿ ಹೈದರಾಬಾದ ಸಂಸ್ಥಾನ ಮೇಲೆ ಸಶಸ್ತ್ರ ಕ್ರಮ ತೆಗೆದುಕೊಳ್ಳಲು ತಿರ್ಮಾನಿಸಿ ಸರ್ಕಾರದ ಸೇನೆಯ ಮುಖಾಂತರ ದಾಳಿ ನಡೆಸಿದ್ದರ ಪರಿಣಾಮವಾಗಿ ಹೈದರಬಾದ ಕರ್ನಾಟಕದ ವಿಮೋಚನೆಗೆ ಕಾರಣಿಕರ್ತರಾಗಿದ್ದಾರೆ ಎಂದರು.
ಈ ಏಕತಾ ಓಟದಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಜು ಬಾಕಳೆ, ನಗರ ಮಂಡಲ ಅಧ್ಯಕ್ಷ ಶಿವಕುಮಾರ ಹಕ್ಕಾಪಕ್ಕಿ, ಗ್ರಾಮೀಣ ಮಂಡಲ ಅಧ್ಯಕ್ಷ ತೋಟಪ್ಪ ಕಾಮನೂರ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ವಾಣಿಶ್ರೀ ಮಠದ, ಶ್ಯಾಮಲಾ ಕೋನಾಪೂರ, ಮುಖಂಡರಾದ ವಿರುಪಾಕ್ಷಯ್ಯ ಗದುಗಿನಮಠ, ಮಹಾಂತೇಶ ಪಾಟೀಲ ಮೈನಳ್ಳಿ, ಉಮೇಶ ಕುರುಡೇಕರ, ಮಂಜುನಾಥ ಪಾಟೀಲ ಹಂದ್ರಾಳ, ಮಲ್ಲಪ್ಪ ಬೇಲೆರಿ, ಶ್ರವಣ ಬಂಡಾನವರ, ಬಿ.ಜಿ ಗದುಗಿನಮಠ, ಗಣೇಶ ಹೊರತಟ್ನಾಳ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ, ಇನ್ನೂ ಅನೇಕರು ಭಾಗವಹಿಸಿದ್ದರು.

Please follow and like us:
error